ನಾದಬ್ರಹ್ಮ ಹಂಸಲೇಖ

ಾದಬ್ರಹ್ಮ ಶ್ರೀ ಹಂಸಲೇಖ

ನಮ್ಮ ಬಲ ಕಿವಿಗಿಂತ ಎಡ ಕಿವಿ ಶಬ್ದ ಗ್ರಹಿಸುವುದರಲ್ಲಿ ಹೆಚ್ಚು ಚುರುಕು. ಇದು ನನ್ನ ಅನಿಸಿಕೆ.

ಎಲ್ಲೋ ಓದಿದ ನೆನಪು. ನೀವೊಮ್ಮೆ ನಿಮ್ಮ ಮೊಬೈಲ್ ಹ್ಯಾಂಡ್ಸ್ ಫ್ರೀ ಯನ್ನು ಬಲ ಕಿವಿಯಿಂದ ತಗೆದು ಎಡ ಕಿವಿಯಿಂದ ಯಾವುದಾದರೂ ಸಂಗೀತ ಅಥವಾ ಶಬ್ದವನ್ನು ಆಲಿಸಿರಿ ನಿಮಗೆ ಈ ಅನುಭವ ಹಾಗುವುದು. ಹಾಗೆ ಒಮ್ಮೊಮೆ ಇಡೀ ರಾತ್ರಿ ನಮ್ಮ ಪ್ರೀತಿಯ ಹಂಸಲೇಖ ರವರು ಕಂಪೋಸ್ ಮಾಡಿದ ಹಾಡುಗಳನ್ನು ಆಲಿಸುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಅದ್ಬುತವಾದ ಈ ಎಲ್ಲಾ ಹಾಡುಗಳನ್ನು ನನ್ನ ಬಾಲ್ಯದಿಂದಲೂ ಆಲಿಸಿರುವೆ. ಈ ಅದ್ಭುತ ರಾಗ ಸಂಯೋಜನೆ ಸರ್ವಕಾಲಕ್ಕೂ ಸುಮುಧುರವೇ. ಆ ಹಾಡುಗಳಲ್ಲಿ ಇರುತ್ತಿದ್ದ ವಯೊಲಿನ್, ಕೊಳಲು,ತಬಲಾ ಕೀಬೋರ್ಡ್ ಡ್ರಮ್ಸ್ ಗಿಟಾರ್ ಇನ್ನು ಅನೇಕ ಹಾಗೂ ಹೆಚ್ಚು ಕಡಿಮೆ ಎಲ್ಲಾ ವಾದ್ಯಗಳು ಇರುವುದು. ಅದೇ ಈಗ ಬರುವ ಹಾಡುಗಳಲ್ಲಿ ಎಷ್ಟೋ ವಾದ್ಯಗಳನ್ನು ಈಗಿನ ಕೆಲವು ಸಂಗೀತಗಾರರು ಉಪಯೋಗಿಸುವುದು ತೀರಾ ಕಡಿಮೆ. ಅದೇ ಹಂಸಲೇಖ ರವರ ಹಾಡುಗಳನ್ನು ಕೇಳಿದರೆ ನಿಮಗೆ ಈ ಎಲ್ಲಾ ವಾದ್ಯಗಳ ಪರಿಚಯ ಮತೊಮ್ಮೆ ಹಾಗುತ್ತದೆ. ಅಷ್ಟೇ ಏಕೆ “ಕೋಣ ಈದೈತೆ” ಚಿತ್ರದಲ್ಲಿ ವಾದ್ಯಗಳನ್ನೇ ಬಳಸದೆ ಬಾಯಿಯಿಂದ ವಾದ್ಯಗಳ ಶಬ್ದವನ್ನು ಮಾಡಿ ಹಾಡುಗಳನ್ನು ಸಂಯೋಜಿಸಿರುವುದು ಅವರ ಅನೇಕ ಯಶಸ್ವಿ ಪ್ರಯೋಗಳಲ್ಲೊಂದು.

ಕಳೆದ ಶತಮಾನದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಮೂಲ್ಯ ರತ್ನ  ಶ್ರೀಯುತ  ಹಂಸಲೇಖರವರು ಈಗಲೂ ಶ್ರೇಷ್ಠ ಮ್ಯೂಸಿಕ್ ಮಾಸ್ಟರ್. ದಕ್ಷಿಣದಲ್ಲಿ ಇಳಯರಾಜ, ಎ ಆರ್ ರೆಹಮಾನ್, MK ಅರ್ಜುನ್, ರಾಜಕೋಟಿ, ಕೀರವಾಣಿ ಜೊತೆಗೆ ನಮ್ಮ ಉಪೇಂದ್ರಕುಮಾರ್, ರಾಜನ್ ನಾಗೇಂದ್ರ ಇವರೆಲ್ಲರಿಗಿಂತ ವಿಭಿನ್ನ ಶೈಲಿ ನಮ್ಮ ಪ್ರೀತಿಯ ಹಂಸಲೇಖ ರವರದ್ದು.

ನಾದ ಬ್ರಹ್ಮ ರವರು ಹುಟ್ಟಿದ್ದು ಜೂನ್ 23 1951, ಮೂಲ ಹೆಸರು ಗಂಗರಾಜು. ಆಶ್ಚರ್ಯವೆಂದರೆ ಸಾಕಷ್ಟು ಸಮಯ ಅವಕಾಶಕ್ಕೆ ಕಾಯಿಸಿದ್ದಕ್ಕೆ ಏನೋ  ಅವರು ಬರೆದ ಮೊಟ್ಟ ಮೊದಲನೆಯ ಗೀತೆ “ ನೀನಾ ಭಗವಂತ ಜಗದುಪಕರಿಸಿ ನನಗಪಕರಿಸೋ “ ಎಂದು “ತ್ರಿವೇಣಿ ಚಿತ್ರಕ್ಕೆ ದೇವರನ್ನು ನಿಂದಿಸುತ್ತಾ. ಆನಂತರ “ರಾಹುಚಂದ್ರ” ಚಿತ್ರಕ್ಕೆ ಚಿತ್ರಕತೆ ಹಾಗೂ ಸಾಹಿತ್ಯ ಬರೆದರೂ  ಚಿತ್ರ ತೆರೆಕಾಣಲಿಲ್ಲ, ನಂತರ  “ಹೆಣ್ಣೇ ನಿನಗೇನೂ ಬಂಧನ” ಎಂಬ ಚಿತ್ರಕ್ಕೆ ಸಾಹಿತ್ಯಒದಗಿಸಿ ಎರಡು ವರ್ಷದ ನಂತರ ಭಗವಂತ ಅವರು ಬರೆದ ಮೊದಲೆನೆ ಹಾಡು ಕೇಳಿಯೋ ಏನೋ ಶ್ರೀ ವೀರಸ್ವಾಮಿಯವರ ಮೂಲಕ ಕಣ್ಣು ಬಿಟ್ಟ. “ನಾನು ನನ್ನ ಹೆಂಡತಿ” ಚಿತ್ರಕ್ಕೆ ತಮಿಳು ಸಂಗೀತ ನಿರ್ದೇಶಕ ಕಳುಹಿಸಿಕೊಟ್ಟ ಟ್ಯೂನ್ ಗಳಿಗೆ ಹಂಸಲೇಖರವರು ಅದ್ಭುತವಾಗಿ ಸಾಹಿತ್ಯ ಬರೆದರು. ಮುಂದಿನ ರವಿಚಂದ್ರನ್ ನಿರ್ದೇಶನದ ಸಾಹಸಕ್ಕೆ ಬೆನ್ನೆಲುಬಾಗಿ ಕನ್ನಡ ಯುವಜನತೆಯ ಮನಸ್ಸನ್ನು ಪ್ರೇಮಲೋಕ ಚಿತ್ರದ ಎಲ್ಲಾ ಹಾಡಿನ ಮೂಲಕ ಸೂರೆ ಹೊಡೆದರು. ಆಮೇಲೆ ಅವರು ದಿನದ ಇಪ್ಪತಾನಾಲ್ಕು ಗಂಟೆಯಲ್ಲಿ ಎರಡೆರಡು ಪಾಳಿಗಳಲ್ಲಿ ಕೆಲಸಮಾಡಿದರು ಕೊಡ ಅವಕಾಶಗಳು ಸಾಲುಸಾಲಾಗಿ ಬರುತ್ತಲೇ ಇದ್ದವ್ವು. ವರುಷದಲ್ಲಿ ಬಿಡುಗಡೆಯಾಗುತಿದ್ದ ಚಿತ್ರಗಳ ಶೇಕಡಾ ಮುಕ್ಕಾಲು ಇವರದೇ ಸಾಹಿತ್ಯ ಸಂಗೀತಾ ಎಂದರೆ ಹುಡುಗಾಟವೇ. ಎಲ್ಲಾ ಸಿನಿಮಾ ಹಾಡಿನ ಕ್ಯಾಸೆಟ್ಟುಗಳಲ್ಲಿ ಹಂಸಲೇಖ ರವರ ಆಕರ್ಷಕ ಸಿಗ್ನೇಚರ್. ಎಲ್ಲಾ ನಿರ್ಮಾಪಕರಿಗೂ, ನಿರ್ದೇಶಕರಿಗೂ ಹಾಗೂ ನಟರಿಗೂ ಹಂಸಲೇಖರವರೇ ಬೇಕು. ಐನೂರಕ್ಕೂ ಹೆಚ್ಚು ಚಲನಚಿತ್ರಗಳಿಗೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತಾ ನೀಡಿದ್ದಾರೆ

ಡಾ ರಾಜ್ ಹಾಡಿದ “ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಹಾಡು ಎಷ್ಟು ಜನಪ್ರಿಯವೆಂದರೆ ಪ್ರೇಕ್ಷಕರ ಮೆಚ್ಚುಗೆಯನ್ನು ಕಂಡು ಎಷ್ಟೋ ಥೀಯೇಟರ್ ಮಾಲೀಕರು ಆ ಹಾಡನ್ನು ಎರಡೆರಡು ಸಲ ಪ್ರದರ್ಶಿಸಿದಿದೆ. ಅಣ್ಣಾವ್ರು, ಹಂಸಲೇಖ ಸಾಹಿತ್ಯ ಸಂಗೀತಾ ಎಂಥಾ ಅದ್ಬುತ ಕಾಂಬಿನೇಶನ್ ಅಲ್ಲವೇ.

ಒಮ್ಮೆ “ಮುತ್ತಿನಹಾರ” ಚಲನಚಿತ್ರದ ಹಾಡುಗಳ ಧ್ವನಿಮುದ್ರಿಕೆ ಸಮಯದಲ್ಲಿ ಸಂಗೀತ ದಿಗ್ಗಜ ಶ್ರೀ ಬಾಲಮುರಳಿ ಕೃಷ್ಣ ರವರು  “ದೇವರು ಹೊಸೆದ ಪ್ರೇಮದ ದಾರ” ಹಾಡನ್ನು ಹಾಡಲೆಂದು ಬಂದು ಹಾಡನ್ನು ಒಮ್ಮೆ ಓದಿ ಸಣ್ಣ ತಿದ್ದುಪಡಿಮಾಡೆಲೆಂದು ಈ ಹಾಡನ್ನು ಬರೆದ ಕವಿಯನ್ನು ಕರೆಸಿ ಎಂದು ಕೇಳಿದ್ದಾರೆ. ಅಲ್ಲೇ ನಿಂತಿದ್ದ ಹಂಸಲೇಖರವರು ಕಿವಿಯಲ್ಲಿದ್ದ ಪೆನ್ನನ್ನು ತೆಗೆದು ಹೇಳಿ ಗುರುಗಳೇ ಮಾಡುವೆ ಎಂದು ಹೇಳಿದ್ದೆ ತಡ ಬಾಲಮುರಳೀಯವರು ಕೋಪದಿಂದ ಕವಿಗಳನ್ನು ಕರೆಯಿಸಿ ಇದು ಅವರು ಮಾಡಬೇಕಾದ ಕೆಲಸ ನೀವಲ್ಲ ಎಂದಾಗ ಹಂಸಲೇಖರವರು ನಾನೇ ಸ್ವಾಮಿ ಈ ಸಾಹಿತ್ಯ ಬರೆದವನ್ನು ಎಂದು ಹೇಳಿದೊಡನೆ ಬಾಲಾಮುರಳಿಯವರ ಕಣ್ಣಲ್ಲಿ ಆಶ್ಚರ್ಯ. ಪ್ರೀತಿಯಿಂದ ಬಿಗಿದಪ್ಪಿ ಅವರನ್ನು ಆಶೀರ್ವದಿಸಿ ಹಾಡಿ ಹೋದರು. ಈಗಲೂ ಆ ಹಾಡಿನ ಸಾಹಿತ್ಯ ಅವರ ಕೀರ್ತಿ ಮುಕುಟಗಳಲ್ಲೊಂದು. ಅವರ “ಗಂಗವ್ವ ಗಂಗಾಮಾಯಿ” ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ, ಹಾಲುಂಡ ತವರು, ಶ್ರೀ ಮಂಜುನಾಥ ಚಿತ್ರಗಳಿಗೆ  ರಾಜ್ಯಪ್ರಶಸ್ತಿ, ಫಿಲಂಫೇರ್ ಹಾಗೂ ಇನ್ನು ಅನೇಕ ಪ್ರಶಸ್ತಿಗಳು ಹಂಸಲೇಖರವರ ಕೈ ಸೇರಿದೆ.

ಸಂಪೂರ್ಣ ಎರಡು ದಶಕಗಳ ಮದ್ಯೆ ಬಂದ ಎಲ್ಲಾ ಚಲನಚಿತ್ರಗಳ ನಿರ್ದೇಶಕರುಗಳನ್ನೆ (?) ಹಂಸಲೇಖರವರು ತಮ್ಮ ಸಂಗೀತದಿಂದ ನಿರ್ದೇಶಿಸಿಧಾರೆ ಅಂತ ಅನಿಸುತ್ತದೆ.

ಶ್ರೀ ಹಂಸಲೇಖ ರವರು ತಮ್ಮ ಪತ್ನಿ ಶ್ರೀಮತಿ ಲತಾ ರವರ ಜೊತೆಗೆ ತಮ್ಮ ನಿವಾಸದಲ್ಲಿಯೇ ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದಾರೆ ಹಾಗೂ ಪ್ರಸ್ತುತ ಜಾನಪದ ಸಾಹಿತ್ಯದಲ್ಲಿ ಸಂಪೂರ್ಣ ತೊಡಿಗಿರುವುದು ನಿಜಕ್ಕೂ ಸಂತಸದ ವಿಷಯ.

ಚನ್ನಪಟ್ಟಣದ ಹತ್ತಿರ ತಮ್ಮ “ವಿಶ್ವರಂಗಭೂಮಿ” ಎಂಬ ಪರಿಕಲ್ಪನೆ ಹೊತ್ತು ಸಾವಿರಾರು ವಿದ್ಯಾರ್ಥಿಗಳಿಂದ ದೇಸಿ ಸೊಗಡನ್ನು ಎಲ್ಲೆಡೆ ಸೃಷ್ಟಿಸುವ ಕನಸನ್ನು ಹೊಂದಿರುವ ಶ್ರೀ ಹಂಸಲೇಖರವರಿಗೆ ಆಕೃತಿ ಬಳಗದ ಸಂಪೂರ್ಣ ಬೆಂಬಲ ಹಾಗೂ ಶ್ರೀ ಸರಸ್ವತಿ ಮಾತೆಯ  ಆಶೀರ್ವಾದ ಮತ್ತು ಸಮಸ್ತ ಕನ್ನಡಿಗರ ಪ್ರೀತಿ ವಿಶ್ವಾಸ  ಇರಲೆಂದು ನಮ್ಮ ಹಾರೈಕೆ.

  • ಕು ಶಿ ಚಂದ್ರಶೇಖರ್

Related post