ಬಾಳ ಪಯಣಿಗರು
ಜೋಡೆತ್ತಿನಂದದಿ ಬಾಳ ದಾರಿಯಲಿ
ನಗುನಗುತಾ ಸಾಗಿದೆವು..
ಎದುರಿಸಿದ ಸಂಕಷ್ಟಗಳ
ಮೌನದಲಿ ಸಹಿಸಿದೆವು!!
ಕಲ್ಲುಮುಳ್ಳಿನ ಹಾದಿಯಲಿ
ಜೊತೆಯಾಗಿ ನಡೆದೆವು..
ಸುಖಸಂತಸದ ದಿನಗಳಲಿ
ನೋವೆಲ್ಲ ಮರೆತೆವು!!
ರವಿ ತಂದ ಹಗಲಿನಲ್ಲಿ
ಬೆಳಕನು ಕಂಡೆವು..
ಶಶಿ ಮೂಡಿದ
ಇರುಳಲಿ ಮಿಂದೆವು!!
ಬದುಕನು ಬಂದಂತೆ
ಸ್ವೀಕರಿಸುತಾ ನಡೆದಿಹೆವು..
ಜೀವನದ ತಿರುವುಗಳನೆದುರಿಸಿಹ
ಬಾಳಪಯಣಿಗರು ನಾವು!!
ನಗುನಗುತಾ ನಲಿದಿಹೆವು
ಸುಮನಾ ರಮಾನಂದ