ಪ್ರತ್ಯಗಾತ್ಮ ಚಿಂತನ (ನೇನಂಶಿ) – 21

ಪ್ರತ್ಯಗಾತ್ಮ ಚಿಂತನ

`ನನ್ನ ಕೋಳಿಯ ಕೂಗು ಕೇಳಿಯೇ ಬೆಳಗಬಹುದು
ನನ್ನೊಲೆಯ ಬೆಂಕಿಯಿಂ ಊರವರ ಊಟ
ನನ್ನಿಂದಲೇ ಎಲ್ಲ’ ಎಂಬ ಮುದುಕಿಯ ಹಾಗೆ
ಇನ್ನು ನಾವಿರಬೇಕೆ ?- || ಪ್ರತ್ಯಗಾತ್ಮ ||

ಬತ್ತಲೆಯ ರಾಜ್ಯದಲಿ ಬಟ್ಟಿ ಉಡುವವ ಹುಚ್ಚ,
ಬತ್ತಲಿರುವನೆ ಹುಚ್ಚ, ಉಟ್ಟವರ ನಡುವೆ
ಮೊತ್ತವಾವುದು ಹೆಚ್ಚೊ ಅದು ಹುಚ್ಚುತನವಲ್ಲ
ಮೊತ್ತಕ್ಕೆ ಕಿಮ್ಮತ್ತು- || ಪ್ರತ್ಯಗಾತ್ಮ ||

ನೆರೆಯೂರಿನಲಿ ಮದುವೆ ಎಂದು ಬೀಗವ ಜಡಿದು
ಹರುಷದಲಿ ಮನೆ ಬಿಟ್ಟು ಪಯಣಿಸಿದರೆಲ್ಲ
ಇರುಳು ಕಳ್ಳನು ಬಂದು ಎಲ್ಲವನು ಕದ್ದೊಯ್ದ,
ಅರಿಸಿನದ ಕೂಳ ಫಲ! – || ಪ್ರತ್ಯಗಾತ್ಮ ||

ಸ್ವಾತಿ ಮಳೆ ಹನಿ ಚಿಪ್ಪಿನಲಿ ಸೇರೆ ಮುತ್ತಹುದು
ಆ ತೋಯ ಕದಳಿಯೊಳು ಪಚ್ಚ ಕರ್ಪೂರ,
ವಾತಾಶನದ ಬಾಯ ಸೇರೆ ಹನಿ ವಿಷವಹುದು
ಪಾತ್ರದೊಳೆ ಗುಣ – ದೋಷ – || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ

Related post

Leave a Reply

Your email address will not be published. Required fields are marked *