ನನ್ನ ಮುದ್ದು ಕಂದ

ನನ್ನ ಮುದ್ದು ಕಂದ

ನನ್ನ ಮುದ್ದು ಕಂದನ ನಗುವಿಗೆ
ವೀಣಾ ವಾಣಿಯು ಮುನಿಸಿದೆ……..|೨|
ನನ್ನ ಕಂದನ ಹಾಗೆ ನಗಲು ಬರಲು…|೨|

ನನ್ನ ಮುದ್ದು ಕಂದನ ನಡಿಗೆಗೆ
ನಡೆವಾ ನವಿಲು ಮುನಿಸಿದೆ…………|೨|
ನನ್ನ ಕಂದನ ಹಾಗೆ ನಡೆಲು ಬರಲು…|೨|

ನನ್ನ ಮುದ್ದು ಕಂದನ ಹಾಡಿಗೆ
ಹಾಡುವ ಕೋಗಿಲೆ ಮುನಿಸಿದೆ…….|೨|
ನನ್ನ ಕಂದನ ಹಾಗೆ ಹಾಡ ಬರಲು…|೨|

ನನ್ನ ಮುದ್ದು ಕಂದನ ನೋಟಕೆ
ನೋಡುವ ನಕ್ಷತ್ರ ಮುನಿಸಿದೆ………..|೨|
ನನ್ನ ಕಂದನ ಹಾಗೆ ನೋಡ ಬರಲು…|೨|

ಪ್ರೇಮಕವಿ ಗುಡ್ಡಪ್ಪ. ಬಿ
ಉಜ್ಜಿನಿ

Related post

Leave a Reply

Your email address will not be published. Required fields are marked *