ಬಡವರ ಮಗಳು ಸೌಜನ್ಯ
ಬಡವನ ಮನೆಯಲಿ ಏಕೆ ಹುಟ್ಟಿಸಿದೆ
ಮಂಜುನಾಥನೆ,, ನನ್ನನ್ನು.
ನಿನ್ನಯ ನೆಲದಲಿ ತಿಂದು, ತೇಗಿದರು
ನನ್ನಯ ಬದುಕಿನ ಕನಸನ್ನು
ಏತಕೆ ನಿನಗೆ ಪೂಜೆಗಳು,,,
ತೆಲುತಿವೆ ಹೆಣ, ದೇಹಗಳು.!!೧!!
ತಿಂದು ತೇಗಿದ ಕಾಮುಕರನ್ನು
ರಕ್ಷಿಸುತಿಹರು ಹಲವು ಜನ.
ನನ ದೇಹ, ಮನಸಿಗೆ ಆದ ನೋವನು
ಮರೆಯಲು ಸಾಧ್ಯವೇ, ನನ್ನ ಮನ.
ಏತಕೆ ನಿನಗೆ ಹರಕೆಗಳು,,?
ಬದುಕಿಹರಲ್ಲ ಈ ಬೆರಕೆಗಳು.!!೨!!
ತಾಯಿ ನೊಂದಳು,ತಂದೆ ಬೆಂದನು
ನನ್ನಯ ಈ ಸ್ಥಿತಿ ನೋಡಿ.
ಪಾಪಿ ಎಳೆದನು,ದುರುಳ ಕಡಿದನು
ಬೇಡಿದರು ನನ್ನ ಎಳೆದಾಡಿ.
ನಿನಗೆ ಏತಕೆ ದೀಪಗಳು,,?
ನಿನ್ನಯ ನೆರಳಲಿ ಪಾಪಗಳು.!!೩!!
ಮಂಜುನಾಥನೆ ಹೇಳು ಬೇಗನೆ
ನನಗೆ ನ್ಯಾಯವ ಕೊಡಿಸುವೆಯಾ.?
ಧರ್ಮಸ್ಥಳದ ಧರ್ಮರಕ್ಷಕನೆ
ನಾರಿಯ ಮಾನವ ಉಳಿಸುವೆಯಾ,?
ಉಳಿಸಿದೆ ಹೋದರೆ ನೀನಿಲ್ಲ,,,
ನಿನ್ನಯ ಹೆಸರಲಿ ಕೆಸರೆಲ್ಲ.!!೪!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ
1 Comment
ನಿಜ