ಪ್ರತ್ಯಗಾತ್ಮ ಚಿಂತನ (ನೇನಂಶಿ)

ಶ್ರೀವಾಣಿ ಕಲ್ಯಾಣಿ ಅಜನ ಪಟ್ಟದ ರಾಣಿಭಾವನಾ ಪ್ರಕಟಣೆಗೆ ಚೋದಿಸೈ ಮನವ |ಆವ ವಾಙ್ಮಂತ್ರದಿಂ ರಸಋಷಿಗಳಾದರೋಆವಾಹಿಸುವೆನದನೆ- || ಪ್ರತ್ಯಗಾತ್ಮ ||

ಸರ್ವಭಾಷಾಮಯೀ ವಿಶ್ವಭಾರತಿ ತಾನುಗೀರ್ವಾಣಿ ಕಲ್ಯಾಣಿ ಅಮೃತ ರೂಪಿಣಿಯು |ಸರ್ವಮಂಗಳೆ ವರದೆ ವಾಕ್ ಶುದ್ಧಿ ವಾಕ್ ಸಿದ್ಧಿಸರ್ವದಾ ದಯೆಗೆಯ್ಗೆ- ಪ್ರತ್ಯಗಾತ್ಮ ||

ಪೂರ್ಣವನು ಪೂರ್ಣದಿಂ ಕೂಡಿ ಕಳೆದರೂ ಕೂಡಪೂರ್ಣವೇ ಉಳಿಯುವುದು ಕಡೆಗೆ ಎಂದೆಂದೂ |ಪೂರ್ಣವಿದು ಪೂರ್ಣವದು ಪೂರ್ಣದಿಂದಲೆ ಎಲ್ಲಪೂರ್ಣತೆಗೆ ಶರಣೆನ್ನು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’

ವಾಚನ – ಗೌರಿ ದತ್ತ ಏನ್ ಜಿ

Related post