ನನ್ನ ಪ್ರೀತಿ ನಾಡು
ಕರುನಾಡು
ನಮ್ಮ ತಾಯ್ನಾಡು
ಇಲ್ಲಿದೆ ಶಿಲೆಗಳ
ಹಳೆಬೀಡು !!೧!!
ಗೊಮ್ಮಟೇಶನ
ನೆಲೆನಾಡು
ಕಾಣಬಹುದಿಲ್ಲಿ
ಹೊರನಾಡು !!೨!!
ಸಹ್ಯಾದ್ರಿಯಲ್ಲಿನ
ದಟ್ಟಕಾಡು
ತುಂಗೆ ಕಾವೇರಿ
ಜನಿಸಿದ ನಾಡು !!೩!!
ಕವಿ ಪುಂಗವರು
ಹುಟ್ಟಿದ ನಾಡು
ಗಂಡುಗಲಿಗಳು
ಮೆಟ್ಟಿದ ನಾಡು !!೪!!
ಪಂಚಲಿಂಗೇಶ್ವರ
ಸ್ವಾಮಿಯ ತಲಕಾಡು
ಸಾಧು – ಸಂತರುಗಳ
ತಪ್ಪಸ್ಸಿನ ಬೀಡು !!೫!!
ಕಲಾ ತಪಸ್ವಿಗಳ
ಔಪಾಸನೆ ನೋಡು
ನಡೆದಾಡುವ
ದೇವರಿದ್ದ ನಾಡು !!೬!!
ಜೊತೆಯಲ್ಲಿದ್ದ
ಅಪ್ಪುದೇವ್ರಾದ ನಾಡು
ಶ್ರೀಗಂಧದ ನಾಡು
ಹೊನ್ನಿನ ಬೀಡು !!೭!!
ವೃಷಬ್ ರ ಕಾಂತಾರ
ಭಕ್ತಿಯ ಗೂಡು
ಪ್ರಪಂಚದಾಧ್ಯಂತ
ಪಸರಿಸಿತು ನೋಡು !!೮!!
ಎಲ್ಲೆಲ್ಲೂ ಹರಡಿದೆ
ಕನ್ನಡದ ಸೊಗಡು
ಎಷ್ಟು ವರ್ಣಿಸಿದರು
ಮುಗಿಯದ ಹಾಡು !!೯!!
೭ ಜನ್ಮಕ್ಕೂ ಇಲ್ಲೇ
ಹುಟ್ಟುವೆನೆಂದು
ಪ್ರತಿಜ್ಞೆಯ ಮಾಡು
ಕನ್ನಡಕ್ಕೀಗ ಜೈಹಾಡು!!೧೦!!
ಗೀತಾಚಲಂ