ಪ್ರಶ್ನೆ ?

Human face with question mark. Education and innovation concept.

ಕಣ್ಣು ಮುಚ್ಚಿದರೆ, ಕತ್ತಲು ಎನ್ನುವರು
ಬೀಳುವ ಕನಸುಗಳು ಸ್ಪಷ್ಟವಾಗಿ ಕಾಣಲು
ಬೆಳಕು ಒದಗಿಸಿದವರಾರು?
ಆ ಪಾತ್ರಗಳ ಸೃಷ್ಟಿಸಿದವರಾರು?

ಭೂ ಒಡಲಲ್ಲಿ ಅಂತರ್ಜಲ ಇಲ್ಲವೆನ್ನುವರು
ತೆಂಗಿನ ಒಡಲಲ್ಲಿ ಸಿಹಿ ನೀರ ಒದಗಿಸಿದವರಾರು
ಒಂದೇ ನೆಲ ಒಂದೇ ಜಲ, ಬಿತ್ತುವ ಬೀಜದೊಳು
ಸಿಹಿ ಕಾರವನಿತ್ತವನಾರು.?

ನೆತ್ತರು ಬಗೆದು,ಕುಡಿದು ನಡೆದಾಡುವ ಅಗಾಧ ಯೌವನಿಗ
ನಿನ್ನೆ ಕಣ್ಣಮುಂದಿದ್ದ, ಆ ಅಹಂನಿಂದ ಮೆರೆದಿದ್ದ.
ಇಂದು ಕಣ್ಣ ಮುಂದಿಲ್ಲ. ಆ ರೂಪು ಆ ಯೌವನಕ್ಕೆ ಶವ ಎನ್ನುತಿಹರು. ಆ ಜೀವ ಕದ್ದೋಯ್ದವನಾರು.?

ಇಂದು ಹುಟ್ಟಿ, ನಾಳೆ ಬೆಳೆದು,
ಮತ್ತೊಂದಿನದ ಸಾವಿಗೆ ಹೊಣೆ ಯಾರು?

ಪವನ ಕುಮಾರ ಕೆ ವಿ

ಬಳ್ಳಾರಿ 9900515957

Related post

Leave a Reply

Your email address will not be published. Required fields are marked *