ಬದುಕುವ ಪರಿ

ಬದುಕುವ ಪರಿ

ಈ ಬದುಕೊಂದು ಅವಕಾಶಗಳ
ಮಹಾ ಸಾಗರ
ಬೆದರದಿರು ಎಂದಿಗೂ,
ಹೂರದೂಡಿಬಿಟ್ಟಾರು,
ಈ ಜಗದಾಚೆಗೂ

ನಿಲ್ಲದಿರು ತುಸು ಹೊತ್ತು
ವಿಶ್ರಾಂತಿಗೆ ಸಯಯವಿಲ್ಲದಿಲ್ಲ
ಎಂದಿಗಾದರೂ ನೀ ಮಹಾ ವಿಶ್ರಾಂತ

ಸಮಯ ಎಲ್ಲರಿಗೂ ಒಂದೇ
ಆದರೇತಕೆ ವಿಭಿನ್ನ ನೀ ನಂಬಿದ ಜನ.
ಎಲ್ಲ ತಿಮಿಂಗಿಲಗಳಿಗೂ ಜಾಗವಿದೆ ಇಲ್ಲಿ
ಹುಡುಕದಿರು ಜಾಗವ ಸಣ್ಣ ಬಾವಿಯೊಳಗೆ

ನಾವು ಸಾಗುತ್ತಲಿರೋಣ
ಸಾಧ್ಯವಾದರೆ ಸಮಾಜದ ಜೊತೆ, ಜೊತೆಗೆ.
ಇಲ್ಲದಿರೆ ಒಂಟಿ ಸಲಗದಂತೆ
ಬದುಕಿ ಬಿಡೋಣ ಒಮ್ಮೊಮ್ಮೆ ನಿಜ ಸಂತನಂತೆ!!!

ಪವನ ಕುಮಾರ ಕೆ ವಿ
ಬಳ್ಳಾರಿ

Related post