ಪ್ರತ್ಯಗಾತ್ಮ ಚಿಂತನ (ನೇನಂಶಿ) – 46

ರಾಜ್ಯ ಶಾಸನ ಸಭೆಗೆ ಆಯ್ಕೆಯಾಗಿಹ ಜನರು
ವ್ಯಾಜ್ಯವಾಡಲು ತೋಳು ಮಡಿಸಿ ನಿಲ್ಲವರು
ವ್ಯಾಜ್ಯದಲಿ ದಿನವೆಲ್ಲ ಹಾಳು ಮಾಡುವರಯ್ಯ
ರಾಜ್ಯ ಬೊಕ್ಕಸ ಖಾಲಿ- || ಪ್ರತ್ಯಗಾತ್ಮ ||

ಕಚ್ಚಾಟ ಕಿತ್ತಾಟ ನೂಕು ನುಗ್ಗಲಿನಾಟ
ಹುಚ್ಚಾಟ ತಿಕ್ಕಾಟ ಗೋಳು ನರಳಾಟ
ಪೆಚ್ಚಾದ ಜನ ಜಾತ್ರೆ ರಾಜಕೀಯದ ಆಟ
ಕಿಚ್ಚಿಟ್ಟ ಮನೆಯಂತೆ- || ಪ್ರತ್ಯಗಾತ್ಮ ||

ಜೂಜಾಡಿ ಸಿರಿವಂತರಾದವರು ಇಹರೇನು?
ಮೋಜಿನಲಿ ಜೂಜಾಡಿ ಸೋತವರೆ ಎಲ್ಲ
ಜೂಜಾಟ ಒಂದು ಚಟ, ಅದು ಮತಿಯ ಕೆಡಿಸುವುದು
ಜೂಜಾಟ ಬಂಡಾಟ- || ಪ್ರತ್ಯಗಾತ್ಮ ||

ಜೂಜಿನಿಂದಲೆ ದ್ವೇಷ, ಜೂಜಿನಿಂದಲೆ ಕ್ರೋಧ
ಜೂಜಿನಿಂದಲೆ ಕೊಲೆಯು, ವಂಚನೆಯು, ಮೋಸ
ಜೂಜಿನಿಂದಲೆ ಸಕಲ ಸಂಸಾರಗಳ ನಾಶ,
ಜೂಜು ಪಾಪದ ಬೀಜ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)

Related post

1 Comment

  • ನಿಮ್ಮ ಬರಹ ಅತ್ಯದ್ಭುತ ಸರ್.. ನಿಮ್ಮ ಪ್ರತಿಭೆಗೆ ಶರಣು..

Leave a Reply

Your email address will not be published. Required fields are marked *