ಹಿಂದಿನ ಲೇಖನದಲ್ಲಿ “ಆಲ್ಬರ್ಟ್ ಗೋರಿಂಗ್” ಬಗ್ಗೆ ಪ್ರಸ್ತಾಪಿಸಿದ್ದು ಈಗ ಹೇಳ ಹೊರಟಿರುವುದು ಇನ್ನೊಬ್ಬ ಕ್ರೂರ ನಾಝಿ ನಾಯಕ “ರೀನ್ಹಾರ್ಡ್ ಹೆಡ್ರಿಕ್” ನ ಸಹೋದರ “ಹೈಂಜ್ ಹೆಡ್ರಿಕ್” ಬಗ್ಗೆ. ತನ್ನ ಕೊನೆಯ ಕಾಲದಲ್ಲಿ ಪಶ್ಚಾತಾಪದಿಂದ ಕೊಂಚ ಒಳ್ಳೆಯ ಮಾನವೀಯ ಕೆಲಸವನ್ನು ಮಾಡಿದವ.
ಮೊದಲನೇ ಮಹಾಯುದ್ಧದ ( 1914 -1918 ) ಸೋಲು ಜರ್ಮನಿಯ ಎಲ್ಲೆಡೆ ಅರಾಜಕತೆಯನ್ನು ಸೃಷ್ಟಿಸಿರುತ್ತದೆ. ಕ್ರಮೇಣ ಅಡಾಲ್ಫ್ ಹಿಟ್ಲರ್ 1933 ರಲ್ಲಿ ಜರ್ಮನಿಯ ನಾಯಕನಾಗಿ (ಕುಲಪತಿ) ಆಯ್ಕೆಯಾಗುತ್ತಿದ್ದಂತೆ ನಾಝಿ ಪಾರ್ಟಿ (ಜರ್ಮನ್ ನ್ಯಾಷನಲ್ ಪೀಪಲ್ ಪಾರ್ಟಿ) ಯ ಸಿದ್ಧಾಂತಗಳು ಗರಿಗೆದರಿ ಜೆರ್ಮನಿಯ ಎಲ್ಲೆಡೆ ತನ್ನ ಪ್ರಭಾವನ್ನು ಕಾಣುತ್ತಿದ್ದಂತೆ ಅದೇ ವೇಳೆಗೆ ರೀನ್ಹಾರ್ಡ್ ಹೆಡ್ರಿಕ್ ಎಸ್ಎಸ್ ಅಧಿಕಾರಿಯಾಗಿ ಅಡಾಲ್ಫ್ ಹಿಟ್ಲರ್ ನ ಬಂಟ ಹೆನ್ರಿಚ್ ಹಿಮ್ಲರ್ ನಿಂದ ಆಯ್ಕೆಯಾಗುತ್ತಾನೆ. ನಾಝಿ ಸಿದ್ದಾಂತಗಳಿಗೆ ತನ್ನ ಜೀವಮಾನವನ್ನೆಲ್ಲ ಒತ್ತೆ ಇಟ್ಟ ಈತ ತನ್ನ ಕಾರ್ಯದಕ್ಷತೆಯಿಂದ (!) ಅಡಾಲ್ಫ್ ಹಿಟ್ಲರ್ನ ಪ್ರೀತಿಗಳಿಸಿ “ಕಬ್ಬಿಣ ಹೃದಯದ ಮನುಷ್ಯ” ಎಂದೇ ಪ್ರಖ್ಯಾತನಾಗುತ್ತಾನೆ.
ಈತ ಎಷ್ಟು ಕುತಂತ್ರಿಯೆಂದರೆ 1939 ರಲ್ಲಿ ಜೆರ್ಮನಿಯ ಗಡಿಯಲ್ಲಿನ ಹೊಚ್ಲಿಂಡೆನ್ ಎಂಬ ಹಳ್ಳಿಯಲ್ಲಿ ಸಚ್‌ಸೆನ್‌ಹೌಸೆನ್ ಕಾನ್ಸಂಟ್ರೇಶನ್ ಕ್ಯಾಂಪ್ ನ ಆರು ಜನರನ್ನು ಪ್ರಚೋದಿಸಿ ಪೋಲಿಷ್ ದೇಶದ ಸೈನಿಕರ ಸಮವಸ್ತ್ರ ಧರಿಸಿ ಅಲ್ಲಿನ ಅಮಾಯಕ ಮುಗ್ದ ಜನರನ್ನು ಶೂಟ್ ಮಾಡಿಸುತ್ತಾನೆ. ಇದೊಂದು ರಾಜಕೀಯ ಕುತಂತ್ರವಾಗಿರುತ್ತದೆ. ಮುಂದೆ ಈತ ಅಡಾಲ್ಫ್ ಹಿಟ್ಲರ್ ನ ಮರಣ ಶಿಬಿರದ ಮುಖ್ಯ ರೂವಾರಿಯಾಗಿ ಯೋಜನಕಾರನಾಗಿ ಲಕ್ಷಾಂತರ ಅಥವಾ ಅಸಂಖ್ಯವಾದ ಮನುಕುಲ ಕಂಡ ಅತಿ ಭೀಕರ ಯಹೂದಿಗಳ ಮಾರಣಹೋಮಕ್ಕೆ ಕಾರಣನಾಗುತಾನೆ.
ಹೈಂಜ್ ಹೆಡ್ರಿಕ್ ಕೂಡ ನಾಜಿ ಸಿದ್ದಂತಗಳಿಂದ ಪ್ರಭಾವಿತನಾಗಿ ಅಣ್ಣ ಎಸ್ ಎಸ್ ಅಧಿಕಾರಿಯಾಗಿ ಆಯ್ಕೆಯಾಗುತ್ತಲೆ ಈತ ಕೂಡ ಎಸ್ ಎಸ್ ಲೆಫ್ಟಿನೆಂಟಾಗಿ ಆಯ್ಕೆಯಾಗಿರುತ್ತಾನೆ. ಜೊತೆಗೆ ಜರ್ಮನಿಯ “ಡೈ ಪಂಜರ್‌ಫೌಸ್ಟ್” (Die Panzerfaust) ಎಂಬ ಪತ್ರಿಕೆಗೆ ಪತ್ರಕರ್ತ ಹಾಗು ಪ್ರಕಾಶಕನೂ ಹಾಗಿರುತ್ತಾನೆ. ಇದೊಂದು ಸೈನಿಕ ದಿನಪತ್ರಿಕೆ ಯಾಗಿರುತ್ತದೆ. ಅಡಾಲ್ಫ್ ಹಿಟ್ಲರ್ ನ ಕಟ್ಟಾ ಬೆಂಬಲಿಗನಾದ ಈತ ಆತನ ಆದೇಶದಂತೆ ಯಹೂದಿಗಾಲ ಮಾರಣ ಹೋಮಕ್ಕೆ ಯೋಜನೆಗಳನ್ನು ಸಿದ್ಧತೆಗೊಳಿಸುತ್ತಿದಾಗ ಹಠಾತ್ತನೆ ಬಂದ ಅಣ್ಣ ರೀನ್ಹಾರ್ಡ್ ಹೆಡ್ರಿಕ್ ನ ಕೊಲೆಯ ಸುದ್ದಿ ದಿಗ್ಭ್ರಮೆಗೊಳಿಸುತ್ತದೆ. ರೀನ್ಹಾರ್ಡ್ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ ಜೆಕ್ ಪ್ಯಾರಾಚೂಟ್ ಸೈನಿಕ ಪಡೆಯಿಂದ ಬಾಂಬಿನ ಸುರಿಮಳೆಯಾಗಿರುತ್ತದೆ.
ಅಣ್ಣ ರೀನ್ಹಾರ್ಡ್ ನ ಅಂತ್ಯಕ್ರಿಯೆಯಲ್ಲಿ ಗೆಸ್ಟಾಪೊ ನಾಯಕರು ರೀನ್ಹಾರ್ಡ್ ಗೆ ಸೇರಿದ ಅತಿ ಗೌಪ್ಯವಾದ ಫೈಲುಗಳ ರಾಶಿಯನ್ನೇ ತಮ್ಮ ಹೈಂಜ್ ಹೆಡ್ರಿಕ್ ಗೆ ಕೊಡುತ್ತಾರೆ. ಆ ಅಸಂಖ್ಯ ರಾಶಿಯ ಫೈಲುಗಳ್ಳನ್ನು ಇಡೀ ರಾತ್ರಿ ನಿದ್ದೆಯಿಲ್ಲದೆ ಕೂತು ಹೈಂಜ್ ಹೆಡ್ರಿಕ್ ಓದುತ್ತಾನೆ. ಅಡಾಲ್ಫ್ ಹಿಟ್ಲರ್ ಮರಣ ಶಿಬಿರದ ವ್ಯವಸ್ಥಿತ ಯೋಜನೆಗಳನ್ನು ಅಣ್ಣ ಆ ಫೈಲುಗಳಲ್ಲಿ ದಾಖಲಿಸಿರುತ್ತಾನೆ ಹಾಗು ಈ ಯೋಜನೆಗಳ ವಿರುದ್ಧ ಹಿಟ್ಲರ್ ಮನಒಲಿಸುವ ಪ್ರಯತ್ನ ಹಾಗು ಅಸಹಾಯಕತೆ ಯನ್ನು ಹೇಳಿರುತ್ತಾನೆ.
ಅಣ್ಣನ ಈ ಯೋಜನೆಗಳನ್ನು ಓದಿ ಹೈಂಜ್ ಹೆಡ್ರಿಕ್ ಮಾನಸಿಕವಾಗಿ ಅಸ್ವಸ್ಥನಾಗುತಾನೆ. ಆಗ ತನ್ನ ಜೀವಿತಾವದಿಯಿಂದ ನಂಬಿಕೊಂಡು ಬಂದ ನಾಝಿ ಸಿದ್ದಂತಗಳನ್ನೆಲ್ಲಾ ತೆಗೆದೆಸದು ಆ ಕ್ಷಣದಿಂದಲ್ಲೇ ತನ್ನ ಕೈಲಾದ ಮಟ್ಟಿಗೆ ಯಹೂದಿಯರ ನೆರವಿಗೆ ನಿಲ್ಲುತ್ತಾನೆ. ತನ್ನ ಪತ್ರಿಕೆಯ ಮುದ್ರಣದ ಮಿಶೀನಿನ ಸಹಾಯದಿಂದ ಅವರಿಗೆಲ್ಲ ನಕಲಿ ಗುರುತಿನ ಕಾರ್ಡುಗಳನ್ನು ಮುದ್ರಿಸಿ ಅವರಿಗೆ ಕೊಡಿಸಿ ತುಂಬ ಜನರನ್ನು ಮರಣ ಶಿಬಿರಕ್ಕೆ ದಾಖಲಾಗದಂತೆ ಹಾಗು ಬೇರೆ ದೇಶಗಳಿಗೆ ತಪ್ಪಿಸಿಕೊಂಡು ಹೋಗಲು ಸಹಾಯ ಮಾಡುತಾನೆ.
ಮುಂದೆ ಗೆಸ್ಟಾಪೊಗಳಿಗೆ ಈ ಯೋಜನೆ ತಿಳಿಯಲು ಮುಂಚೆಯೇ ಅಂದರೆ 1944 ರಲ್ಲಿ ಹೈಂಜ್ ಹೆಡ್ರಿಕ್ ತನ್ನ ಸಂಸಾರವನ್ನು ಕಾಪಾಡಲು ತನ್ನನು ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಹೈಂಜ್ ಹೆಡ್ರಿಕ್ ನ ಈ ಸಹಾಯವನ್ನು ಇಪ್ಪತ್ತನೇ ಶತಮಾನ ದಲ್ಲಿ ನೆಡೆದ ಕ್ರೂರ ನಾಜಿಗಳ ಅತಿ ಭೀಕರ ಮರಣ ಶಿಬಿರದಿಂದ ತಪ್ಪಿಸಿಕೊಂಡ ಯಹೂದಿ ಪೀಳಿಗೆ ಈಗಲೂ ನೆನೆಸಿಕೊಳ್ಳುತ್ತದೆ. ಹೀಗೆ ಕೊಲ್ಲುವುದಕ್ಕೆ ಅಣ್ಣಂದಿರಿದ್ದರು ಈ ಇಬ್ಬರು ಆಲ್ಬರ್ಟ್ ಗೋರಿಂಗ್ ಹಾಗು ಹೈಂಜ್ ಹೆಡ್ರಿಕ್ ಮನುಕುಲದ ಮಾನವತೆಗೆ ಸಾಕ್ಷಿಯಾಗಿದ್ದಾರೆ.
ಕು ಶಿ ಚಂದ್ರಶೇಖರ್
ಮಾಹಿತಿ ಹಾಗು ಚಿತ್ರಕೃಪೆ : https://historyofyesterday.com/ ಹಾಗು https://frontierpartisans.com/