ಪನ್ನೀರ ಹನಿ – ಡಾ|| ಪರಮೇಶ್ವರಪ್ಪ ಕುದರಿ

ಹನಿಗವನಗಳು

ದೂರಾಗು

ನೀ ನೀರಾದರೆ
ನಾನು ಕಲ್ಲಾಗುವೆ
ಇಷ್ಟವಿದ್ದರೆ
ನನ್ನನ್ನು ನಿನ್ನಲ್ಲಿ
ಮುಳುಗಿಸಿಕೊ!
ಇಲ್ಲವಾದರೆ
ನನ್ನ ಮೇಲೆ
ಹರಿದು ದೂರಾಗು!!

ಅರ್ಥ

ನಿನ್ನಿಂದ
ನಾ ದೂರ
ಹೋದ ಮೇಲೆ
ನಿನಗರ್ಥ ಆಗುತ್ತೆ!
ಜಗತ್ತಿನಲ್ಲಿ
ನನ್ನಂತವನು
ಇನ್ನೊಬ್ಬನಿಲ್ಲ
ಎಂಬ ಸತ್ಯ!!

ಆಳ

ನೀ ನನ್ನ
ಪಡೆಯಬೇಕೆಂದರೆ
ನನ್ನೊಳಗೆ
ಇಳಿದು ನೋಡು!
ದಡದಲ್ಲೇ
ನಿಂತರೆ
ಕಡಲಿನ ಆಳ
ತಿಳಿಯಲಾರದು!!

ಶುಭ ಸಮಾಚಾರ

ತುಂಬಾ ದಿನಗಳಿಂದ
ಕನಸಾಗಿದ್ದವಳು
ಇಂದು ಇದ್ದಕಿದ್ದಂತೆ
ಎದುರು ಬಂದು
ನನಸಾದಳು!
ನಾನಿಷ್ಟ ಪಡುವ
ಮೋಹಕ ನಗೆ ಬೀರಿದಳು!!

ಡಾ|| ಪರಮೇಶ್ವರಪ್ಪ ಕುದರಿ

Related post

Leave a Reply

Your email address will not be published. Required fields are marked *