ಬಾರಮ್ಮ ಗೌರಮ್ಮ
ಬಾಗಿಲು ತೆರೆದಿಹುದು
ಬಾರೇ ನೀ ಗೌರಮ್ಮ
ಮಂಗಳದಾಯಿನಿ ಬಾರಮ್ಮ
ಮನಕೆ ಮುದವನು ನೀಡಿ
ಮನದ ಆಸೆಯ ಕೇಳಿ
ಮನಸಾರೆ ನಮ್ಮನ್ನು ಹರಸಮ್ಮ
ಮಂಗಳ ಗೌರಿಯು ನೀನು
ತಿಂಗಳನ ಮನದಂತೆ,ಮನೆಯ
ಅಂಗಳದಿ ಮುಖವ ತೋರಮ್ಮ
ತೋರಣವ ಕಟ್ಟಿಹೆವು
ರಂಗೋಲಿ ಹಾಕಿಹೆವು
ಮಂಗಳ ದ್ರವ್ಯವ ನೀಡೇವು
ಅರಿಶಿಣದ ದಾರವ ಕಟ್ಟಿಹೆವು ನಾವೆಲ್ಲ
ಅರಿತವಳು ನೀನಮ್ಮ
ಅರಿಯ ದೂರ ಮಾಡಮ್ಮ
ಹರಸಮ್ಮ ನೀನೆಮ್ಮ
ಕರುಣೆಯನು ತೋರಮ್ಮ
ಮನೆ ಮನದಲ್ಲಿ ನೀ ನೆಲೆಸಮ್ಮ
ಸುನೀಲ್ ಹಳೆಯೂರು