ಪ್ರತ್ಯಗಾತ್ಮ ಚಿಂತನ (ನೇನಂಶಿ) – 5

ಭಾವದೇವಿಯು ತಾನೆ ಒಲಿದ ಪುಣ್ಯಾತ್ಮರಿಗೆ
ಕಾವ್ಯರಚನೆಯು ಸಾಧ್ಯ; ಬಲ್ಲವನೆ ಬಲ್ಲ,
ಭಾವದೇವಿಯ ಕರುಣೆ ಪ್ರಾಪ್ತವಾಗುವವರೆಗೆ ಸಾವರಿಸಬೇಕಯ್ಯ- || ಪ್ರತ್ಯಗಾತ್ಮ ||

ದಿನ-ವಾರ-ತಿಂಗಳುಗಳಲ್ಲ, ವರುಷಗಳುರುಳೆ
ತಿಣುಕಿದರೂ ಪದವೊಂದ ಬರೆಯದಿರಬಹುದು.
ದಿನವೊಂದರೊಳೆ ಲೆಕ್ಕವಿರದಷ್ಟು ಚರಣಗಳ
ಕನಿಕರಿಸಬಹುದವಳು – || ಪ್ರತ್ಯಗಾತ್ಮ ||

ಅವಳ ಬಗೆಯೇ ಬೇರೆ; ರೀತಿ ನೀತಿಯೇ ಬೇರೆ
ಅವಳಿಚ್ಛೆಯನ್ನರಿಯಲೆಮ್ಮಅಳವಲ್ಲ,
ಅವಳು ಕೊಟ್ಟರೆ ಉಂಟು; ಕೊಡದಿರಲು ಬರಿಯ ಕೈ,
ಕವಿ ಅವಳ ಕೈಗೊಂಬೆ- || ಪ್ರತ್ಯಗಾತ್ಮ ||

ನಾನು ನನ್ನದು ಎಂಬ ಅಹಮಿಕೆಯು ನನಗಿಲ್ಲ
ನಾನು ಬರೆದಿಹ ಕವಿತೆ ಎಂಬುದೂ ಇಲ್ಲ
ನಾನೊಬ್ಬ ಲಿಪಿಕಾರ; ಒಳಗೆ ಕಬ್ಬಿಗನಿಹನು
ನಾನು ಪರತಂತ್ರದವ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ

Related post