ನನ್ನೊಳಗಿನ ಪ್ರೇಮ
ಮೌನರಾಗಕ್ಕೆ
ಸಂಗೀತದ ಹಂಗೇಕೆ
ಕಲ್ಪನೆಯ ಕೂಸನ್ನು
ಕಾಪಾಡುವ ಕಷ್ಟವೇಕೆ
ನನ್ನೊಳಗೆ ಮಾತ್ರವೇ
ಹುಟ್ಟಿದ ಪ್ರೇಮಕ್ಕೆ
ಕಾರಣಗಳ ಕೊಡುವ
ಜಂಜಾಟವೇಕೆ!
ಇದು
ಏಕಮುಖ ಪ್ರೇಮದ
ಒಲವೋ, ಬಲವೋ
ಅಥವಾ ಸೋಲಿರದ
ಗೆಲುವೂ ಅಲ್ಲದ ಗೆಲುವೋ
ಸ್ವಾಭಿಮಾನ ಬಿಟ್ಟು ಕೊಡದ
ಅಹಂಕಾರದ ಮದವೋ
ಬೆಚ್ಚಗೆ ಕಟ್ಟಿಕೊಂಡ ಅಥವಾ
ಸಿಕ್ಕಿಕೊಂಡ ಬಲೆಯೋ?
ಆದರೂ
ಕಪ್ಪೆ ಚಿಪ್ಪೊಳಗಿನ
ಮುತ್ತಿನ ಬೆಲೆಯೇ ಬೇರೆ
ಮುತ್ತು ಪಕ್ವವಾಗದೇ
ಚಿಪ್ಪು ತೆರೆದರೆ, ಸುಮ್ಮನೆ ಹೊರೆ
ಪ್ರೇಮ ನಿವೇದಿಸಿದರಷ್ಟೇ
ತೊಡಕು, ತೊಂದರೆ
ಅದು ನಮ್ಮದೇ ಕನಸು
ಹೇಳದೇ ಸುಮ್ಮನಿದ್ದರೆ!
ಸೌಜನ್ಯ ದತ್ತರಾಜ