ದೀವಿಗೆಯ ಹಚ್ಚಿ ದಾರಿ ತೋರುವದಾರಿಗೆ?
ನನ್ನ ಮನೆಯು ಕತ್ತಲಲ್ಲಿದೆ
ಸಣ್ಣ ಬೆಳಕಿಂಡಿ ಬೇಕಿದೆ…
ನಾನು ಯಾವ ರಾವಣನನ್ನು ಕೊಳ್ಳಲು ಹೊರಟಿಲ್ಲ ಈಗಿನ ಸ್ಥಿತಿಗೆ
ನನ್ನೊಳಗಿನ ರಾವಣನನ್ನು ಹೊರಗೆಳೆದು
ನೂಕಬೇಕಿದೆ ಆಚೆಗೆ
ಹಿಂತಿರುಗಿ ನೋಡಿದರೆ ಬದುಕು
ಇದ್ದಲ್ಲೇ ಸುತ್ತುತ್ತಿದ್ದೇನೆ
ಯಾವುದು ದಾರಿ? ಎಲ್ಲಿಗೆ ಪಯಣ
ಗಮ್ಯವೆತ್ತ? ಇಲ್ಲ ಸಮಚಿತ್ತ!
ನಾನು ಸಾಗಬೇಕಿದೆ ಸಾಗಲೇಬೇಕಿದೆ ಸುಸ್ತಿರದೆಡೆಗೆ
ಸಾಕು ಎನಿಸಿದಾಗ ನಿಲ್ಲಲಾಗುತ್ತದೆಯೇ?
ಹೋರಾಡುವುದೊಂದೇ ಭಾಗ್ಯ
ಗುರುವು ಅರಿವು ನನ್ನೊಳಗೆ
ನನಗೆ ನಾನೇ ನಿರ್ದೇಶಕ
ವಿಧಿಯೆಂಬ ದೇವರಿಗೆ ಕೈ ಮುಗಿದು
ಸಾಗುವ ತನಕ…
ಒಮೊಮ್ಮೆ ನೆನಪಿಸಿಕೊಳ್ಳುತ್ತೇನೆ
ನಾನು ಒಂಟಿ ಪಯಣಿಗ
ನಿಂತರೆ ಮರಣ ಸಾಗುತ್ತಿದ್ದರೆ ಜೀವನ.
ಪವನ ಕುಮಾರ ಕೆ ವಿ
ಬಳ್ಳಾರಿ
9663346949