ಪ್ರತ್ಯಗಾತ್ಮ ಚಿಂತನ (ನೇನಂಶಿ) – 57

ತಿಳಿದ ಜ್ಞಾನಿಗೆ ಎಲ್ಲ ಗಿಡ ಬಳ್ಳಿ ಔಷಧವು
ಕಳೆಯ ರೂಪದಿ ಬೆಳೆದ ಮುಳ್ಳುಗಿಡ ಕೂಡ
ಇಳೆಯೊಳಗೆ ಬೆಳೆದಿರುವ ಸಸ್ಯಕೋಟಿಗಳೆಲ್ಲ
ಬೆಲೆಯುಳ್ಳ ಔಷಧವು- || ಪ್ರತ್ಯಗಾತ್ಮ ||

ಕೆಲವು ಗಿಡಗಳ ಬೇರು ಕೆಲವು ಮರಗಳ ತೊಗಟೆ,
ಕೆಲವು ಗಿಡಗಳ ಹೂವು, ಕೆಲವುಗಳ ಕಾಯಿ
ಕೆಲವು ಎಲೆಗಳ ತರಗು, ಕೆಲ ಕೆಲವು ಚಕ್ಕೆಗಳು
ಹಲವು ಬಗೆ ಔಷಧವು- || ಪ್ರತ್ಯಗಾತ್ಮ ||

ವರದಕ್ಷಿಣಿಗೆ ಮೂಲ ವರನಲ್ಲ ನಿಜವ ತಿಳಿ
ವರನ ತಾಯಿಯೊ ಮೇಣು ಅಕ್ಕ ತಂಗಿಯರೊ
ಪರಿಪರಿಯ ಪ್ರಾರ್ಥನೆಗೂ ಇವರು ಮಣಿಯರು ಕಾಣ
ಕರುಬುವುದು ಪೆಣ್ಗೆ ಪೆಣ್- || ಪ್ರತ್ಯಗಾತ್ಮ ||

ತಾನು ಹೆಣ್ಣೆಂಬುದನು ತಾಯಿಯೇ ಮರೆತಿರಲು
ತಾನು ಪಟ್ಟಿಹ ಕಷ್ಟ ಹೆಂಡತಿಯೂ ಮರೆಯೆ
ತಾನು ಗಂಡಾದರೂ ಇಕ್ಕುಳಿದೆಳದೊ ವರನು
ಏನು ದೌರ್ಭಾಗ್ಯವೈ ! || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *