ಪ್ರತ್ಯಗಾತ್ಮ ಚಿಂತನ (ನೇನಂಶಿ) – 15

ನಿಮ್ಮ ಕುಲದವರಾರೊ ನಿಧನರಾದರು ಎಂಬ
ದುಮ್ಮಾನ ತರುವಂಥ ಸುದ್ದಿ ತಿಳಿದೊಡನೆ
ಉಮ್ಮಳಿಸದೆಯೆ ಅವರ ಅಂತ್ಯ ಸಂಸ್ಕಾರಕ್ಕೆ
ಒಮ್ಮತದಿ ನೆರವಾಗು- || ಪ್ರತ್ಯಗಾತ್ಮ ||

ಶವದ ವಾಹಕರಾರೂ ಇರದೆ ತೊಳಲಾಡುತಿರೆ
ಅವರ ನೀ ಸಂತೈಸಿ ಜನರ ಕಲೆ ಹಾಕು,
ಶವದ ವಾಹಕನಾಗಿ ಕಷ್ಟದಲಿ ನೆರವಾಗು
ಅವಮಾನವೇನಿಲ್ಲ- || ಪ್ರತ್ಯಗಾತ್ಮ ||

ಸಿರಿವಂತನಾದವಗೆ ಸರಸತಿಯ ಒಲವಿಲ್ಲ
ಸರಸತಿಯು ಒಲಿದವನಿಗೆ ಸಿರಿ ಒಲಿಯಲಿಲ್ಲ
ಸರಸತಿಯ ವರಪಡೆದ ಸಿರಿವಂತರಿಳೆಯೊಳಗೆ
ಬೆರಳೆಣಿಕೆ; ಬಹಳಿಲ್ಲ- || ಪ್ರತ್ಯಗಾತ್ಮ ||

ಸತಿಪತಿಗಳೊಂದಾಗಿ ಬಾಳುವುದು ಅಪರೂಪ
ಮತಭೇದದಿಂದಾಗಿ ವಿರಸವೇ ಹೆಚ್ಚು
ಸತಿಯೊಮ್ಮೆ ಪತಿಯೊಮ್ಮೆ ಮೇಲುಗೈ ಪಡೆಯುವರು
ಸತತ ಹೋರಾಟ ಬಾಳ್- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’

Related post

Leave a Reply

Your email address will not be published. Required fields are marked *