ಪನ್ನೀರ ಹನಿ
ಸಾರಲು
ಅಂದು ಕಲ್ಲಿನಲ್ಲಿ
ನನ್ನ ಹೆಸರು ಕೆತ್ತಿದೆ ನೀನು
ನಿನ್ನೊಲವ ತೋರಲು!
ಕಲ್ಲಿನಂಥ ನನ್ನ
ಮನಸು ಗೆದ್ದ ನಿನಗೆ
ಒಲವ ಮುದ್ರೆ ಒತ್ತಿದೆ ನಾನು
ನನ್ನೊಲವ ಸಾರಲು!!
ಏಕಾಂತ
ಒಮ್ಮೊಮ್ಮೆ
ಅವಳಿಗಿಂತ
ಅವಳ ಜೊತೆ ಕಳೆದ
ಸವಿ ಘಳಿಗೆಗಳೇ
ಇಷ್ಟವಾಗುತ್ತವೆ!
ಮತ್ತೆ ಮತ್ತೆ
ನೆನಪಾಗ ಬೇಕೆನಿಸುತ್ತದೆ
ಏಕಾಂತವೂ
ಹಿತವೆನಿಸುತ್ತದೆ!
ನೀನೆ ನನ್ನ ಜೀವ
ನೀನು ನನ್ನ ಜೀವ
ನೀನು ನನ್ನ ಭಾವ
ನೀನಿಲ್ಲದ ನಾನು
ನೀರಿಲ್ಲದ ಮೀನು
ನಿನ್ನ ಸಲುಗೆ ಸ್ನೇಹ
ಮರೆಸುವುದು
ನನ್ನ ನೋವು!
ಜಾಗವಿಲ್ಲ
ಕೊನೆಯಿಲ್ಲ
ನಮ್ಮ ಪ್ರೀತಿಗೆ
ಸರಿಸಾಟಿಯಿಲ್ಲ ಅದರ
ವಿವಿಧ ರೀತಿಗೆ!
ನಿಜವಾದ ಪ್ರೀತಿಯಲ್ಲಿ
ಜಾಗವಿಲ್ಲ ಭೀತಿಗೆ
ಒಲಿದು ಬರುತ್ತದೆ ಪ್ರೀತಿ
ಬಲವಾದ ಛಾತಿಗೆ!!
ಡಾ|| ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ
2 Comments
Nice
ಸುಂದರ ಪದಗಳ ಪನ್ನೀರ ಹನಿಗಳು!…