ನಗು – ಸಂಸ್ಕೃತಿ
ಹುಟ್ಟಿದಿವಿ, ಹುಟ್ಟಿದ್ದಕ್ಕೆ ಬದುಕಬೇಕು
ಬದುಕೋದಿಕ್ಕಾಗಿ ಚೆನ್ನಾಗಿರಬೇಕು
ಚೆನ್ನಾಗಿರಬೇಕು ಅಂದರೆ ನಗಬೇಕು||
ನಗು ತುಟಿಯಂಚಲ್ಲಿ ಮಾತ್ರವಲ್ಲ
ಹೃದಯದ ತುಂಬಾ ಹರಡಬೇಕು
ನೆಮ್ಮದಿ ನಗುವಿನ ಕೈ ಹಿಡಿಯಬೇಕು||
ಇದ್ದುದರಲ್ಲಿ ಇನ್ನೊಬ್ಬರಿಗೆ ಇಡುವಷ್ಟಾದರೂ
ಹೃದಯ ಸಕಲ ಸಂಪನ್ನವಾಗಬೇಕು
ಸಹೃದಯತೆ ಸಂಸ್ಕೃತಿಯಾಗಬೇಕು||
‘ನಾನು’ ಎಂಬುದ ಮರೆತು ನಾವಾಗಬೇಕು
ಸಕಲರೊಳಗೊಂದಾಗಿ ಸರ್ವಸ್ವವೂ ಶಿವನಾಗಬೇಕು
ಲಯದೊಳೊಂದಾಗಿ ಭವಪಾಶದಿಂ ಮುಕ್ತರಾಗಬೇಕು||
ಸೌಜನ್ಯ ದತ್ತರಾಜ