ಪುಟ್ಟ ಮಗು
ನಮ್ಮ ಮನೆಯ ಪುಟ್ಟ ಮಗು
ಶಾಲೆಗೊರಟಿತು,,,
ಹೊರಡುವಾಗ ಮುದ್ದು ನಗು
ಟಾಟಾ ಮಾಡಿತು.
ನೋಡಲೆಂತ ಸುಂದರ,,
ನೋಡು ಬಾರೊ ಚಂದಿರ.!!೧!!
ಅಮ್ಮ ಮಾಡಿದಂತ ತುತ್ತು
ಒಡಲು ತುಂಬಿತು.
ಮಮತೆಯಿಂದ ಕೊಟ್ಟ ಮುತ್ತು
ಪ್ರೀತಿ ತಂದಿತು.
ಕರುಳ ಬಳ್ಳಿ ಸುಂದರ
ನೋಡು ಬಾರೊ ಚಂದಿರ.!!೨!!
ಹಲ್ಲು ಉಜ್ಜಿ ಮೊಗವ ತೊಳೆದು
ಶಿವಗೆ ನಮಿಸಿದೆ.
ನಮಿಸುವಾಗ ಭಕ್ತಿ ಬೆಳೆದು
ವಿಧ್ಯೆ ಬಯಸಿದೆ
ಎಂಥ ಭಕ್ತಿ ಸಾಗರ
ನೋಡು ಬಾರೊ ಚಂದಿರ.!!೩!!
ಅಜ್ಜಿಗೊಂದು ತಾತಗೊಂದು
ಪಪ್ಪಿ ಕೊಟ್ಟಿತ್ತು.
ನನ್ನ ಬಳಿಗೆ ಮಗುವು ಬಂದು
ಟು ಬಿಟ್ಟಿತು.
ಕೋಪವೆಷ್ಟು ಸುಮಧುರ
ನೋಡು ಬಾರೊ ಚಂದಿರ.!!೪!!
ಅಪ್ಪನ ಜೊತೆ ಗಾಡಿ ಏರಿ
ಹೆಂಗೆ ಕೂತಿದೆ.
ಚಂದಲೋಕಕೂನು ಹಾರಿ
ಬಿಡದೆ ಜಗ್ಗದೆ.
ಇವರ ಬಂದ ಸುಂದರ
ನೋಡು ಬಾರೊ ಚಂದಿರ.!!೫!!
ತಲೆಯ ಬಾಚಿ ಚುಕ್ಕಿ ಇಟ್ಟು
ನೋಡು ಸಿಂಗಾರ.
ಶಾಲೆಗೊರಟ ಮನೆಯ ಬಿಟ್ಟು
ಮುದ್ದು ಬಂಗಾರ.
ಶಾಲೆಯೊಂದು ಮಂದಿರ
ನೋಡು ಬಾರೊ ಚಂದಿರ.!!೬!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ