ನಿನ್ನ ಕಂಡಾಗ

ನಿನ್ನ ಕಂಡಾಗ

ನಾನಿನ್ನ ಕಂಡಾಗ
ಕನಸೊಂದ ಕಂಡಂತೆ
ಭಾಸವಾಗಿಹುದಿಂದು
ನನ್ನ ಮನದಲ್ಲಿ !

ಹಾರುವಾ ಹೂವನ್ನು
ಜಾರುವಾ ತಾರೆಯನು
ಹೊಳೆವ ಬೆಳ್ಳಿಯ
ಬೆಳಕ ನಾನು ಕಂಡಂತೆ !

ಕುಣಿಯುವಾ ಜಿಂಕೆಯನು
ನಲಿಯುವಾ ನವಿಲನ್ನು
ಕಾಲ ಬಳಸುವ ಮೊಲದ
ಮರಿಯ ಕಂಡಂತೆ !

ಮಲ್ಲಿಗೆಯ ಘಮವನ್ನು
ಜಾಜಿಯಾ ನವಿರನ್ನು
ಸಂಪಿಗೆಯು ಹೊಮ್ಮಿಸುವ
ಪರಿಮಳವು ಬಂದಂತೆ !

ನದಿ ಹರಿವ ನಾದವನು
ಕಂದನಾ ನಗೆಯನ್ನು
ಉಲಿವ ಕೋಗಿಲೆಯ
ಸ್ವರವ ನಾ ಕೇಳಿದಂತೆ !

ನಿನ್ನ ಹುಡುಕುತಲಿ ಸೋತು
ಕಳವಳದಿ ಮನವಿಂದು
ಸಾಗರನ ಅಲೆಯಂತೆ
ಅಲೆಯುತಿಹುದು !

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *