ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಓಲಾ ಇ-ಸ್ಕೂಟರ್

ಪರಿಸರಸ್ನೇಹಿ ಬ್ಯಾಟರಿ ಚಾಲಿತ ಓಲಾ ಇ-ಸ್ಕೂಟರ್

ಓಲಾ ಕಂಪೆನಿಯು ವಿಶ್ವದ ಅತಿದೊಡ್ಡ ಇ-ಸ್ಕೂಟರ್ ತಯಾರಕ ಸಂಸ್ಥೆಯಾಗಿದ್ದು, ಪ್ರತಿ ವರ್ಷ 1 ಕೋಟಿ ಸ್ಕೂಟರ್ ಉತ್ಪಾದನೆಯ ಗುರಿಯನ್ನು ಹಾಕಿಕೊಂಡಿದೆ. ಅಂದರೆ ಈ ಕಂಪೆನಿಯೇ ಪ್ರಪಂಚದ 15% ಇಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆಯನ್ನು ಪೂರೈಸುತ್ತದೆ. ಈ ಕಂಪೆನಿಯ ಕ್ಯಾಂಪಸ್ಸೆ ಸರಿ ಸುಮಾರು 500 ಎಕರೆ ವಿಸ್ತಾರವಾಗಿದೆ. ಈ ಕಂಪೆನಿಯಲ್ಲಿ ಬರೋಬ್ಬರಿ 10,000 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸುಮಾರು 3,000 ಕ್ಕಿಂತಲೂ ಹೆಚ್ಚು ರೋಬೋಟ್ಗಳನ್ನು ಈ ಘಟಕದಲ್ಲಿ ಬಳಸಲಾಗುತ್ತದೆ. ಓಲಾ ಕಾರ್ಖಾನೆಯ ಮೇಲ್ಛಾವಣಿಯನ್ನು ಸೋಲಾರ್ ಪ್ಯಾನಲ್‌ಗಳಿಂದ ಮುಚ್ಚಲಾಗಿದ್ದು, ಇದು ಕಂಪನಿಯು ತನ್ನ ವಿದ್ಯುತ್ ಅವಶ್ಯಕತೆಯನ್ನು ಸುಸ್ಥಿರವಾಗಿ ಪೂರೈಸಿಕೊಳ್ಳಲು ಸಾಧ್ಯವಾಗಿದೆ.

ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ದ್ವಿಚಕ್ರ ವಾಹನ ತಯಾರಕ ಕಂಪೆನಿಯು ಬೆಂಗಳೂರಿನಲ್ಲಿದ್ದು, ಇದರ ಉತ್ಪಾದನಾ ಘಟಕವು ತಮಿಳುನಾಡಿನಲ್ಲಿದೆ. ಈ ಕಂಪನಿಯ ಸ್ಥಾಪಕ ಮತ್ತು ಸಿ.ಇ.ಒ ಭಾವೀಶ್ ಅಗರ್ವಾಲ್ ಆಗಿದ್ದು, ಓಲಾ ಇ-ಸ್ಕೂಟರ್‌ನ ಅತಿ ದೊಡ್ಡ ಕ್ರೇಜ್ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕಂಡುಬಂದಿದೆ. ಜುಲೈ ತಿಂಗಳಲ್ಲಿ ರೂ.499/- ಬೆಲೆಗೆ ಈ ಬೈಕ್‌ ನ ಪ್ರಿ-ಬುಕಿಂಗ್ ತೆರೆದ ತಕ್ಷಣ, 24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಬೈಕ್‌ಗಳು ಬುಕ್ ಆಗಿದ್ದು, ಇದೊಂದು ವಿಶ್ವದಾಖಲೆಯಾಗಿದೆ.

ಈ ಕ್ರೇಜ್‌ಗೆ ಕಾರಣ ಅದರ ವೈಶಿಷ್ಟ್ಯಗಳು

ಈ ಬೈಕ್‌ನಲ್ಲಿ ‘ಹೈಪರ್ ಚಾರ್ಜರ್’ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ಬೈಕ್ ಅತ್ಯಂತ ವೇಗವಾಗಿ ಚಾರ್ಜ್ ಆಗುತ್ತದೆ. ಬೈಕ್‌ನ್ನು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಬರೋಬ್ಬರಿ150 ಕಿ.ಮೀ ಓಡುತ್ತದೆ. ಪ್ರಾರಂಭದ ಕೇವಲ 18 ನಿಮಿಷಗಳ ಚಾರ್ಜಿಂಗ್‌ನಲ್ಲಿ 50% ಚಾರ್ಜ್ ಆಗುವುದರಿಂದ ಕೇವಲ 18 ನಿಮಿಷ ಚಾರ್ಜ್ ಮಾಡಿ ಮತ್ತು 75 ಕಿ.ಮೀ ಓಡಿಸಬಹುದು. ಈ ಬೈಕ್‌ನ ಸರಾಸರಿ ವೇಗ 85 ಎಚ್ಪಿ ಆಗಿದ್ದು, ಗರಿಷ್ಟ ವೇಗ 100 ಎಚ್ಪಿ ಆಗಿದೆ. ಸಾಮಾನ್ಯ ಪೆಟ್ರೋಲ್ ಬೈಕ್ / ಸ್ಕೂಟರ್‌ಗಳಲ್ಲಿ ಈ ವೇಗದಲ್ಲಿ ಬೈಕ್ ಚಲಾಯಿಸುವುದು ಕಷ್ಟ. ಇದರ ವೇಗವೇ ಇದರ ಮತ್ತೊಂದು ವೈಶಿಷ್ಟ್ಯತೆ. ಈ ಬೈಕಿನಲ್ಲಿ ನಾಲ್ಕು ಚಕ್ರದ ವಾಹನದಂತೆ ಹಿಮ್ಮುಖ ಚಾಲನಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರರ್ಥ ಸವಾರನು ಸ್ಕೂಟರ್ ಅನ್ನು ಹಿಂದೆ ತಳ್ಳುವ ಬದಲು ರಿವರ್ಸ್ ಬಟನ್ ಒತ್ತಿ್ದರೆ ಸಾಕು. ಇದರಲ್ಲಿ ಕಾರ್ ಬ್ಲೂ- ಟೂಥ್ ರೀತಿಯಲ್ಲೇ ಮೊಬೈಲ್ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಬೈಕಿನ ಬ್ಯಾಟರಿಯನ್ನು ಬೇಕಾದಾಗ ಬದಲಾಯಿಸಬಹುದು ಮತ್ತು ಬ್ಯಾಟರಿಯನ್ನು ಹೊರತೆಗೆದು ಹೊರಗೆ ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದಾಗಿದ್ದು, ಓಲಾ ಎಲೆಕ್ಟ್ರಿಕ್ ಬೈಕಿನ ಚಕ್ರಗಳು ಟ್ಯೂಬ್‌ಲೆಸ್ ಇರಲಿವೆ.

ಆಕರ್ಷಕ ದರ ಮತ್ತು ಸಬ್ಸಿಡಿ ಸೌಲಭ್ಯ

ಭಾರತ 1,000 ನಗರಗಳಲ್ಲಿ ಇ-ಸ್ಕೂಟರ್‌ಗಳು ಲಭ್ಯವಿದ್ದು, ಎಸ್1 ಮತ್ತು ಎಸ್1 ಪ್ರೋ ಬೈಕ್‌ಗಳ ವಿತರಣೆ ಪ್ರಾರಂಭವಾಗಿದೆ. ಓಲಾ ಇ ಸ್ಕೂಟರ್‌ಗಳು 10 ಬಣ್ಣಗಳಲ್ಲಿ ಲಭ್ಯವಿದ್ದು, ಕಳೆದ ಸ್ವಾತಂತ್ರೋತ್ಸವದ ದಿನದಂದು ಎಸ್1 ಮತ್ತು ಎಸ್1 ಪ್ರೊ ಇ ಸ್ಕೂಟರ್‌ಗಳನ್ನು ಲಾಂಚ್ ಮಾಡಿದರು. ಸೆಪ್ಟೆಂಬರ್ 9ನ್ನು ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನವನ್ನಾಗಿ ಆಚರಿಸಲಾಗುವುದರಿಂದ ಆ ದಿನದಂದೇ ಭಾವಿಷ್ ಅಗರ್ವಾಲ್ ಅವರು ತಮ್ಮ ಇ-ಸ್ಕೂಟರ್‌ಗಳ ಡೆಲಿವರಿಯನ್ನು ಆರಂಭಿಸಿದರು. ಓಲಾ ಎಸ್1 ಮತ್ತು ಎಸ್1 ಪ್ರೋ ಇ-ಸ್ಕೂಟರ್‌ಗಳ ದೆಹಲಿ ಎಕ್ಸ್-ಶೋರೂಮ್ ಬೆಲೆಗಳು ಕ್ರಮವಾಗಿ ರೂ.99,999/- ಮತ್ತು ರೂ.1,25,999/- ಆಗಿದೆ. ಇವುಗಳ ಮೇಲೆ 15% ರಷ್ಟು ಸಬ್ಸಿಡಿ ಲಭ್ಯವಿದ್ದು, ಸಬ್ಸಿಡಿ ನಂತರ ಇವುಗಳ ಬೆಲೆ ಕ್ರಮವಾಗಿ ರೂ.85,059/- ಮತ್ತು ರೂ.1,10,149/- ಆಗಲಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸಲು ಪ್ರಮುಖ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಾದ ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್, ಎಚ್.ಡಿ.ಎಫ್.ಸಿ ಬ್ಯಾಂಕ್, ಐ.ಸಿ.ಐ.ಸಿ.ಐ ಬ್ಯಾಂಕ್, ಐ.ಡಿ.ಎಫ್.ಸಿ ಫಸ್ಟ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕೊಟಕ್ ಮಹೀಂದ್ರಾ, ಟಾಟಾ ಕ್ಯಾಪಿಟಲ್ ಮತ್ತು ಯೆಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಓಲಾ ಎಲೆಕ್ಟ್ರಿಕ್ ಒಪ್ಪಂದ ಮಾಡಿಕೊಂಡಿದೆ. ಎಸ 1 ಬೈಕಿಗೆ ಇಒi ಕೇವಲ ರೂ.2,999/- ರೂಪಾಯಿಯಿಂದ ಪ್ರಾರಂಭವಾಗಲಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 8.5ಏW ಮೋಟಾರ್ ಮತ್ತು ಎಟರ್ಗೋ ಆಪ್ ಸ್ಕೂಟರಿನಲ್ಲಿ ಇರುವಂಥಹ ಬಾಳೆಹಣ್ಣಿನ ಆಕಾರದ 3.97ಞWh ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದು ಸದ್ಯ ಭಾರತದಲ್ಲಿ ಮಾರಾಟ ಆಗುತ್ತಿರುವ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದೆ. ಇದು ಕಪ್ಪು, ಬಿಳಿ, ಬೂದು, ಹಳದಿ, ಕೆಂಪು, ನೀಲಿ ಮುಂತಾದ ಒಟ್ಟು 10 ಬಣ್ಣಗಳಲ್ಲಿ ಲಭ್ಯವಿದ್ದು, ಇದನ್ನು ದೇಶೀ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ತಮಿಳುನಾಡಿನಲ್ಲಿ ಮೆಗಾ ಫ್ಯಾಕ್ಟರಿ ತೆರೆಯಲಾಗಿದ್ದು, ಇದರ ಉತ್ಪಾದನಾ ಸೌಲಭ್ಯವು 500 ಎಕರೆಗಳಲ್ಲಿದೆ. ಇದು ವಿಶ್ವದ ಅತಿದೊಡ್ಡ ಸ್ಕೂಟರ್ ತಯಾರಿಕಾ ಕಾರ್ಖಾನೆಯಾಗಿದ್ದು, ಮೊದಲಿಗೆ 10 ಲಕ್ಷ ವಾರ್ಷಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಉತ್ಪಾದನೆ ಆರಂಭಿಸಿ, ನಂತರ ಅದನ್ನು 20 ಲಕ್ಷಕ್ಕೆ ಏರಿಸುವ ಗುರಿಯನ್ನು ಕಂಪೆನಿ ಇಟ್ಟುಕೊಂಡಿದೆ. ಅಥರ್ 450 ಎಕ್ಸ್, ಟಿ ವಿ ಎಸ್ ಐ-ಕ್ಯೂಬ್ ಮತ್ತು ಬಜಾಜ್ ಚೇತಕ್ ನಂತಹ ಬೈಕುಗಳೆಲ್ಲವೂ ಒಂದು ಬಾರಿಯ ಚಾರ್ಜ್ನಲ್ಲಿ 100 ಕಿ.ಮೀಗಿಂತ ಕಡಿಮೆ ಕಾರ್ಯಾಚರಣಾ ಸಾಮರ್ಥ್ಯವನ್ನು ಹೊಂದಿದ್ದರೆ ಓಲಾ ಸ್ಕೂಟರ್ 150ಕಿ.ಮೀ ಕಾರ್ಯಾಚರಣಾ ಸಾಮರ್ಥ್ಯವನ್ನು ಹೊಂದಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಪ್ ಆಧಾರಿತ ಕೀಲೆಸ್ ಎಂಟ್ರಿ, ಫುಲ್ ಎಲ್.ಇ.ಡಿ ಲೈಟಿಂಗ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಮತ್ತು ಅತಿದೊಡ್ಡ ದರ್ಜೆಯ ಬೂಟ್ ಸ್ಪೇಸ್ ಇದೆ. ಸ್ಕೂಟರ್ ಇಂಟರ್ನೆಟ್ ಸಂಪರ್ಕಿತ ಸ್ಮಾರ್ಟ್ ವೈಶಿಷ್ಟ್ಯತೆಗಳ ಶ್ರೇಣಿಯನ್ನೂ ಹೊಂದಿದೆ.

ಈ ಇ-ಸ್ಕೂಟರ್ ತನ್ನ ವಿಭಾಗದಲ್ಲಿ ಅತಿದೊಡ್ಡ ಸೀಟ್ ಅಂಡರ್ ಸ್ಟೋರೇಜ್ ಹೊಂದಿದ್ದು, ಎರಡು ಅರ್ಧ ಮುಖದ ಹೆಲ್ಮೆಟ್‌ಗಳನ್ನು ಸೀಟ್ ಕೆಳಭಾಗದಲ್ಲಿ ಇಡಬಹುದು. ಈ ಸ್ಕೂಟರ್ ಸೈಡ್ ಸ್ಟಾಂಡ್ ಕಟ್ ಆಫ್ ಫಂಕ್ಷನ್ (ಗಾಡಿ ಸ್ಡ್ಯಾಂಡ್ ಹಾಕಿದ ತಕ್ಷಣ ಗಾಡಿ ಆಫ್ ಆಗುತ್ತದೆ). ಸಂಪರ್ಕ ವೈಶಿಷ್ಟ್ಯಗಳಿಗಾಗಿ ಇ ಸಿಮ್‌ನ್ನು ಸಹ ಹೊಂದಿರುತ್ತದೆ. ಒಂದು ಬದಿಯ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್ ಮತ್ತು ಹಿಂಭಾಗದಲ್ಲಿ ಅಡ್ಡಲಾಗಿ ಶಾಕ್ ಅಬ್ಸಾರ್ಬರ್‌ನ್ನು ಅಳವಡಿಸಲಾಗಿದೆ. ಜೊತೆಗೆ ಸ್ಲಾಟ್ ಫ್ರಂಟ್ ಮತ್ತು ಡಿಸ್ಕ್ ಬ್ರೇಕ್ ಹೊಂದಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಧ್ಯ ಭಾರತದ 100 ನಗರಳಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನು ನಿರ್ಮಿಸಿದೆ. ಅಲ್ಲಿ ನಿಧಾನಗತಿಯ ಮತ್ತು ವೇಗವಾಗಿ ಎರೆಡು ರೀತಿಯಲ್ಲಿ ಚಾರ್ಜ್ ಮಾಡುವ ಅವಕಾಶ ನೀಡಿದೆ. ಹಾಗೆಯೇ ಮುಂದಿನ ದಿನಗಳಲ್ಲಿ 400 ಕ್ಕೂ ಹೆಚ್ಚು ನಗರಗಳಲ್ಲಿ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗುತ್ತದೆ.

ಪೆಟ್ರೋಲ್ ಚಾಲಿತ ಸ್ಕೂಟರ್‌ಗಳು ಸಾಮಾನ್ಯವಾಗಿ ಪ್ರತೀ ಒಂದು ಮೈಲ್ ದೂರ ಕ್ರಮಿಸುವಾಗ 200 ಗ್ರಾಂ ಇಂಗಾಲವನ್ನು ಹೊರಸೂಸುತ್ತವೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದರ ಅರ್ಧದಷ್ಟು ಅಂದರೆ ಪ್ರತೀ ಮೈಲ್‌ಗೆ 100 ಗ್ರಾಂ ಇಂಗಾಲವನ್ನು ಮಾತ್ರ ಹೊರಸೂಸುವುದರಿಂದ ಇವು ಹೆಚ್ಚು ಪರಿಸರಸ್ನೇಹಿ ಸಾರಿಗೆಯಾಗಿದೆ. ಇವು ಇವು ಹಸಿರುಮನೆ ಅನಿಲಗಳನ್ನು ಹೊರಸೂಸುವುದಿಲ್ಲವಾದ್ದರಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭವಿಷ್ಯದ ಸಾರಿಗೆಯಾಗಿ ಮೂಡಿಬರುವುದರಲ್ಲಿ ಅನುಮಾನವಿಲ್ಲ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *