ಪ್ರತ್ಯಗಾತ್ಮ ಚಿಂತನ (ನೇನಂಶಿ) – 18

ಅನ್ನ ಭೂಮಿಯ ಋಣವು ನೀರು ಬಾನಿನ ಋಣವು
ನಿನ್ನ ಜನುಮವೆ ತಾಯಿ ತಂದೆಗಳ ಋಣವು
ಎನ್ನದಿರು ‘ಋಣಿ’ ಎಂದು ಋಣ ಮುಕ್ತನೆಂತಪ್ಪೆ?
ಚೆನ್ನಾಯ್ತು ಸುಮ್ಮನಿರು -||ಪ್ರತ್ಯಗಾತ್ಮ||

ಯಾರ ಋಣವನು ಯಾರು ತೀರಿಸುವರೈ ಹೇಳು
ನೀರ ಋಣ ಅನ್ನ ಋಣ ತೀರಿಸುವರಾರು?
ನೇರವಾಗಿಯೆ ಇನಿತು. ಮರೆಯಲ್ಲಿ ಇನ್ನೆನಿತೊ!
ಬೇರು ಬಿಟ್ಟಿದೆ ಋಣವು -||ಪ್ರತ್ಯಗಾತ್ಮ||

ವಿದ್ಯೆ ಗುರುವಿನ ಋಣವು; ಪ್ರತಿಭೆ ದೇವರ ಋಣವು
ಬುದ್ಧಿ ಹಿರಿಯರ ಋಣವು; ಕಾವ್ಯ ಕವಿ ಋಣವು
ಸಿದ್ಧಿ ಗಳಿಸಲಸಾಧ್ಯ ಅವರಿವರ ಋಣವಿರದೆ
ಶುದ್ಧ ಮಾನಸನಾಗು- ||ಪ್ರತ್ಯಗಾತ್ಮ||

ಎನ್. ಶಿವರಾಮಯ್ಯ ‘ನೇನಂಶಿ’

Related post

Leave a Reply

Your email address will not be published. Required fields are marked *