ಪ್ರೀತಿಯ ಮುತ್ತಣ್ಣ – ಶಿವಣ್ಣ

ಮಿಂಚು ಅಥವಾ ಬೆಳಕಿನ ವೇಗ ಈ ಪದಕ್ಕೆ ತಕ್ಷಣ ನೆನಪಿಗೆ ಬರುವುದು ಶಿವರಾಜಕುಮಾರ್.

ಸುಮಾರು 1987 ಇರಬೇಕು ನಾವು 5 ನೇ ಅಥವಾ 4 ನೇ ಕ್ಲಾಸ್ ಓದುತಿದ್ದೆವು ಆಗ ನಮ್ಮ ಶಿವನಗರದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಶಿವಣ್ಣನನ್ನು  ಆಹ್ವಾನಿಸಿದ್ದರು, ಆಗಷ್ಟೇ “ಆನಂದ್” ಚಿತ್ರ ಬಿಡುಗಡೆಗೊಂಡು ಆರಂಭಿಕ ಯಶಸ್ಸು ಕಂಡಿತ್ತು. ಶಿವಣ್ಣ ಬಂದಿದ್ದು ಒಂದು ಹಳದಿ ಟಿ ಶರ್ಟ್ ಮತ್ತು ಒಂದು ಬಿಳಿ ಚಡ್ಡಿಯಲ್ಲಿ. ಅರೆ ಏನಿದು ಚಿಕ್ಕ ಹುಡುಗರಾಗಿದ್ದ ನಮಗೆ ಅವರನ್ನು ಆ ಉಡುಗೆಯಲ್ಲಿ ನೋಡಲು ಏನೋ ಸಂಕೋಚ ಯಾಕೆಂದರೆ ನಾವು ಕೂಡ ಚಡ್ಡಿಯಲ್ಲೇ ಇದ್ದೆವು. ಏನೋ ಖುಷಿ ಶಿವಣ್ಣ ನಮ್ಮ ತರ ಚೆಡ್ಡಿ ಹಾಕೊಂಡಿದ್ದಾನೆ ಅಂತ. ಬಂದಿದ್ದೆ ಶುರುವಾಯಿತು “ಟುವ್ವಿ ಟುವ್ವಿ” ಎಂದು ಕುಣಿತ ಹಾಗೂ ಯಾರೋ ಹಾಕಿದ ಹೂಮಾಲೆಯನ್ನು ಸರ್ರನೆ ತೆಗೆದು ಮುಂದೆ ಕೂತ ನಮ್ಮೆಲ್ಲರ ಮೇಲೆ ಎಸದದ್ದು, ಅದು ಆ ಮನುಷನ್ಶಿಗಿರುವ ನಿಜವಾದ ಫೋರ್ಸ್, ಅಭಿನಯ, ಸಂಭಾಷಣೆ ಒಪ್ಪಿಸುವ ರೀತಿ ಎಲ್ಲವು ವೇಗ.

“ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ” ಈ ಮೂರು ಚಿತ್ರಗಳು ಶತದಿನೋತ್ಸವ ಆಚರಿಸಿ ಶಿವಣ್ಣ “ಹ್ಯಾಟ್ರಿಕ್ ಹೀರೋ” ಆದರು. ನಂತರ ತುಂಬಾ ಒಳ್ಳೆಯ ಸಿನಿಮಾಗಳನ್ನು ಕೊಟ್ಟರು,  ಜನುಮದ ಜೋಡಿ ಚಿತ್ರದವರುಗೂ ಒಂದು ಅಂತವಾದರೆ ಓಂ ನಂತರದ್ದು ಇನ್ನೊಂದು ಮಜಲು. ಅವರ 50 ನೇ ಚಿತ್ರ “ಎಕೆ 47 ” ಆದರೆ 100 ನೇ ಚಿತ್ರ “ಮೈಲಾರಿ” ಹಾಗ ನಾವು ಕಾಲೇಜು ಮುಗಿಸಿ ಉದ್ಯೋಗದಲ್ಲಿದೆವು. ಇದು ನಿಜಕ್ಕೂ ಚಲನಚಿತ್ರದಲ್ಲಿನ  ಚಂಡಮಾರುತ.

ಕಾದಂಬರಿ ಆಧಾರಿತ ಚಿತ್ರಗಳು ಮೃತ್ಯುಂಜಯ, ಮಿಡಿದ ಶ್ರುತಿ, ಅದೇ ರಾಗ ಅದೇ ಹಾಡು, ಸಂಯುಕ್ತ ಇತ್ಯಾದಿಗಳು. ಇದೆಲ್ಲರ ಕ್ರೆಡಿಟ್ಸ್ ಶ್ರೀ ವರದಪ್ಪ ನವರಿಗೆ ಸಲ್ಲುತ್ತದೆ.

“ಮುತ್ತಣ್ಣ” ಚಿತ್ರದಲ್ಲಿನ ಮುದ್ದಾದ ಅಭಿನಯ, “ಗಲಾಟೆ ಅಳಿಯಂದಿರು” ಚಿತ್ರದಲ್ಲಿನ ಹಾಸ್ಯ ನಟನೆ, ಅಷ್ಟೇ ಯಾಕೆ “ಚಂದ್ರೋದಯ” ದಂತ ನಿಧಾನಗತಿಯ ಸಿನಿಮಾ ದಲ್ಲಿ ಒಂದು ಪುಟ್ಟ ಪಾತ್ರ ಆದರೆ ಮುಖ್ಯ ಪಾತ್ರದಲ್ಲಿ ಶಿವಣ್ಣ ಬಂದು ಒಂದು ಡಾನ್ಸ್ ಕೂಡ ಹಾಡಿ ಒಂದು ಅರ್ಧ ಗಂಟೆಯಷ್ಟು ಬಂದು ಹೋಗುತ್ತಾರೆ,  ಆ ಅವಧಿಯಲ್ಲಿನ ಅವರ ಅಭಿನಯ ನಿಜಕ್ಕೂ ಬಿರುಗಾಳಿ. ಎಷ್ಟೋ ಜನ ಶಿವಣ್ಣ ಬಂದು ಹೋದಮೇಲೆ ಚಿತ್ರಮಂದಿರದಿಂದ ಕಾಲ್ತೆಗೆಯುವುದನ್ನು ನಾವು ಕಂಡಿದ್ದೇವೆ. ಆ ಮಟ್ಟಿಗಿನ ಫೋರ್ಸ್ ಶಿವಣ್ಣನವರದು.

ಮಿತಿಮೀರಿದ ದೇಹ ಡಯಟ್ ಇಲ್ಲದೆ ಉಬ್ಬಿಕೊಂಡ ಶಿವಣ್ಣ ಕೆಲವು ವರ್ಷ ಮಾತ್ರ, “ಯುವರಾಜ” ಚಿತ್ರದಿಂದ ನೋಡಿದ್ದು ಸ್ಲಿಮ್ ಆದ ಶಿವಣ್ಣ.

ಶಿವಣ್ಣನಿಗೆ ಅಭಿನಯ ಬಿಟ್ಟರೆ ಮತ್ತೊಂದು ತೀರಾ ಅಪರಿಚಿತ. ಮುಂಚಿನಿಂದಲೂ ಶಿವಣ್ಣನವರ ಕಾಲಶೀಟ್ ಮೊದಲು ಸಿಗುವುದು ಹೊಸ ಪ್ರತಿಭೆಗಳಿಗೆ. ಈಗಲೂ ಶಿವಣ್ಣನ ಮುಂಬರುವ ಚಿತ್ರಗಳು ನವ್ಯ ನಿರ್ದೇಶಕರಿಂದ ಕೂಡಿದೆ.

ಈ ಬಿರುಗಾಳಿ ಶಿವಣ್ಣನ ಮುಂದಿನ “ಭಜರಂಗಿ 2” ಚಿತ್ರವು ಯಶಸ್ಸು ಗಳಿಸಲಿ ಎಂದು ನಮ್ಮ ಸಾಹಿತ್ಯಮೈತ್ರಿ ಕಡೆಯಿಂದ ಅಭಿನಂದನೆಗಳು.

ಕು ಶಿ ಚಂದ್ರಶೇಖರ್

ಚಿತ್ರ ಕೃಪೆ ಗೂಗಲ್ ಹಾಗು ಚಿತ್ರಲೋಕ.ಕಾಂ

Related post