ಪ್ರೇಮದ ಋಣ
ಅವನನ್ನು ನನ್ನಾತ್ಮದೊಳಗೆ
ಇಳಿಸಿಕೊಳ್ಳದಿದ್ದರೆ
ಹುಟ್ಟುತ್ತಿದ್ದವೇ
ಇಷ್ಟೆಲ್ಲಾ ಕವಿತೆಗಳು
ಅವನೆದೆಯೊಳಗೆ
ನನ್ನ ಹೆಜ್ಜೆ ಗುರುತು
ಮೂಡಿವೆಯೋ ಇಲ್ಲವೋ
ಬೇಕಿಲ್ಲ ನನಗೆ
ಅವನನ್ನೆಂದಿಗೂ
ಬೈಯ್ಯಲಾರೆ ಬೇಡಲಾರೆ
ಅವನಿಂದಲೇ ಹುಟ್ಟಿದ
ಕವಿತೆಗಳ ಋಣ
ನನ್ನ ಮೇಲಿರುವಾಗ
ಬರೆದ ಕವಿತೆಗಳಲ್ಲೊಂದಾದರೂ
ಅವನ ಕಣ್ಣಿಗೆ ಬಿದ್ದು
ಮನದಲ್ಲೊಮ್ಮೆ ನನ್ನ ನೆನಪು
ಹಾದು ಹೋಗಿದ್ದರೂ ಸಾಕು
ಈ ಜನ್ಮದ ಋಣ ಕಳೆದಂತೆ
ಸೌಜನ್ಯ ದತ್ತರಾಜ
1 Comment
This provides different perspective to think of love.