ನೀ ಬರುವುದನ್ನೇ ಕಾಯುತ್ತಿದ್ದೆ
ಕಣ್ಣು ನೋಡುವಷ್ಟು ದೂರ…
ಎದೆಯಲ್ಲಿ ದಿಗಿಲು.
ಸುಳಿಗಾಳಿ ಆಗಿ ಬರುವೆಯೋ…
ಬಿರುಗಾಳಿ ಆಗಿ ಬರುವೆಯೋ ಎಂದು….
ನೀ ನನ್ನ ನಿರೀಕ್ಷೆ ಹುಸಿ ಗೊಳಿಸಿದೆ…
ಬರದೇ.ಹೋದೆ….
ಆದರೂ ನಿನ್ನೊಲವು ಸೊಗಸು…
ಉಸಿರಾಡಲು ಬೇಕಾಗುವಷ್ಟು…..
ನೆನಪುಗಳ ತಿಳಿಗಾಳಿಯಲಿ..
ನಿನ್ನ ಕಣ್ಣ ಹೊಳಪು ತುಂಬಿಸಿ….
ಬದುಕು ಸಾಗಿಸಲು..
ಅನುವು ಮಾಡಿದ್ದು…..
ನನ್ನ ಮೇಲಿನ ನಿನ್ನ ಪ್ರೇಮವೇ ತಾನೇ?
ಸುಕೃತಿ ಕಂದ