ಪರಿಪೂರ್ಣತೆಯೆಡೆಗೆ…
ನಾಯಿ-ನರಿ ಬೊಗಳಿದರೆ
ಆನೆ ಬೆದರುವುದೇ ?
ತಾನು ಮುನ್ನಡೆಯುವುದ
ಎಂದಾದರೂ ಮರೆವುದೇ?
ಕರಿಯ ತೆರದಲಿ ನಾವು
ಮುನ್ನಡೆಯುತ್ತಿರುವಾ,
ನಿಂದನೆ, ಕುಹಕಗಳಿಗೆ
ಕಿವಿಯಗೊಡದೆ !
ಬೊಗಳುವರು ನಿಂತಲ್ಲೇ
ಬೊಗಳುತ್ತಾ ನಿಲ್ಲುವರು,
ದಿಟ ಹೆಜ್ಜೆಯಿಡುವವರ
ತಡೆವರಾರಿಹರು?
ಕ್ಷುಲ್ಲಕ ವಿಷಯಗಳ
ಕಡೆಗಣಿಸುತ್ತಲೇ,
ನಡೆಯುವಾ ನಾವು
ಪರಿಪೂರ್ಣತೆಯೆಡೆಗೆ!
ಶ್ರೀವಲ್ಲಿ ಮಂಜುನಾಥ