ಪೇರಲ ಹಣ್ಣು ಮತ್ತು ಮರ

ಪೇರಲ ಹಣ್ಣು ಮತ್ತು ಮರ

ಶ್ರಾವಣ ಮಾಸದ ಹಬ್ಬಗಳ ಆಚರಣೆಯಲ್ಲಿ ದೇವರಿಗೆ ಅರ್ಪಿಸುವ ಹಣ್ಣುಗಳಲ್ಲಿ ಪೇರಲ ಹಣ್ಣು ಒಂದು. ರಜೆಯಲ್ಲಿ ಪ್ರವಾಸಕ್ಕೆ ಹೊರಟಾಗ, ರೈಲುಗಳಲ್ಲಿ ಪ್ರಯಾಣಿಸುವಾಗ ಅತಿ ಕಡಿಮೆ ಬೆಲೆಗೆ ಸಿಗುವ ಹಾಗು ಸವಿಯಲು ಸೊಗಸಾದ ಹಣ್ಣು ಈ ಪೇರಲೆ.

ಏಶಿಯಾದ್ಯಂತ ಉಷ್ಣವಲಯದ ಋತುವಿನಲ್ಲಿ ಸೊಗಸಾಗಿ ಪೇರಲ ಮರ ಬೆಳೆಯುವುದು. ಇದು ಎಲ್ಲ ಮಾಸಗಳಲ್ಲಿಯೂ ಹಣ್ಣುಗಳನ್ನು ನೀಡುತ್ತದೆ ಎನ್ನುವುದು ವಿಶೇಷ. “ಸೀಬೆ ಹಣ್ಣು, ಅಲಾಬಾದ್, ಚೇಪೆ ಹಣ್ಣು, ಪೆರು” ಎಂದು ಮುಂತಾದ ಹೆಸರಿಂದಲೂ ಸಹ ಕರೆಯಲ್ಪಟ್ಟಿದೆ. ಈ ಹಣ್ಣು ಸವಿಯಲು ಅತ್ಯಂತ ರುಚಿಕರವೂ ಹೌದು. ಹಣ್ಣುಗಳ ರಾಣಿ ಎಂದೇ ಹೆಸರುವಾಸಿಯಾಗಿರುವ ಪೇರಲ ಹಣ್ಣು ಹಾಗು ಮರವು ಬಹಳಷ್ಟು ಸದ್ಗುಣಗಳನ್ನು ಹೊಂದಿದೆ.

ಪೇರಲ ಹಣ್ಣುಗಳಲ್ಲಿ ಪೊಟ್ಯಾಸಿಯಂ, ಪ್ರೋಟೀನ್, ವಿಟಮಿನ್ ‘ಬಿ6’, ಮ್ಯಾಗ್ನಿಷಿಯಂ, ಹೊಂದಿದ್ದು ಹೇರಳವಾಗಿ ವಿಟಮಿನ್ “ಸಿ” ಹೊಂದಿದೆ. ದೇಹದ ತೂಕ ಇಳಿಸಲು ಇಚ್ಛಿಸುವವರು ಈ ಹಣ್ಣನ್ನು ತಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ತೂಕವನ್ನು ಇಳಿಸಲು ಅತ್ಯಂತ ಸಹಾಯಕಾರಿ ಏಕೆಂದರೆ ಇದರಲ್ಲಿ ಕ್ಯಾಲರಿ ಕಡಿಮೆ ಇರುತ್ತದೆ. ಪೇರಲ ಹಣ್ಣಿನಲ್ಲಿ ನಾರಿನ ಅಂಶ ಹೇರಳವಾಗಿ ಇರುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಈ ಹಣ್ಣಿನ ಸೇವನೆಯು ಅತ್ಯಂತ ಪರಿಣಾಮಕಾರಿ ಏಕೆಂದರೆ ಪೇರಲ ಹಣ್ಣಿನ ಸೇವನೆಯಿಂದ ನಾರಿನಂಶವು ಸಕ್ಕರೆ ಅಂಶವನ್ನು ರಕ್ತದಲ್ಲಿ ನಿಯಂತ್ರಣಕ್ಕೆ ತರುವುದಲ್ಲದೆ ಸಕ್ಕರೆ ಮಟ್ಟವನ್ನು ಏಕಾಏಕಿ ಏರದಂತೆ ನಿಯಂತ್ರಿಸುತ್ತದೆ. ಪೇರಲ ಹಣ್ಣಿನ ಹೇರಳವಾದ ವಿಟಮಿನ್ “ಸಿ” ದೇಹದಲ್ಲಿ ಉತ್ಪತ್ತಿಯಾಗುವ ಫ್ರೀ ರಾಡಿಕ್ / ಟಾಕ್ಸಿನ್ ಗಳನ್ನು ಹೀರಿ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲ್ಲು ಸಹಕಾರಿಯಾಗಿದೆ. ಇಂದಿನ ಕಾರ್ಯನಿರತ ಪ್ರಪಂಚದಲ್ಲಿ ಅತಿ ಒತ್ತಡದಿಂದ ಜನರು ಕ್ಯಾನ್ಸರ್ ನಂತಹ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಇಂತಹ ಖಾಯಿಲೆಗಳಿಂದ ದೂರವಿರಲು ನಿತ್ಯ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಇಂತಹ ಮಾರಕ ಖಾಯಿಲೆಗಳಿಂದ ನಮ್ಮನ್ನು ದೂರವಿಡುವದಲ್ಲದೆ ಚರ್ಮದ ಕಾಂತಿಯನ್ನು ವೃದ್ಧಿಸಿ ಸುಕ್ಕನ್ನು ದೂರವಿಡುತ್ತದೆ. ಪೇರಲ ಹಣ್ಣಿನ ನಾರಿನ ಅಂಶ ಕರುಳ ಕ್ರಿಯೆಯನ್ನು ಸರಾಗವಾಗಿಸುತ್ತದೆ. ಅಸಿಡಿಟಿ, ಮಲಬದ್ಧತೆ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇನ್ನು ಪೇರಲ ಮರದ ಎಲೆಗಳು ಸಹ ಬಹಳಷ್ಟು ಅರೋಗ್ಯ ಗುಣಗಳನ್ನು ಹೊಂದಿರುತ್ತದೆ. ಆಯುರ್ವೇದದಲ್ಲಿಯೂ ಪೇರಲ ಎಲೆಯನ್ನು ಔಷಧಗಳಿಗೆ ಬಳಸುತ್ತಾರೆ. ಹಲ್ಲು ಒಸಡುಗಳಲ್ಲಿ ನೋವಿದ್ದಾಗ ಪೇರಲ ಎಲೆಗಳನ್ನು ಕುದಿಸಿ ಅದರ ನೀರಿನಲ್ಲಿ ಪ್ರತಿನಿತ್ಯ 4-5 ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿನ ಬ್ಯಾಕ್ಟೇರಿಯ ದೂರವಾಗಿ ನೋವನ್ನು ಕಡಿಮೆ ಮಾಡುತ್ತದೆ. ಎಲೆಗಳನ್ನು ಕುದಿಸಿ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ, ಮೊಡವೆಗಳು ನಿವಾರಿಸಲು ಉಪಯುಕ್ತ. ಪೇರಲ ಎಲೆಗಳು ಡೆಂಗ್ಯೂ ಜ್ವರ ನಿವಾರಿಸಲು, ಕೂದಲಿನ ಕಾಂತಿಯನ್ನು ಹೆಚ್ಚಿಸಲು, ಮಧುಮೇಹ ನಿಯಂತ್ರಿಸಲು, ಪುರುಷರಲ್ಲಿ ವೀರ್ಯವೃದ್ಧಿ ಉಂಟುಮಾಡಲು ಪರಿಣಾಮಕಾರಿ.

ಇತ್ತೀಚಿನ ದಿನಗಳಲ್ಲಿ ಮನೆಯಂಗಳದಲ್ಲಿ ಪೇರಲ ಸಸ್ಯವನ್ನು ಬೆಳೆಸುವತ್ತ ಮನಸ್ಸು ಮಾಡಿದವರಿಗೆ ಹಾಗು ಮುಂದೆ ಬೆಳೆಸಬೇಕೆಂಬುವರಿಗೆ ಪೇರಲ ಸಸ್ಯದ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಶಿಲ್ಪ

Related post

Leave a Reply

Your email address will not be published. Required fields are marked *