ನಿಜವಾದ ಸಂಪತ್ತು
ನೀ ನನ್ನವಳು / ನನ್ನವನು…..
ಜಗದ ಸಾವಿರ ಜನ ಎದುರಾದರೂ ಕೈಬಿಡೆನು
ಎನ್ನುವ ಒಂದು ಜೀವ……
ಅದು ಯಾರೇ ಆಗಿರಲಿ…
ಅದೇ ನಿಜವಾದ ಸಂಪತ್ತು.
ಒಂದು ಸಣ್ಣ ಕಾಳಜಿ..
ತುಸು ಪ್ರೀತಿ,ಕಿಂಚಿತ್ತು ಅಕ್ಕರೆ…
ಅಷ್ಟೇ ಸಾಕು…!!
ನಮ್ಮ ಯಾವುದೇ ಭಾರ ಅವರು ಹೊರಬೇಕಿಲ್ಲ…
ಹಿತವಾದ ಎರಡು ಮಾತು..
ಎಲ್ಲಕ್ಕೂ ಮಿಗಿಲು..
ಅಂತಹ ಒಬ್ಬರು ಜೊತೆಗಿದ್ದರೆ ಇರದು ದಿಗಿಲು…
ಸುಕೃತಿ ಕಂದ