ನೀನೆ ಹೇಳು
ಹೂವಂತ ಕಣ್ಗಳಲಿ
ಮುಳ್ಳಮೊನೆ
ಹೊಕ್ಕಿರಲು ಹೇಗೆ
ನಗುವುದು ಕಣ್ಣು
ನೀನೆ ಹೇಳು;
ಕನ್ನಡಿಯಂತಿದ್ದ
ನನ್ನ ಮನವಿಂದೀಗ
ಚೂರುಚೂರಾಗಿರಲು
ಪ್ರತಿಬಿಂಬವೆಲ್ಲಿಹುದು
ನೀನೆ ಹೇಳು ;
ನಂದಗೋಕುಲದಾ
ನಂದಾದೀಪವದು
ನಂದುತಿರೆ ಮನೆ-
ಮನದಿ ಬೆಳಕೆಲ್ಲಿ
ನೀನೆ ಹೇಳು ;
ಅಡಿಗಡಿಗೆ ನನ್ನಲ್ಲಿ
ಬೇವಿನಂತಹ ನುಡಿಯ
ಆಡಿ ಮನ ಕೆಡಿಸುತಿರೆ,
ಸವಿ ಭಾವಕೆಡೆಯೆಲ್ಲಿ
ನೀನೆ ಹೇಳು ;
ನನಗರಿವಾಗದೆಯೆ
ನನ್ನ ಮನಃ ಸಂತೋಷ
ನೀ ಕಸಿದುಕೊಳ್ಳುತಿರೆ
ನಾ ನಗುತಲಿರುವುದು
ಹೇಗೆ ಹೇಳು !!
ಶ್ರೀವಲ್ಲಿ ಮಂಜುನಾಥ