ನಾ ರೈತನ ಮಗ
ರೈತನ ಮಗನು ನಾನು ಎನ್ನುವ,,,
ಹೆಮ್ಮೆಯಿದೆ ನನ್ನ ಬದುಕಿನಲಿ.
ಈ ಜಗದ ಹಸಿವನು ನೀಗಿಸುವ
ತುತ್ತು ಬೆಳೆಯುವೆನು ಹೊಲಗಳಲಿ.
ರೈತನ ಮಗನೊ ನಾನು,,,
ನಾ ಬೆಳೆದರೆ ಬದುಕುವೆ ನೀನು,,,.!!೧!!
ಭೂಮಿ ತಾಯಿಯ ನಂಬಿ ಬದುಕುವೆ
ನೇಗಿಲ ಹಿಡಿದು ಉಳುಮೆ ಮಾಡುವೆ
ಮಡದಿ ಮಕ್ಕಳಿಗು ಇದನು ಕಲಿಸುವೆ
ಸಾಯುವ ತನಕ ಅನ್ನ ಬೆಳೆಯುವೆ
ರೈತನ ಮಗನೊ ನಾನು,,,
ನಾ ಬೆಳೆದರೆ ಬದುಕುವೆ ನೀನು,,,,.!!೨!!
ಬಸವನು ತಿನ್ನುವ ಮೇವನು ಬೆಳೆದು
ಧಾನ್ಯವ ತೆಗೆದು ಬಣವೆಯಾಕುವೆ
ಬಸವನ ಸಾಕುತ ಹಾಲನು ಕರೆದು
ಮಕ್ಕಳ ಒಡಲಿಗೆ ಅಮೃತವಾಗುವೆ.
ರೈತನ ಮಗನೊ ನಾನು,,,
ನಾ ಬೆಳೆದರೆ ಬದುಕುವೆ ನೀನು,,,.!!೩!!
ಹಣ್ಣು ಹಂಪಲು,ಹೂಗಳ ಬೆಳೆಸಿ
ಪ್ರಾಣಿ ಪಕ್ಷಿಗಳ ಉಳಿಸುವೆನು.
ಮನೆಯ ದೇವರಿಗೆ ಹಾರವ ಪೋಣಿಸಿ
ನಮ್ಮ ಸಂಸ್ಕೃತಿಯ ಬೆಳೆಸುವೆನು.
ರೈತನ ಮಗನೊ ನಾನು,,,
ನಾ ಬೆಳೆದರೆ ಬದುಕುವೆ ನೀನು,,,.!!೪!!
ಉಸಿರ ಉಳಿಸಲು, ಹಸಿರು ಬೆಳೆಸುವೆ
ನೋಡು ಬೆಳೆದಿವೆ ತೋಟಗಳು.
ರೋಗ ಹೋಗಲು, ಬೀಸಿ ಕರೆದಿವೆ
ತಣ್ಣನೆ ಬೀಸುವ ಗಾಳಿಗಳು.
ರೈತನ ಮಗನೊ ನಾನು,,,,
ನಾ ಬೆಳೆದರೆ ಬದುಕುವೆ ನೀನು,,.!!೫!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ