ನಮ್ಮಮ್ಮನ ಮನಸು

ನಮ್ಮಮ್ಮನ ಮನಸು

ನವಮಾಸದಲಿ ಅಮ್ಮನ ಗರ್ಭದಿ
ಇದ್ದೆವು ನಾವು ಹೇಗಯ್ಯ,,?
ಒದೆಯುತಲಿದ್ದರು,ಉರುಳುತಲಿದ್ದರು
ಅವಳ ತಾಯ್ತನ ನೊಡಯ್ಯ
ಅಮ್ಮನ ಮನಸೆ ಹೀಗೆ
ಋಣತೀರಿಸುವುದು ನಾ ಹೇಗೆ.?!!೧!!

ಭೂಮಿಗೆ ನಾವು ಕಾಲಿಡುವಾಗ
ತಾಯಿಗೆ ನರಕದ ದರ್ಶನವು
ನಮ್ಮನು ಕಂಡ ಕೂಡಲೆ ಅವಳಿಗೆ
ಎಲ್ಲವ ಮರೆಯುವ ತನುಮನವು
ಅಮ್ಮನ ಮನಸೆ ಹೀಗೆ
ಋಣತೀರಿಸುವುದು ನಾ ಹೇಗೆ.?!!೨!!

ಎಲ್ಲಿಗೆ ಬಂದೊ, ಏತಕೆ ಬಂದೊ
ಯಾವುದು ನಮಗೆ ಅರಿವಿಲ್ಲ
ಹಸಿವಾದಾಗ ಹರುಚಿತಲಿದ್ದೊ
ಮೊಲೆಹಾಲಿಟ್ಟರೆ ಸದ್ದಿಲ್ಲ
ಅಮ್ಮನ ಮನಸೆ ಹೀಗೆ
ಋಣತೀರಿಸುವುದು ನಾ ಹೇಗೆ.?!!೩!!

ಮೈಯನು ತೊಳೆದು,ಕಸವನು ಬಳಿದು
ಮಾಡುವಳಲ್ಲ ಸಿಂಗಾರ,,
ಹೇಗೆ ಇದ್ದರು, ಹೆಗ್ಗಣವಾದರು
ನಾವೆ, ಅವಳಿಗೆ ಬಂಗಾರ
ಅಮ್ಮನ ಮನಸೆ ಹೀಗೆ,,,
ಋಣತೀರಿಸುವುದು ನಾ ಹೇಗೆ.?!!೪!!

ಅಮ್ಮನ ಮಡಿಲಲಿ ಮಲಗುವುದೆಂದರೆ
ಆಹಾ ಏನೊ ಉಲ್ಲಾಸ,,,
ಕೈತುತ್ತನ್ನು ತಿನ್ನುವುದೆಂದರೆ
ನಮಗು,ನಿಮಗು ಸಂತೋಷ
ಅಮ್ಮನ ಮನಸೆ ಹೀಗೆ
ಋಣತೀರಿಸುವುದು ನಾ ಹೇಗೆ.? !!೫!!

ಅಮ್ಮನ ಸೆರಗು ನಮಗಾದರ
ಬೀಸುವುದಲ್ಲ ತಂಗಾಳಿ
ಮಧ್ಯರಾತ್ರಿಲಿ ಎಚ್ಚರವಾದರ
ಕಾಯುವ ಬಂದ ಹೂಬಳ್ಳಿ
ಅಮ್ಮನ ಮನಸೆ ಹೀಗೆ
ಋಣತೀರಿಸುವುದು ನಾ ಹೇಗೆ.?!!೬!!

ಮಾಂಸದ ಮುದ್ದೆಯ ಮನುಜನ ಮಾಡುವ
ಅಮ್ಮನ ಬದುಕು ಅದ್ಬುತವೊ,,,
ನರಳುತ್ತಿದ್ದರು ಹಾಲನು ಉಣಿಸುವ
ಅಮ್ಮನ ಮನಸು ಅಮೃತವೊ,,,
ಅಮ್ಮನ ಮನಸೆ ಹೀಗೆ
ಋಣತೀರಿಸುವುದು ನಾ ಹೇಗೆ.?!!೭!!

ಎದ್ದರು ಬಿದ್ದರು ಕೈ ಹಿಡಿಯುವಳು
ಅಮ್ಮನೆ,ನಮಗೆ ಮೊದಲ ಗುರು
ಅಮ್ಮನು ಕನ್ನಡ ಧಾರೆಎರೆವಳು
ಬದುಕಿನ ಪಾಠವು ಆಗ ಶುರು
ಅಮ್ಮನ ಮನಸೆ ಹೀಗೆ
ಋಣತೀರಿಸುವುದು ನಾ ಹೇಗೆ.?!!೮!!

ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ

Related post

Leave a Reply

Your email address will not be published. Required fields are marked *