ಪ್ರತ್ಯಗಾತ್ಮ ಚಿಂತನ (ನೇನಂಶಿ) – 19

ಹುಟ್ಟಿದೂರದು ಮತ್ತೇ ಜಾತಿ-ಮತ-ಧರ್ಮಗಳು
ಹುಟ್ಟಿಸಿದ ತಾಯ್ತಂದೆ, ಒಡ ಹುಟ್ಟಿದವರು,
ಇಷ್ಟ ದೈವವು ಕಡೆಗೆ ಬಂಧು ಬಾಂಧವರೆಲ್ಲ
ಒಟ್ಟು ಆಕಸ್ಮಿಕವೊ- || ಪ್ರತ್ಯಗಾತ್ಮ ||

ತಬ್ಬಲಿಯ ಮಗುವೊಂದು ಕಣ್ಣೆದುರಲಿರುವಾಗ
ತಬ್ಬಿ ಮುದ್ದಿಸಬೇಡ ನಿನ್ನ ಮಗುವನ್ನು
ಉಬ್ಬೆಗದೊಳಾ ಮಗುವು ಕೊರಗಿ ಮರುಗುವುದೇನೊ !
ಸಭ್ಯತನವಲ್ಲವದು- || ಪ್ರತ್ಯಗಾತ್ಮ ||

ಕಲಿತಿರುವೆನೆಂಬುದದು ಹಿಡಿಯನಿತು ಓ ಮರುಳೆ !
ಕಲಿಯದಿರುವುದು ಬಾನಿನಗಲದನಿತುಂಟು
ಕಲೆಯ ದೇವತೆ ಇನ್ನೂ ಓದುತಿಹಳೆನಲು ನೀ
ಕಲಿತುದೇಂ ಸಾಕಾಯ್ತೆ- || ಪ್ರತ್ಯಗಾತ್ಮ ||

ನೆರೆಯವರ ಕುಲವೇನೊ ಊರು ಕೇರಿಗಳೇನೊ
`ನೆರೆ’ ಎಂದು ನಮ್ಮ ಮನೆ ಕೀಲಿಕೈ ಕೊಡೆವೆ?
ಪರರಾದರೇನಂತೆ ದ್ರೋಹ ಬಗೆಯುವರೇನು?
ಅರಿ, ನಂಬಿಕೆಯೆ ದೈವ – || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ

Related post

Leave a Reply

Your email address will not be published. Required fields are marked *