ಬಣ್ಣ

ಅಂದು ಹೋಳಿ ಹಬ್ಬ ಎಲ್ಲೆಲ್ಲೂ ಬಣ್ಣಗಳದ್ದೇ ದರ್ಬಾರು. ಎಲ್ಲಾ ಬೀದಿಗಳಲ್ಲಿ ಬಣ್ಣದ ನೀರಿನ ಓಕಳಿಯೇ ಹರಿದ್ದಿತ್ತು, ಕರೆಂಟ್ ತಂತಿಗಳ ಮೇಲೆ ಚಿಂದಿ ಬಟ್ಟೆಗಳು ಬಾವುಲಿಗಳಂತೆ ತೂಗಾಡುತಿದ್ದವು.

ರಾಮುವು ಕೂಡಾ ಬಣ್ಣದ ಆಕರ್ಷಣೆಗೆ ಸೋತು ತಾನು ಸ್ನೇಹಿತರೊಡನೆ ಬಣ್ಣಗಳಲ್ಲಿ ಮಿಂದು ಏಳಬೇಕೆಂದು
ನಿರ್ಧರಿಸಿದ. ಇಂದಿಗೆ ಗಾಡ ಕತ್ತಲ ಜೀವದಿಂದ ಮುಕ್ತಿ, ನಾಳೆ ಬಣ್ಣದ ಲೋಕದ ಕಡೆಗೆ ಪಯಣ ಎಂದು ಖುಷಿಯಲ್ಲಿ
ಕುಣಿದಾಡಿದ. ಈ ವರ್ಷದ ಹೋಳಿ ಹಬ್ಬ ಎಲ್ಲರ ಬದುಕನ್ನು ಬದಲಿಸಿದಂತೆ ನನ್ನ ಜೀವನದ ತಿರುವುಗಳಿಗೆ
ಸಾಕ್ಷಿಯಾಗಲಿದೆ ಎಂದು ಏನೇನೋ ಆಸೆ ಕನಸುಗಳನ್ನು ಹೊತ್ತು ಕುಣಿದಾಡಿದ.

ಆದರೆ ಆ ವಿಧಿ ಇದಕ್ಕೆಲ್ಲಾ ಒಂದು ಅಂತ್ಯವನ್ನು ಹಾಡಿತ್ತು; ರಾಮು ಒಬ್ಬ ಬಡ ಕುಡುಂಬದಲ್ಲಿ ಹುಟ್ಟಿದವನು ತಕ್ಷಣ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆಯುತಿದ್ದ. ಚಿಕ್ಕ ವಯಸ್ಸಿನಲ್ಲೆ ಸಿಡುಬು ಖಾಯಿಲೆಯಿಂದ ಅವನ ಎರಡು ಕಣ್ಣುಗಳು ಹುಣ್ಣಿಗೆ ತುತ್ತಾಗಿ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದ.

ನಾನು ಅವನನ್ನು ಬೇಟಿ ಮಾಡಿದಾಗ ಅವನ ಕಣ್ಣುಗಳನ್ನು ಪರೀಕ್ಷಿಸಿದಾಗ ಅವನಿಗೆ ಬೇರೆಯವರ ಕಣ್ಣುಗಳನ್ನು ಕಸಿ (ಕಾರ್ನಿಯಲ್ ಗ್ರಾಪ್ಟ್) ಮಾಡಿದರೆ ಮತ್ತೆ ಮೊದಲಿನಂತೆ ದೃಷ್ಟಿ ಮರುಕಳಿಸಬಹುದೆಂದು ತಿಳಿದು, ಆ ಶಾಲೆಯ ಶಿಕ್ಷಕರ ಜೊತೆ ಮಾತಾನಾಡಿ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದೆ. ಶಾಲಾ ಶಿಕ್ಷಕರು ಅವನನ್ನು ನಾವು ತಿಳಿಸಿದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೊದಲ ಹಂತದ ಪರೀಕ್ಷೆಗಳನ್ನು ಮಾಡಿಸಿದರಂತೆ. ಕಣ್ಣಿನ ವೈದ್ಯರು ಕಣ್ಣುಗಳನ್ನು ಕಸಿ (ಕಾರ್ನಿಯಲ್ ಗ್ರಾಪ್ಟ್) ಮಾಡಿದರೆ ಮತ್ತೆ ಮೊದಲಿನಂತೆ ದೃಷ್ಟಿ ಬರಬಹುದು ಅಂತ ಹೇಳಿದರಂತೆ ನಂತರ ದಾನಿಯರ ಕಣ್ಣುಗಳು ಬಂದ ತಕ್ಷಣ ಕರೆ ಮಾಡಿ ತಿಳಿಸುತ್ತೇವೆ ಎಂದು ಹೇಳಿದರಂತೆ.

ನಾನು ಕೆಲವು ತಿಂಗಳ ನಂತರ ಮತ್ತೆ ಆ ಶಾಲೆಗೆ ಬೇಟಿ ನೀಡಿದೆ, ಆ ದಿನ ರಾಮು ಕಾಣಲೇ ಇಲ್ಲಾ ರಜೆಯಲ್ಲಿ
ಇರಬಹುದೇನೋ ಅಂದುಕೊಂಡೆ, ಮತ್ತೆ ಯಾಕೋ ಮನಸ್ಸು ತಡೆಯಲಾರದೆ ಕೊನೆಗೂ ರಾಮು ಎಲ್ಲಿ ಎಂದು ಶಿಕ್ಷಕರನ್ನು ಕೇಳಿದೆ. ಅವರ ಪ್ರತಿಕ್ರಿಯೆ ಒಂದು ಕ್ಷಣ ನಮ್ಮನ್ನು ಮೌನಕೀಡುಮಾಡಿತು. ಒಂದು ಕ್ಷಣ ಕಣ್ಣು ತುಂಬಿ ಬಂದವು. ಹಲವು ದಿನಗಳ ಹಿಂದೆ ರಾಮುವಿಗೆ ದಾನಿಯ ಕಣ್ಣುಗಳು ದೊರೆತಿದ್ದವು ಎಂದು ಅಸ್ಪತ್ರೆಯಿಂದ ಕರೆ ಬಂದಿತ್ತಂತೆ, ಆದರೆ ಒಂದು ದಿನದ ಮೊದಲೇ ಹೋಳಿ ಬಣ್ಣದ ಬರಾಟೆ ಸ್ನೇಹಿತರೊಂದಿಗೆ ಬಣ್ಣದ ಆಟ ಆಡುತ್ತಿದ್ದಾಗ ಬಣ್ಣದ ಪುಡಿಯು ಅವನ ಕಣ್ಣನ್ನು ಸೇರಿತು, ಅದರ ತೀವ್ರತೆಯು ಹೆಚ್ಚಾಗಿತ್ತು. ನೋವು ಉರಿಗಳಿಂದ ಬೆಂಕಿ ಹಾಕಿದಂತಾಗಿತ್ತು. ವಿಧಿಯ ನಿರ್ಧಾರವು ಅದೇ ಆಗಿತ್ತೋ ಏನೋ ರಾಮುವಿನ ಪ್ರಾಣ ಪಕ್ಷಿ ಹಾರಿತ್ತು, ಈ ರೀತಿ ಅಗುವುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.

ಬಣ್ಣದ ಲೋಕವ ನೋಡಬಯಸಿದ ಅಂದನ ಬದುಕ ನುಂಗಿದ ಬಣ್ಣ”.ಇಂತಹ ಎಷ್ಟೋ ಅಂದರು ಕನಸುಗಳನ್ನೊತ್ತು ಈ ಜಗವ ನೋಡಲು ಕಾಯುತ್ತಿದ್ದಾರೆ.

ಮಣ್ಣು ಮಾಡದಿರಿ, ನಿಮ್ಮ ಕಣ್ಣುಗಳು ಜ್ಯೋತಿಯಾಗಿ ಬೆಳಗಲಿ ಇನ್ನೊಬ್ಬರ ಮನೆ ಮನಗಳ….

ಗೌರಿ ಸುತ

Related post

1 Comment

  • Nice literature loved it

Leave a Reply

Your email address will not be published. Required fields are marked *