ನನ್ನ ಪ್ರೀತಿಯ ಸರ್ಕಾರಿ ಶಾಲೆ
ಸರ್ಕಾರಿ ಶಾಲೆಯಲ್ಲಿ ನಾನು ಓದುವೆ
ಅಪ್ಪಾ ಅಮ್ಮನಿಗೆ ಹೆಸರನು ತರುವೆ
ಈ ಶಾಲೆ ಅಂದರೆ ನನಗಿಷ್ಟ,,,
ರಜೆಯು ಬಂದರೆ ಬಲುಕಷ್ಟ.!!೧!!
ನಮ್ಮನ್ನು ಕಂಡರೆ ಗುರುಗಳಿಗಂತು
ತಮ್ಮ ಮಕ್ಕಳಂತೆ ಪ್ರೀತಿಯಿದೆ.
ಜಾತಿ, ಧರ್ಮದ ಕೊಳಕಿನ ಬ್ರಾಂತು
ಕಿತ್ತು ಎಸೆಯುವ ಶಕ್ತಿಯಿದೆ.!!೨!!
ಓದುತ ಬರೆಯುತ ದಿನವೆಲ್ಲಾ,,
ಶಿಸ್ತು,ಸಂಯಮವ ಮರೆಯಲ್ಲ
ಗುರುಗಳೆ ನಮಗೆ ಇಲ್ಲೆಲ್ಲಾ,,,
ಜ್ಞಾನ ಹಂಚುವರು ನಮಗೆಲ್ಲ.!!೩!!
ಹಲವು ರೀತಿಯ ಪಾಠವಿದೆ
ಕುಣಿದು ಕುಪ್ಪಳಿಸೊ ಆಟವಿದೆ
ನಮ್ಮ ಸಂಸ್ಕೃತಿಯ ಮಂತ್ರವಿದೆ
ಬದುಕು ಗೆಲ್ಲುವ ತಂತ್ರವಿದೆ.!!೪!!
ತಂದೆ ತಾಯಿಗೆ ನಮ್ಮ ಕಲಿಕೆಯ
ತಿಳಿಸಿ ಹೇಳಲು ಸಭೆಗಳಿವೆ.
ನಾವು ಮಾಡಿದರೆ ತರಲೆ ತೀಟೆಯ
ತಿದ್ದಿ ತೀಡುವ ಮನಗಳಿವೆ.!!೫!!
ಹಸಿವು ನೀಗಿಸುವ ದಾಸೋಹವಿದೆ
ಜ್ಞಾನ ಬೆಳೆಯುವ ವಿಶ್ವಾಸವಿದೆ
ಸರ್ಕಾರಿ ಶಾಲೆಯು ಸುಂದರವು
ಜ್ಞಾನ ಬೆಳೆಸುವ ಮಂದಿರವು.!!೬!!

ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ