ಪ್ರತ್ಯಗಾತ್ಮ ಚಿಂತನ (ನೇನಂಶಿ) – 9

ಕರುಣಾಳು ನೀನಾಗು ಪರಿವಾರದವರಲ್ಲಿ
ಪರಿಹಾರ ಕಂಡು ಹಿಡಿ ತೊಡಕುಗಳು ಬರಲು,
ಅರಿಯು ಎದುರಾಗಿರಲು ಕರವಾಳ ನೀನಾಗು
ಅರಿ ಭಯಂಕರನಾಗು- || ಪ್ರತ್ಯಗಾತ್ಮ ||

ಹೊಟ್ಟಿರದ ಬೀಜವನು ಬಿತ್ತಿದರೆ ಮೊಳೆಯುವುದೆ?
ಹೊಟ್ಟು ನಿಃಸತ್ವವೆಂಬ ನುಡಿ ಸಲ್ಲ,
ಸೃಷ್ಟಿಯೊಳಗಾವುದೂ ನಿಷ್ಪ್ರಯೋಜಕವಲ್ಲ
ಹೊಟ್ಟು ರಕ್ಷಾ ಕವಚ- || ಪ್ರತ್ಯಗಾತ್ಮ ||

ಓದು ಬೇಕೇ ಬೇಕು ವಿಷಯ ಸಂಗ್ರಹಣಕ್ಕೆ
ಓದು ಮುಗಿವುದು ಎಂದು? ಅದಕೆ ಕೊನೆಯುಂಟೆ?
ಓದು, ಓದಿನ ಮೇಲೆ ಓದು, ಹೀಗಾಗಿರಲು
ಓದು ಬರಹಕೆ ಶತ್ರು- || ಪ್ರತ್ಯಗಾತ್ಮ ||

ಕತ್ತೆ ಎರಡರ ನಡುವೆ, ಹುತ್ತವೆರಡರ ನಡುವೆ
ಮತ್ತೆ ಹೊಡೆದಾಡುವರ ನಡುವೆ ಹೋಗದಿರು,
ಕತ್ತು ಬಗ್ಗಿಸಿಕೊಂಡು ಮುಂದೆ ನೋಡದೆ ಮತ್ತೆ
ರಸ್ತೆಯಲಿ ನಡೆಯದಿರು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’

ವಾಚನ – ಗೌರಿ ದತ್ತ ಏನ್ ಜಿ

Related post

Leave a Reply

Your email address will not be published. Required fields are marked *