ಪ್ರತ್ಯಗಾತ್ಮ ಚಿಂತನ (ನೇನಂಶಿ) – 32

ಶಿವ ಕೊಟ್ಟ ಜೋಳಿಗೆಯ ಗೂಟಕ್ಕೆ ತಗುಲಿಸಿರೆ
ಶಿವ ಬಂದು ಉಣಲಿಕ್ಕಿ ತಣಿಸುವನೆ ಹೇಳು
ಶಿವ ನಾಮ ಧ್ಯಾನದಲಿ ಊರೂರು ತಿರಿದು ಬರೆ
ಶಿವನು ಕರುಣಿಪನೂಟ- || ಪ್ರತ್ಯಗಾತ್ಮ ||

ಮೃಗರಾಜ ತಾನೆಂದು ಗುಹೆಯೊಳಗೆ ಮಲಗಿರಲು
ಮೃಗಗಳೇ ತಾ ಬಂದು ಬಾಯ್ಗೆ ಬೀಳುವುವೆ?
ಮೃಗರಾಜನಾದರೇಂ ಬೇಟೆಯಾಡಲೆ ಬೇಕು
ಜಗದೊಳಗೆ ಶ್ರಮಕೆ ಬೆಲೆ- || ಪ್ರತ್ಯಗಾತ್ಮ ||

ಬೇಸಿಗೆಯ ಬೇಗೆಯನು ತಾಳಲಾರದೆ ಬರಿದೆ
ಘಾಸಿ ಪಟ್ಟರೆ ಗಾಳಿ ಬೀಸುವುದೆ? ಹೇಳು
ಬೀಸಣಿಗೆಯನು ಹಿಡಿದು ಬೀಸಿಕೊಂಡರೆ ಮಾತ್ರ
ಬೀಸುವುದು ಗಾಳಿಯದು- || ಪ್ರತ್ಯಗಾತ್ಮ ||

ದಿನದಿನವು ಇನಿತಿನಿತು ಅಭ್ಯಾಸ ಮಾಡುತಿರೆ
ಕೊನೆಗೆ ದಡ್ಡನು ಕೂಡ ವಿದ್ವಾಂಸನಹನು
ದಿನ ನಿತ್ಯ ಬಾವಿಯಡೆ ಹಗ್ಗ ಉಜ್ಜುತಲಿರಲು
ಘನ ಶಿಲೆಯು ನಯವಹುದು- || ಪ್ರತ್ಯಗಾತ್ಮ ||

ರಚನೆ : ಎನ್. ಶಿವರಾಮಯ್ಯ (ನೇನಂಶಿ)
ವಾಚನ : ಗೌರಿದತ್ತ

Related post

Leave a Reply

Your email address will not be published. Required fields are marked *