ಪ್ರತ್ಯಗಾತ್ಮ ಚಿಂತನ (ನೇನಂಶಿ) – 50

ಹೊಟ್ಟಗಿಲ್ಲದವಂಗೆ ರೊಟ್ಟಿ ಸಿಕ್ಕರೆ ಸಾಕು
ಹೊಟ್ಟೆ ತುಂಬಿದವಂಗೆ ಬಾಯಿ ರುಚಿ ಬೇಕು
ಮೊಟ್ಟೆ ಮಾಂಸಾಹಾರ ಬೇಕು ಬೇರೊಬ್ಬನಿಗೆ
ಎಷ್ಟೊಂದು ವೈಚಿತ್ರ್ಯ! – || ಪ್ರತ್ಯಗಾತ್ಮ ||

ಬಟ್ಟೆಯೇ ಇರದವಗೆ ಮಾನ ಮುಚ್ಚುವ ಆಸೆ
ಬಟ್ಟೆ ಇದ್ದವಗಿನ್ನು ಎರಡು ಜೊತೆ ಆಸೆ
ಪಟ್ಟೆ ಪೀತಾಂಬರವು ಮದುವೆ ಮನೆಗೆಂಬಾಸೆ
ಇಷ್ಟಿದ್ದರಷ್ಟಾಸೆ- || ಪ್ರತ್ಯಗಾತ್ಮ ||

ಹಸಿದ ಹೊಟ್ಟೆಗೆ ಹಲಸು, ಉಂಡ ಬಾಯಿಗೆ ಮಾವು,
ಹಸಿರು ದಾಕ್ಷಿಯು ಬಾಯಿ ಚಪ್ಪರಿಸಲಷ್ಟೆ
ಹಸನಾದ ಮೋಸಂಬಿ – ಸೇಬು ಕಿತ್ತಲೆ ಹಣ್ಣು
ಹಸಿದ ರೋಗಿಗೆ ಉಣಿಸು- || ಪ್ರತ್ಯಗಾತ್ಮ ||

ಬಲಿಯಾಗದಿರು ನೀನು ಯಾವುದೇ ದುಶ್ಚಟಕೆ
ಬಲೆ ಬೀಸಿ ಕೆಡಹುವುದು ಮೇಲೇಳದಂತೆ
ವಿಲವಿಲನೆ ಒದ್ದಾಡಿ ಅದರ ಅಡಿಯಾಳಾಗಿ
ತಲೆಕೆಟ್ಟು ಮರುಳನಹೆ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *