ಪ್ರತ್ಯಗಾತ್ಮ ಚಿಂತನ (ನೇನಂಶಿ) – 35

ಯಾವುದೇ ಕ್ರಿಮಿ ಕೀಟ ಹಕ್ಕಿಗಳಿಗಾಹಾರ
ಹಾವುಗಳು ಕಪ್ಪೆಗಳ ತಿಂದು ಜೀವಿಪುವು
ಹಾವು ಮೀನುಗಳೆಲ್ಲ ಗರುಡ ಪಕ್ಷಿಯ ಬಾಯ್ಗೆ
ಜೀವ ಜೀವಕೆ ಉಣಿಸು_ || ಪ್ರತ್ಯಗಾತ್ಮ ||

ಇದು ಗಂಗೆ, ಇದು ಯಮುನೆ, ಇದುವೆ ಗೋದಾವರಿಯು,
ಇದು ಸಿಂಧು, ಕಾವೇರಿ-ನರ್ಮದಾ-ತಪತಿ
ಇದು ತುಂಗೆ, ಇದು ಭದ್ರೆ-ಮನವು ನಿರ್ಮಲವಿರಲು
ಉದಕವೆಲ್ಲವು ತೀರ್ಥ- || ಪ್ರತ್ಯಗಾತ್ಮ ||

ಏನೇನೋ ನೆಪ ಹೇಳಿ ಇನಿಯನಿಂ ಹಣ ಪಡೆದು
ಮನೆಯ ಮುನ್ನಡೆಸುತ್ತ ಅದರೊಳಗೆ ಮಿಗಿಸಿ
ಮಾನ ಹೋಗುವ ವೇಳೆ ಗಂಡನಿಗೆ ನೆರವಪ್ಪ
ಮಾನವತಿ ಸತಿ ಲೇಸು- || ಪ್ರತ್ಯಗಾತ್ಮ ||

ಸತಿ ಸುತರು ಒಂದಾಗಿ ದೂರದೂರಿಗೆ ಹೋಗಿ
ಅತಿ ಬೇಗ ಮರಳದಿರೆ ಪತಿಯು ಕೊರಗುವನು
ಮತಿಗೆಟ್ಟು ಏನೇನೊ ಕೆಡಕುಗಳ ಶಂಕಿಪನು
ಅತಿ ಪ್ರೀತಿಯೇ ಹಾಗೆ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ : ಗೌರಿದತ್ತ

Related post

Leave a Reply

Your email address will not be published. Required fields are marked *