ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡಿಂಗ್ ನಲ್ಲಿ ಇರುವುದು ಈ ಪ್ರೀವೆಡ್ಡಿಂಗ್ ಫೋಟೋಶೂಟ್.
ಗೆಳತಿ ಗೆಳೆಯರ ಮದುವೆ ನಿಶ್ಚಯವಾಯಿತು ಎಂದರೆ ಸಾಕು, ಅವರು ಕೇಳಲಿಚ್ಚಿಸುವುದು ಹುಡುಗನ ಬಗ್ಗೆಯೂ ಉದ್ಯೋಗದ ಬಗ್ಗೆಯೂ ಅಲ್ಲ, ಪ್ರಿವೆಡ್ಡಿಂಗ್ ಫೋಟೋಶೂಟ್ ಗೆ ಎಲ್ಲಿಗೆ ಹೋಗಬೇಕು ಅಂದುಕೊಂಡಿದ್ದೀರಾ ಅಂತ.
ಇಂದಿನ ಯುವ ಪೀಳಿಗೆಯನ್ನು ಅತಿ ಉತ್ಸಾಹದಿಂದ ಆಳುತ್ತಿದೆ ಈ ಪದ್ಧತಿ ನಮ್ಮ ಸಂಪ್ರದಾಯವಲ್ಲವಾದರೂ ಸ್ವತಃ ತಾವೇ ಇದೊಂದು ಮದುವೆಯ ಅವಿಭಾಜ್ಯ ಸಂಪ್ರದಾಯವನ್ನಾಗಿಸಿಕೊಂಡಿದ್ದಾರೆ.
ಈಗೊಂದು ಸಣ್ಣ ಕತೆ ಹೇಳ್ತೇನೆ!
ಸರಿಸುಮಾರು ಒಂದು ದಶಕಗಳಿಂದ ಪ್ರೀತಿಸಿದ್ದ ಜೋಡಿ ಮದುವೆ 15 ದಿನಗಳಲ್ಲಿತ್ತು.
ಅವರ ಮನದಲ್ಲೂ ಈ ಪ್ರೇವೆಡ್ಡಿಂಗ್ ಫೋಟೋಶೂಟ್ ಕಲ್ಪನೆ ಹೊಕ್ಕಿತು!
ತಮ್ಮ ತಮ್ಮ ಪಾಲಕರಲ್ಲಿ ಈ ವಿಚಾರವಾಗಿ ಕೇಳಿದಾಗ ಅವರಿಗದು ಸರಿ ಕಾಣಲಿಲ್ಲ ಕಾರಣವಿಷ್ಟೆ ಅದು ನಮ್ಮ ಸಂಪ್ರದಾಯವಲ್ಲವೆಂದು.
ಈ ವಿಷಯ ಮಕ್ಕಳ ಮುಂದೆ ಹೇಳಿಕೊಂಡರೆ ಎಲ್ಲಿ ನೊಂದುಕೊಳ್ಳುತ್ತಾರೊ? ಎಂದು ಪಾಲಕರು ಮರುಮಾತನಾಡದೆ ಅರೆ ಮನಸ್ಸಿನಲ್ಲಿ ಒಪ್ಪಿಗೆಯಿತ್ತರು.
ಮದುವೆಯ ಜವಳಿಯಲ್ಲಈ ಮೊದಲೇ ಖರೀದಿಸಲಾಗಿದ್ದು, ಮದುವೆಗಿನ್ನೂ 9 ದಿನ ಬಾಕಿ ಇತ್ತು.
ಈ ಹೊತ್ತಲ್ಲಿ ಮುಂದೆ ಸಮಯ ಸಿಗಲಿಕ್ಕೆ ಅಸಾಧ್ಯವೆಂದು,
ಮಾರನೇ ದಿನವೇ ಫೋಟೋ ಶೂಟ್ಗೆ ದಿನ ನಿಗದಿಯಾಯಿತು.
ಹಿರಿಯರೊಬ್ಬರು,ಕೇವಲ ಜೋಡಿಗಳನ್ನ ಮಾತ್ರ ಮದುವೆಗೆ ಮುಂಚೆ ಎಲ್ಲಿಯೂ ಕಳಿಸುವ ಹಾಗಿಲ್ಲ ಎಂಬ ಪ್ರಶ್ನೆ ಅವರಿಂದ ಟಿಸಿಲೊಡೆದಾಗ ಎಲ್ಲರೂ ಮುಖ ಮುಖ ನೋಡಿಕೊಂಡರು!
ತಮ್ಮತಂದೆ ತಾಯಿಯನ್ನು ಜೊತೆ ಬರಲು ಹೇಳಲು ಇವರಿಗೂ ಮುಜುಗರ,
ಬರಲೋಪ್ಪಲು ಅವರಿಗೂ ಮುಜುಗರ.
ಇದನ್ನರಿತ ಫೋಟೋಗ್ರಾಫರ್ ಒಂದು ಪರಿಹಾರ ಸೂಚಿಸಿದ. ಪರಿಹಾರದ ಹೆಸರೇ ” ಹುಡುಗನ ಅಕ್ಕ “
ಈ ಪರಿಹಾರ ಎಲ್ಲರಿಗೂ ಒಪ್ಪಿಗೆಯಾಯಿತು ಹುಡುಗನ ಅಕ್ಕಾ ಜೊತೆಗೆ ಹೊರಟು ನಿಂತಳು,
ಸಂಜೆಯೊಳಗೆ ಹಿಂದಿರುಗುತ್ತೇವೆ ಎಂದು ಅಲ್ಲೇ ಇದ್ದ ಕೆಲವು ದೇವಾಲಯ ಗಾರ್ಡನ್, ಪಾರ್ಕಿನತ್ತ ಮುಖ ಮಾಡಿದರು.
ಇತ್ತ ಮನೆಯಲ್ಲಿ ಮಕ್ಕಳು ಸಂಜೆಯೊಳಗೆ ಬರುವುದಾಗಿ ತಿಳಿಸಿ ಹೊರಟವರು ಇನ್ನೂ ಬರದಿದ್ದಾಗ,
ಕೊಂಚ ಆತಂಕಗೊಂಡರು ಇನ್ನು ಕೆಲ ಹೊತ್ತು ಕಾದು ಮತ್ತೆ ಫೋನಾಯಿಸಿದರಾಯಿತೆಂದು ಸುಮ್ಮನಾದರು,ರಾತ್ರಿ ಕಳೆದು ಬೆಳಕು ಮೂಡಿದರೂ ಮಕ್ಕಳು ನಾಪತ್ತೆ!
ಮದುವೆಗೆ ಇನ್ನು ಏಳು ದಿನ ಬಾಕಿ ಉಳಿದಿತ್ತು!
ಮಗಳು,ಅಳಿಯ,ಅಳಿಯನ ಅಕ್ಕ, (ವಿವಾಹಿತೆ ) ಫೋಟೋಗ್ರಾಫರ್, ವಿಡಿಯೋಗ್ರಾಫರ್, ಅವರಿಬ್ಬರಿಗೂಬ್ಬ ಸಹಾಯಕ ಒಟ್ಟು ಆರು ಜನ ನಾಪತ್ತೆಯಾಗಿದ್ದರು. ಪೊಲೀಸರು ತನಿಖೆ ಪ್ರಾರಂಭಿಸಿ ಎರಡು ದಿನದ ನಂತರ ಊರಿನ ಹೊರವಲಯದಲ್ಲಿದ್ದ ಪಾಳುಬಿದ್ದ ಮಂಟಪದ ಕಲ್ಯಾಣಿಯಲ್ಲಿ ಮೂರು ಶವ ತೇಲಿ ಬಂದಿದ್ದನ್ನು ಗ್ರಾಮಸ್ಥರು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ದೌಡಾಯಿಸಿ ಹೆಣ ಹೊರತೆಗೆದು ನೋಡಿದಾಗ ತಿಳಿದುಬಂದದ್ದು ಮೂರು ಮೃತ ದೇಹಗಳು
“ವರ, ವಧು ಹಾಗು ವರನ ಅಕ್ಕ”
ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸಿದಾಗ ರಿಪೋರ್ಟ್ ನಲ್ಲಿ ಹೀಗಿತ್ತು
” ಹುಡುಗನಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ!
ಉಳಿದೆರಡು ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ವಾಗಿದೆ”!
ಲಜ್ಜೆಗೆಟ್ಟು ಗುಂಪುಗುಂಪಾಗಿ ಹಂದಿಗಳಂತೆ ಭೋಗಿಸಲು ಅವರು ಮೃಗವಲ್ಲ ಹೆಣ್ಣುಮಕ್ಕಳು.
ಇಂಚು ಬಿಡದೆ ಅಂಗಾಂಗಗಳೆಲ್ಲ ನೋವು ನೀಡಿ ವಿವಸ್ತ್ರಗೊಳಿಸಲು ಅವರು ಗೊಂಬೆಗಳಲ್ಲ ಹೆಣ್ಣುಮಕ್ಕಳು.
ಇನ್ನು ಅತ್ಯಾಚಾರದ ಮತ್ತನ್ನು ನೆತ್ತಿಗೇರಿಸಿಕೊಳಲು ಅವರು ಗಾಂಜಾ-ಅಫೀಮಲ್ಲ ಹೆಣ್ಣು ಮಕ್ಕಳು.
ನೀವು ಕೊಂದದ್ದು ಕ್ರೂರ ಮೃಗಗಳನ್ನಲ್ಲ ಜೀವನದಲ್ಲಿ ಸಾವಿರ ಸ್ವಪ್ನಗಳನ್ನು ಮನಸಿನಲ್ಲಿ ಇಟ್ಟುಕೊಂಡು ರಾಶಿ ಆಸೆ ಹೊತ್ತುಕೊಂಡು ಇನ್ನೇನು ಮದುವೆಯ ಹಸೆ ಇರಬೇಕಿದ್ದ ಹೆಣ್ಣು ಜೀವವನ್ನ.
ಈಗಾಗಲೇ ಮಗುವಿನ “ನಿರೀಕ್ಷೆಯಲ್ಲಿದ್ದ ತಾಯಿಯನ್ನ”!
ಸುಂದರವಾದ ಸಂಸಾರದ ಕನಸ ಕಂಡ ಹುಡುಗನನ್ನ!
ಮದುವೆಯ ಸಂಭ್ರಮದಿಂದ ತುಂಬಿದ ಮನೆ ಮಸಣದ ಹಾದಿ ಹಿಡಿಯಿತು
ಸಂತೋಷದಿಂದ ಮೈ ಚಾಚಿಕೊಂಡಿದ್ದ ಮನೆ ಸೂತಕದಲ್ಲಿ ಅಂತ್ಯಗೊಂಡಿತ್ತು…
ಮನೆಯವರ ರೋಧನೆ ಹೇಳತೀರದು..
ಶುಭಾರಂಭಕ್ಕಿದ್ದ ಐದು ದಿನ ಇವರ ಐದನೇ ದಿನದ ಕೊನೆ ಕಾರ್ಯಕ್ಕೆ ತಿರುಗಿಕೊಂಡಿತ್ತು!
ಬಹುಷಃ ಮುಜುಗರವನ್ನು ಬದಿಗಿಟ್ಟು ಮನೆಯ ಹಿರಿಯರು ಅವರ ಜೊತೆಗೂಡಿದ್ದರೆ ಏನಾಗುತ್ತಿತ್ತೇನೋ? ಅಥವಾ ಏನೂ ಆಗುತ್ತಿರಲಿಲ್ಲವೇನೋ?
ಕೆಲವೊಮ್ಮೆ ಈ ವಿಶ್ವಾಸ,ಮುಜುಗರ, ನಂಬಿಕೆಗಳಿಗಿಂತ, “ಸುರಕ್ಷತೆ”ಎಂಬ ಪದ ತುಂಬಾ ಮಹತ್ವದ್ದಾಗಿ ಬಿಡುತ್ತದೆ.
ಆ ಹುಡುಗ ಹುಡುಗಿಯ ಪೋಷಕರ ಮನಸ್ಥಿತಿ ಅಸ್ವಸ್ತವಾಗಿದ್ದು, ಈಗಲೂ ತಮ್ಮ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ!
” ಕೆಲವು ನಿರೀಕ್ಷೆಗಳೇ ಹಾಗೆ,
ಬೆಲೆಕಟ್ಟಲಾಗದು ತುಂಬಾ ದುಬಾರಿ”
🖋🖋 ನಿವೇದಿತಾ ರಾಮ್..
ಚಿತ್ರ ಕೃಪೆ: ಗೂಗಲ್