ಪುಟ್ಟಣ್ಣ ಕಣಗಾಲ್ – ತಿಳಿಯದ ಮಾಹಿತಿಗಳು

ಕನ್ನಡ ಚಿತ್ರರಂಗದ ಕಿರೀಟದ ಅಮೂಲ್ಯ ರತ್ನ ಪುಟ್ಟಣ್ಣ ಕಣಗಾಲ್ 1967 ರಲ್ಲಿ ತ್ರಿವೇಣಿಯವರ ಜನಪ್ರಿಯ ಕಾದಂಬರಿಯಾದ ‘ಬೆಳ್ಳಿ ಮೋಡ’ ಚಲನಚಿತ್ರದಿಂದ ನಿರ್ದೇಶಕರಾಗಿ ಪರಿಚಯವಾದರು ಎಂಬುದು ಎಲ್ಲರಿಗು ತಿಳಿದ ಸಂಗತಿ. ಆದರೆ ಅಸಲಿಗೆ ‘ಬೆಳ್ಳಿ ಮೋಡ’ ಅವರ ಪ್ರಥಮ ನಿರ್ದೇಶನದ ಚಿತ್ರವಲ್ಲ. ಅದಕ್ಕೂ ಮೊದಲು ಪುಟ್ಟಣ್ಣನವರು ಮಲಯಾಳಂ ನಲ್ಲಿ ಐದು ಮತ್ತು ತೆಲುಗಿನಲ್ಲಿ ಒಂದು ಒಟ್ಟು ಆರು ಚಿತ್ರಗಳನ್ನು ನಿರ್ದೇಶಿಸಿದ್ದರು.

ಮಲಯಾಳಂ
1 . ಸ್ಕೂಲ್ ಮಾಸ್ಟರ್ ಕನ್ನಡದ ಕ್ಲಾಸಿಕ್ ಹಿಟ್ ಚಿತ್ರದ ಅವತರಿಣಿಕೆ – 1965
2 . ಕಳಿಂಜು ಕಿಟ್ಟು ತಂಗಂ ತಮಿಳಿನ ತೇಡಿವಂದ ಸೆಲ್ವಂ ಚಿತ್ರದ ಅವತರಿಣಿಕೆ – 1965
3 . ಚೇಟತ್ತಿ – 1965
4 . ಪೂಚಿಕಣ್ಣಿ – ತ್ರಿವೇಣಿಯವರ ಕಾದಂಬರಿ ‘ಬೆಕ್ಕಿನ ಕಣ್ಣು’ ಆಧಾರಿತ – 1966
5 . ಮೇಯರ್ ನಾಯರ್ – ಇದು ಜಗತ್ಪ್ರಸಿದ್ದ ಇಂಗ್ಲಿಷ್ ಕಾದಂಬರಿಕಾರ ಥಾಮಸ್ ಹಾರ್ಡಿಯ ಮೇಯರ್ ಆಫ್ ಕ್ಯಾಸ್ಟರ್ ಬ್ರಿಡ್ಜ್ ಕಾದಂಬರಿಯಿಂದ ಸ್ಫೂರ್ತಿ ಪಡೆದ ಚಿತ್ರ – 1966

ತೆಲಗು
1 . ಪಕ್ಕಲೊ ಬಲ್ಲೆಂ – 1965

ಇವುಗಳ ನಂತರ ಪುಟ್ಟಣನವರು ಕನ್ನಡ ಚಿತ್ರರಂಗಕ್ಕೆ ಎಸ್ ಆರ್ ಪುಟ್ಟಣ್ಣ ಕಣಗಾಲ್ ಎಂದು ಚಿರಪರಿಚಿತರಾದರು. ಇದು ಕನ್ನಡ ಚಿತ್ರರಂಗದಲ್ಲೊಂದು ಹೊಸ ಶಕೆಯ ಪ್ರಾರಂಭವೆಂದರೆ ಅತಿಶಯೋಕ್ತಿಯಲ್ಲ.

Photo credit: The Hindu
  • ಪುಟ್ಟಣ್ಣನವರ ಹೆಸರಿನಲ್ಲಿರುವ ಎಸ್ ಆರ್ ಎಂಬುವ ಆರಂಭಿಕ ಅಕ್ಷರಗಳು ಅವರ ಜನ್ಮನಾಮವಾದ ಸೀತಾರಾಮಶರ್ಮ ಮತ್ತು ಅವರ ತಂದೆ ಎಸ್ ಪಿ ರಾಮಸ್ವಾಮಿಗಳ ಹೆಸರುಗಳನ್ನೂ ಸೂಚಿಸುತ್ತದೆ. ಅವರ ತಾತನ ಹೆಸರು ಪುಟ್ಟಣ್ಣ ಹಾಗಾಗಿ ತಾತನ ಹೆಸರಿನಿಂದಲೇ ಕರೆಯುತ್ತಿದ್ದರಂತೆ.
  • ಪುಟ್ಟಣ್ಣವರು ಚಿಕ್ಕ ವಯಸ್ಸಿನಿಂದಲೇ ದುಡಿಮೆಗಾಗಿ ಡ್ರೈವಿಂಗ್ ಲೈಸನ್ಸ್ ಪಡೆದು ಟ್ರಕ್ ಚಾಲಕರಾಗಿ ಅಲ್ಪ ಗಳಿಕೆ ಮಾಡುತಿದ್ದರು
  • ಬಿ ಆರ್ ಪಂತುಲು ಅವರಲ್ಲಿ ಸಹಾಯಕ ನಿರ್ದೇಶಕರಾಗುವ ಮೊದಲು ಅವರ ಪದ್ಮಿನಿ ಪಿಚ್ಚರ್ಸ್ ಸಂಸ್ಥೆಯಲ್ಲಿ ಕೂಡ ಡ್ರೈವರ್ ಆಗಿಯೇ ಇದ್ದರು.
  • ರತ್ನಗಿರಿ ರಹಸ್ಯ ಚಿತ್ರದ ಚಿತ್ರೀಕರಣದ ಆರಂಭದಲ್ಲಿ ಪಂತುಲು ರವರ ಸಹಾಯಕ ನಿರ್ದೇಶಕ ಸಿಂಗಮುತ್ತು ಲಭ್ಯವಿಲ್ಲದ ಕಾರಣ ಆ ಹೊಣೆಗಾರಿಕೆ ನಿರ್ವಹಿಸಲು ಪಂತುಲು ಸೂಚಿಸಿದರು. ಅಂದಿನಿಂದ ಪುಟ್ಟಣ್ಣನವರ ನಿರ್ದೇಶನ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆಯ ಪರ್ವಾರಂಭವಾಯಿತು.
  • ರಂಗಭೂಮಿಯ ಮೇರು ನಟ ಮಾಸ್ಟರ್ ಹಿರಣ್ಣಯ್ಯ ನವರು ಪುಟ್ಟಣನವರು ನಿರ್ದೇಶಿಸಿದ ‘ಋಣಮುಕ್ತಳು’ (ಅನುಪಮಾ ನಿರಂಜನ ರವರ ಕಾದಂಬರಿ ಆಧಾರಿತ) ಚಿತ್ರದಲ್ಲಿ ಕುತಂತ್ರಿಯೊಬ್ಬನ ಪಾತ್ರದಲ್ಲಿ ನಟಿಸಿದರಾದರು ಅದಕ್ಕೂ ಮೊದಲು ಪುಟ್ಟಣ್ಣನವರು ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಿಗಾಗಿ ನಿರ್ದೇಶಿಸುತಿದ್ದ ‘ಕಾನ್ಸ್ಟೇಬಲ್ ಕಸ್ತೂರಿ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕಾಗಿತ್ತು ಆದರೆ ದುರದೃಷ್ಟವಶಾತ್ ಆರಂಭಿಕ ಚಿತ್ರೀಕರಣ ನೆಡೆಯುತ್ತಿರುವಾಗಲೇ ನಿರ್ಮಾಪಕ ಹಾಗು ನಿರ್ದೇಶಕರ ನಡುವೆ ಬಿನ್ನಾಭಿಪ್ರಾಯ ಉಂಟಾಗಿ ಆ ಚಿತ್ರವೂ ನಿಂತೇ ಹೋಯಿತು.

ಡಿ. ಎನ್. ಸುರೇಶ್

ಹಿರಿಯ ಪತ್ರಕರ್ತರು

Related post

3 Comments

  • Nice information Suri D N. Happy to note

  • ಉತ್ತಮ ಮಾಹಿತಿ… ಧನ್ಯವಾದಗಳು ಸುರೇಶ್ ಅವರೇ …..🙏

  • ಪುಟ್ಟಣ್ಣ ಕಣಗಾಲ್ ಎನ್ನುವ ಪದಕುಂಜವೇ ಸಾಕು ಮೈ ನವಿರೇಳಿಸಲು.. ಅವರ ಅರಿಯದ ಜೀವನದ ಬಗ್ಗೆ ಮಾಹಿತಿ ದೊರಕುವುದು ಕಷ್ಟ. ನನ್ನ ಹಿರಿಯ ಮಿತ್ರರು ಅವರ ಜೀವನದ ಬಗ್ಗೆ ತಿಳಿಸಿರುವುದು ನಮ್ಮ ಸೌಭಾಗ್ಯವೇ ಸರಿ..

Leave a Reply

Your email address will not be published. Required fields are marked *