ಪುನೀತ
‘ಮೌರ್ಯ’ ‘ವಂಶಿ’ ‘ಅರಸು’ ಡಾ’ರಾಜ್’ ಸುತ
‘ಪೃಥ್ವಿ’ ತೂಕದ ಪಾರ್ವತಮ್ಮ ‘ಅಂಜನಿ ಪುತ್ರ’
‘ನಿನ್ನಿಂದಲೇ’ ‘ಬೆಟ್ಟದ ಹೂವು’ ಸಾಧ್ಯ ಎನಲು
‘ಚಲಿಸುವ ಮೋಡಗಳ’ ಬೆನ್ನೇರಿದ’ಭಾಗ್ಯವಂತ’
‘ಯಾರಿವನು’ ‘ದೊಡ್ಮನೆ ಹುಡುಗ’ ಎಂದ
ಅಶ್ವಿನಿಯವರಿಗೆ ‘ಮೈತ್ರಿ’ ‘ಪ್ರೇಮದ ಕಾಣಿಕೆ’
ಕೊಟ್ಟ ‘ರಾಮ’ ‘ಪರಶುರಾಮ ‘ನಮ್ಮ ಬಸವ’
‘ಮಿಲನ’ದ ಶುಭಫಲ ‘ಎರಡು ನಕ್ಷತ್ರಗಳು’
‘ಯಾರೇ ಕೂಗಾಡಲಿ’ ‘ಬಿಂದಾಸ್’ ನಟನೆ ಧೀರ
‘ರಣವಿಕ್ರಮ’ನಂತೆ ಬದುಕಿದ ‘ರಾಜಕುಮಾರ’
ಯುವಕರ ಮೆಚ್ಚಿನ ‘ಜಾಕಿ’ ‘ಅಣ್ಣಾ ಬಾಂಡ್’
‘ಫ್ಯಾಮಿಲಿ ಗಳ ಪವರ್’ ಹೆಚ್ಚಿಸಿದ ‘ಅಪ್ಪು’
‘ಅಭಿ’ಮಾನಿ ದೇವರುಗಳ ‘ಭಕ್ತ ಪ್ರಹ್ಲಾದ’
ಅನಾಥರ ನಾಥ ಈ ಜೀವಂತ ‘ಪರಮಾತ್ಮ’
ಕೋಟಿ ಕೋಟಿ ‘ವೀರ ಕನ್ನಡಿಗ’ ‘ಹುಡುಗ’
ಅಭಿಮಾನಿಗಳ ‘ಕನ್ನಡದ ಕೋಟ್ಯಾಧಿಪತಿ’
ಕವಲು ದಾರಿಯಲ್ಲಿ ಕಾದಿತ್ತು ‘ಚಕ್ರವ್ಯೂಹ’
ಕಣ್ಣು ಮುಚ್ಚಿದರು ‘ಶಿವ ಮೆಚ್ಚಿದ ಕಣ್ಣಪ್ಪ’
‘ಆಕಾಶ’ದೊಳೊಂದಾಯ್ತು ‘ಪವರ್ ಸ್ಟಾರ್’
‘ವಸಂತಗೀತ’ದ ಮನೆಯಲಿ ಶೋಕಗೀತ
‘ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ
ನೀವೇ ಚಿತ್ರರಂಗ ‘ಅಜಯ’ ರಾಜಕುಮಾರ’ರು
‘ಯುವರತ್ನ’ ‘ನಟಸಾರ್ವಭೌಮ’ರ ಚಿತ್ರಗಳ
ವೀಕ್ಷಿಸಿದ ನಾವೇ ಧನ್ಯ ಧನ್ಯ ‘ಪುನೀತ’ರು
ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259
ವರ್ಣಚಿತ್ರ : ಸೃಷ್ಟಿ ಗುರುಸಿದ್ಧಯ್ಯಾ ಸ್ವಾಮಿ
4 Comments
👌 sir
Super sir
ಧನ್ಯವಾದಗಳು
ಧನ್ಯವಾದಗಳು