ನಿನ್ನನ್ನೆ ನಂಬಿಹೆನು
ನಿನ್ನನ್ನು ನಂಬಿಹೆನು ಕೊನೆತನಕ ಕಾಯುವೆನು
ದಯಮಾಡಿ ನಂಬೆನ್ನ ಗೆಳತಿ,,,
ಎಂದೆಂದು ನೀ ನನ್ನ ಸುಮತಿ.
ಯಾವಾಗ ಕೋಡುತೀಯ ಪ್ರೀತಿ.?!!೧!!
ಒಂದಂತು ಸತ್ಯ, ಪ್ರೀತಿಸುವೆ ನಿತ್ಯ
ನಿನ್ನಲ್ಲಿ ನಾನಾಗಿ ನಾ ಬದುಕುವೆ
ನಿನಗಾಗಿ ಬಾಳೆಲ್ಲ ನಾ ದುಡಿಯುವೆ
ನನ ಮಾತು ಕೇಳು,ನೀ ನನ್ನ ಬಾಳು.!!೨!!
ಈ ಹೃದಯ ನಿನಗಾಗಿ ಬಡಿಯುತ್ತಿದೆ
ನನ ಮನಸು ನಿನ್ನನ್ನು ಕಾಯುತ್ತಿದೆ
ಯಾವಾಗ ಬರುವೆ, ಪ್ರೀತಿನ ಕೊಡುವೆ.?
ಬಾರಮ್ಮ ಬಾ ಬೇಗ ನನ ಬಾಳಿಗೆ.!!೩!!
ನೀ ನಗುವ ಕ್ಷಣವೆಲ್ಲ ಸೌಂದರ್ಯವು
ನೀ ಸನಿಹವಿದ್ದಾಗ ಮಾಧುರ್ಯವು
ಜೊತೆಯಾಗು ಓಲವೆ,ನೀ ನನ್ನ ಗೆಲುವು
ನಂಬಿಹುದು ನಿನ್ನ,ಈ ನನ್ನ ಮನವು.!!೪!!
ನೀ ಬರುವ ಆ ಕ್ಷಣವು ನನದಾಗಲಿ
ನೀ ಸಿಗುವ ಈ ಬದುಕು ಬೆಳಕಾಗಲಿ
ನೀ ನನ್ನ ಜೀವ, ಜೀವಕ್ಕೆ ಬಾವ
ಕೋಡಬೇಡ ಗೆಳತಿ, ಹೃದಯಕ್ಕೆ ನೋವ.!!೫!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ