ಬದುಕಿನ ಭಾಗ್ಯದ ಲಹರಿಯಲಿ..
ಬರಡಾದ ಬದುಕಿನಲಿಹ
ಕಷ್ಟಗಳನು ತೊಡೆದು ಬದುಕುವಾ..!
ಸವಿಯಾದ ಬದುಕಿನಲಿಹ..
ಸಿಹಿಯನೆಲ್ಲವ ಸವಿದು ಬಾಳುವಾ..!!
ಬಂಗಾರದ ಬದುಕನು ಅಂಗೈಲಿಟ್ಟ
ಕಾಣದ ದೈವಕೆ ನಿತ್ಯ ಕೈಮುಗಿಯುವಾ..!
ಸವಿಬದುಕನು ನಮ್ಮ ಮಡಿಲಲಿಟ್ಟ..
ಹೆತ್ತವರಿಗೆ ಶಿರಬಾಗಿ ನಮಿಸುವಾ!!
ಜೋಡೆತ್ತಿನ ತೆರೆದಿ ಸಾಗುತಾ
ಬಾಳಿನ ಬಂಡಿಯ ಎಳೆಯುವಾ..!
ಸ್ನೇಹಿತರ ಒಡನಾಟದಿ ನಡೆಯುತಾ..
ಬದುಕನು ಚೆಂದದಿ ಕಳೆಯುವಾ!!
ಅಂದದ ಬದುಕನು ಜೋಳಿಗೆಯಲಿಟ್ಟ
ಅದೃಶ್ಯ ಶಕ್ತಿಯ ಸದಾ ನೆನೆಯುವಾ..!
ಮಾನವೀಯತೆಯ ಶ್ರೇಷ್ಠತೆಯ ಸಾಧಿಸಿ..
ನಶ್ವರ ಮಾನವಜನ್ಮವ ಸಾರ್ಥಕಗೊಳಿಸುವಾ..!!
ಸುಮನಾ ರಮಾನಂದ