ಬಾಳ ಬೆಳಕಿನ ಪಯಣ
ಬೆಳಕಿಹುದು ಕತ್ತಲೆಯ ಒಡಲಾಳದಲಿ
ಕತ್ತಲೆಯೂ ಇಹುದು ಬೆಳಗಿನ ಬುಡದಲ್ಲಿ
ನಗುವಿಹುದು ನೋವಿನಾಟದಲ್ಲಿ
ಏನುಂಟು ಏನಿಲ್ಲ ಬದುಕಿನಲ್ಲಿ!!
ಹಸಿವು ಇದೆ ಹಂಬಲಿಸಿ ಕೂಳು ಹುಡುಕಲು
ನೋವು ಇದೆ ಕಳೆದ ನಲಿವನು ಹುಡುಕಿಸಲು
ಅಳುವು ಇದೆ ನಗುವಿನ ದಾರಿ ತೋರಲು
ಬವಣೆ ಇದೆ ಬದುಕಿನ ಹೆದ್ದಾರಿಯಲಿ!!
ಬೆಳಕು ಇದೆ ಕತ್ತಲೆಯ ಹಾದಿಯಲ್ಲಿ
ನಡೆಯೋಣ ದೂರ ದೂರಕೆ
ಕಣ್ಣಲ್ಲಿ ಗೆಲುವು ಇದೆ, ಕಾಣುವ ಕಾತುರ ಇದೆ
ಹೋರಾಡೋಣ ಬದುಕಿನಲಿ ಗುರಿಯ ಮುಟ್ಟಲು!!
ಬವಣೆಯಲ್ಲಿ ಬಳಲಿಕೆಯಲ್ಲಿ
ಕಾಣುವೆ ನಾನು ಬೆಳಕನ್ನು
ಗೆಲುವೆಂದು ನನ್ನದು
ಈ ಬೆಳಕೇ ದಾರಿ ತೋರುವುದು!!
ಸುಮನಾ ರಮಾನಂದ