ಬಳ್ಳಿಯ ಬಸಳೆ

ಬಸಳೆ ಸೊಪ್ಪಿನ ಪರಿಚಯ ಬಹಳಷ್ಟು ಜನರಿಗೆ ಇರುತ್ತದೆ. ಬಸಳೆಯು ಬಳ್ಳಿಯಂತೆ ಹಬ್ಬಿ ಅದರಲ್ಲಿ ಎಲೆ ಹೂವು ಹಾಗು ಹಣ್ಣುಗಳನ್ನು ಬಿಡುತ್ತದೆ. ಈ ಬಳ್ಳಿಗಳಲ್ಲಿ ಬೆಳೆದ ಎಲೆಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಬಸಳೆಯ ಸಸ್ಯವು ‘ಬ್ಯಾಸಲೇಸಿಯಿ‘ (ಬ್ಯಾಸೆಲೇಸೀ) ಕುಟುಂಬಕ್ಕೆ ಸೇರಿದ್ದು. ಇದರ ವೈಜ್ಞಾನಿಕ ಹೆಸರು ‘ಬ್ಯಾಸೆಲ ರೂಬ್ರ’ ಎಂದು ಇದನ್ನು ಭಾರತದಲ್ಲಿ ಹೆಚ್ಚಾಗಿ ಬಳಸುವುದರಿಂದ ‘ಇಂಡಿಯನ್ ಸ್ಪಿನಿಚ್’ (ಬಹುವಾರ್ಷಿಕ ಬಳ್ಳಿ) ಎಂದು ಕೂಡ ಕರೆಯಲ್ಪಟ್ಟಿದೆ. ಏಷ್ಯಾ ಖಂಡದ ಉಷ್ಣ ಪ್ರದೇಶಗಳಲ್ಲಿ ಬಸಳೆಯ ಬಳ್ಳಿಗಳು ಬೆಳೆಯುತ್ತವೆ. ಎರಡು ಬಗೆಗಳಲ್ಲಿ ಬೆಳೆಯುವ ಬಸಳೆಗಳು ಕೆಂಪು ಬಣ್ಣದಿಂದ ಕೂಡಿದ ಕಾಂಡಗಳು ಒಂದು ಬಗೆಯಾದರೆ ಇನ್ನೊಂದರ ಕಾಂಡ ಹಸಿರು ಬಣ್ಣದಿಂದ ಕೂಡಿದ್ದು. ಕೆಂಪು ಬಣ್ಣದಿಂದ ಕೂಡಿದ ಬಸಳೆಯನ್ನು ಬ್ಯಾ. ಕಾರ್ಡಿಫೋಲಿಯ ಎಂದು ಹಸಿರು ಬಣ್ಣದ ಕಾಂಡದ ಬಸಳೆಯನ್ನು ಬ್ಯಾ. ಆಲ್ಬ ಎಂದು ಕರೆಯುತ್ತಾರಾದರು ಇವೆರಡು ರೂಬ್ರ ಪ್ರಭೇದಕ್ಕೆ ಸೇರಿದವು.

ಕೆಂಪು ಬಣ್ಣದ ಕಾಂಡದ ಬಸಳೆ
ಹಸಿರು ಬಣ್ಣದ ಕಾಂಡದ ಬಸಳೆ

ಭಾರತದಲ್ಲಿ ಬಸಳೆ ಸಸಿಯನ್ನು ತರಕಾರಿ ಸಸ್ಯವನ್ನಾಗಿ ತೋಟಗಳಲ್ಲಿ, ಹಿತ್ತಲಿನಲ್ಲಿ, ಮನೆಯ ಅಂಗಳದಲ್ಲಿ ಹಾಗು ಕುಂಡಗಳಲ್ಲಿ ಬೆಳೆಯುತ್ತಾರೆ. ಬಸಳೆಯ ಎಲೆಗಳು ಹಾಗು ಎಲೆಯ ಕಾಂಡಗಳು ಮೃದು ಹಾಗು ರಸಭರಿತವಾಗಿದ್ದು ಅವುಗಳನ್ನು ವಿಧ ವಿಧವಾದ ಖಾದ್ಯಗಳನ್ನು ತಯಾರಿಸುವಲ್ಲಿ ಉಪಯೋಗಿಸುತ್ತಾರೆ. ಬಸಳೆಯಲ್ಲಿ ಅತೀ ಹೇರಳವಾಗಿ ಪೌಷ್ಟಿಕಾಂಶಗಳು ದೊರೆಯುತ್ತವೆ. ಪ್ರತಿ ನೂರು ಗ್ರಾಮ್ ಬಸಳೆಯಲ್ಲಿ 1.2 % ಪ್ರೋಟೀನ್, 0.15 % ಕ್ಯಾಲ್ಸಿಯಂ, 1.4% ಮಿಲಿ ಗ್ರಾಂ ಕಬ್ಬಿಣ ಹಾಗು ಹೇರಳವಾಗಿ ವಿಟಮಿನ್ ‘A’ ತುಂಬಿರುತ್ತದೆ.ಪೌಷ್ಟಿಕಾಂಶ ಭರಿತ ಬಸಳೆ ಸೊಪ್ಪನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಪೌಷ್ಟಿಕಾಂಶಗಳ ಕೊರತೆಯಿಂದ ದೂರವಿರಬಹುದು. ಉಷ್ಣ ಗುಣವನ್ನು ಹೊಂದಿರುವ ಬಸಳೆ ಸೊಪ್ಪಿನಲ್ಲಿ ಹೇರಳವಾಗಿ ಔಷಧೀಯ ಗುಣಗಳು ಸೇರಿವೆ. ಶೀತ, ಕೆಮ್ಮಿನಂತಹ ತೊಂದರೆಗಳು ಹತ್ತಿರ ಸುಳಿಯದಂತೆ ಕಾಪಾಡುತ್ತವೆ.

ನೋಡಲು ವೀಳ್ಯದೆಲೆಯೆಂತೆ ಕಾಣುವ ಇದರ ಎಲೆಗಳು ರಕ್ತಹೀನತೆ, ಅತಿಸಾರದಂತಹ ವ್ಯಾಧಿಗಳಿಗೆ ಉಪಯುಕ್ತವಾಗಿವೆ. ಸಕ್ಕರೆ ಕಾಯಿಲೆ ಇರುವುವರಿಗಂತೂ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಬಹು ಉಪಕಾರಿ. ಮಕ್ಕಳು ಹಾಗು ಗರ್ಭಿಣಿ ಹೆಂಗಸರಲ್ಲಿ ಕಾಣಿಸಿಕೊಳ್ಳುವ ಮೂಲವ್ಯಾಧಿಯನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಕಣ್ಣಿನಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡರೆ ಹಳ್ಳಿಗಳಲ್ಲಿ ಈ ಸೊಪ್ಪಿನ ರಸವನ್ನು ಕಣ್ಣಿಗೆ ಹಾಕಿ ಗುಣಪಡಿಸುತ್ತಾರೆ. ಸುಟ್ಟ ಗಾಯಗಳನ್ನು ಹಾಗು ಹುಣ್ಣುಗಳನ್ನು ಅತಿ ಬೇಗನೆ ವಾಸಿಯಾಗಿಸುವ ಗುಣವು ಬಸಳೆ ಸೊಪ್ಪಿನಲ್ಲಿದೆ.

ಇಷ್ಟೆಲ್ಲಾ ಸದ್ಗುಣಗಳನ್ನು ಹೊಂದಿರುವ ಬಸಳೆ ಕಾಂಡವನ್ನು ನೆಟ್ಟರೆ ಸಾಕು ಹೇರಳವಾಗಿ ಬೆಳೆಯುತ್ತವೆ. ಇದರ ಎಲೆ ಹಾಗು ಕಾಂಡಗಳಿಂದ ಸಾರು ಮಾಡಿದರೆ ರುಚಿಯಾಗಿರುತ್ತದೆ. ದೋಸೆ ಸಂಪಣ ರುಬ್ಬುವಾಗ ಬಸಳೆಯ ಎಲೆಗಳನ್ನು ಬೆರೆಸಿದರೆ ದೋಸೆಯು ಬಹಳ ಸ್ವಾದಿಷ್ಟಕರವಾಗಿರುತ್ತದೆ. ಎಳೆಯ ಬಸಳೆ ಎಲೆಗಳನ್ನು ಕಡಲೆ ಇಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಬಸಳೆ ಬಜ್ಜಿ ತಯಾರಾಗುತ್ತದೆ.

ಸದ್ಗುಣ ಬಸಳೆ ಬಳ್ಳಿ ಬೆಳಸಿ ಬಳಸಿ ಇದರ ಉಪಯುಕ್ತತೆಯನ್ನು ಹಂಚಿಕೊಳ್ಳಿ…

ಶಿಲ್ಪ

Related post

5 Comments

  • Very valuable information sharing with us Thank you shilpa….

  • Wonderful informative article Shilpa. Looking forward for many such articles.

  • Wonderful informative article Shilpa. Looking forward for many such articles.

  • Good information

  • Very nice , thanks for sharing this amazing information😊😊

Leave a Reply

Your email address will not be published. Required fields are marked *