ನವಶಕ್ತಿ ಸ್ವರೂಪಿಣಿ
ನವರೂಪವನೆತ್ತಿ ನಲಿದಿರುವೆ ತಾಯೇ!
ನವಜೀವನಕೊಂದು ಬೆಳಕು ನೀಡಮ್ಮಾ!!
ನಿನ್ನ ಹೆಸರೊಂದಿರಲು ನನ್ನ ಮನದಲ್ಲಿ!
ನನ್ನ ಭಾವದಂಗಳದಿ ಬೆಳಕು ತಾಯೇ!!
ನವರಾತ್ರಿಯಲಿ ಪೂಜಿಪೆನು ನಾ ನಿನ್ನ!
ನೀಡು ನೀ ವರವನು ಸಲಹು ನಮ್ಮನ್ನು!!
ನವಶಕ್ತಿ ದುರ್ಗೆಯು ನೀನಮ್ಮ ತಾಯೇ!
ನವೀನತೆಯ ಭಾಗ್ಯ ನೀಡುವಾ ಮಾಯೆ!!
ನನ್ನೆದೆಯ ಗೂಡಲ್ಲಿ ನೆಲೆಸು ನೀ ಬಾರಮ್ಮ!
ನಾನುನಾನೆಂಬ ಮೋಹವನು ಕಳೆಯಮ್ಮ!!
ನವದುರ್ಗೆ ನೀನಮ್ಮ ನನ್ನ ಉಸಿರಾಗಿರುವೆ!
ನಮಿಸುವೆನು ನಾ ನಿನಗೆ ಬೆಳಕು ನೀಡಮ್ಮ!!
ನಿನ್ನೊಲುಮೆ ನನಗಿರಲು ಬಾಳು ಸೊಗಸಮ್ಮ!
ನನ್ನೆದೆಯ ಗೂಡಲ್ಲಿ ಹಣತೆ ಹಚ್ಚುವೆನಮ್ಮ!!
ನಿನ್ನೊಡಲ ಕೂಸು ನಾ ಕೃಪೆಯ ತೋರಮ್ಮ!!
ನನ್ನದೆಯಾಳದಲಿ ನೀ ನಿಂತು ಸಲಹಮ್ಮ!!
ಸುನೀಲ್ ಹಳೆಯೂರು