ಬಿಗ್ ಬಾಸ್ (ಸೀಸನ್ -8) ಟ್ರಿಣ್ ಟ್ರಿಣ್ ಟೆಲಿಫೋನ್ ಬಂತು

ಬಿಗ್ ಬಾಸ್ ಸೀಸನ್ 8 ಒಟ್ಟು 20 ಸ್ಪರ್ದಿಗಳಿಂದ ಶುರುವಾಗಿ ಮನೆಯಲ್ಲಿ ಕೇವಲ 9 ಸ್ಪರ್ದಿಗಳು ಉಳಿದುಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಕೇವಲ 5 ಸ್ಪರ್ದಿಗಳಿಗೆ ಅವಕಾಶವಿದ್ದು ವೀಕ್ಷಕರಲ್ಲಿ ಈಗ ಕೊತೂಹಲ ಹೆಚ್ಚಾಗಿದೆ.

ವಾರಾಂತ್ಯದ ಎಪಿಸೋಡ್ ನಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾದು ಕೂತಿದ್ದ ವೀಕ್ಷಕರಿಗೆ ಸುದೀಪ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ. ಈ ದಿನ ಯಾವುದೇ ಸ್ಪರ್ದಿಗಳು ಹೊರಹೋಗುವುದಿಲ್ಲ ಆದರೆ ವಾರದ ಮದ್ಯೆ ಒಬ್ಬ ಸ್ಪರ್ದಾಳು ಹೊರಹೋಗುತ್ತಾರೆ ಮತ್ತು ಆ ಕ್ಷಣ ಯಾವಾಗ ಬೇಕಾದರೂ ಬರಬಹುದು ಎಂದು ಹೇಳಿ ವೀಕ್ಷಕರಲ್ಲಿ ಅಚ್ಚರಿ ಹಾಗು ಸ್ಪರ್ದಿಗಳನ್ನು ಹೆಚ್ಚು ಒತ್ತಡದಲ್ಲಿ ಬಿಟ್ಟುಬಿಟ್ಟಿದ್ದಾರೆ. ನಾಮಿನೇಟ್ ಆಗಿರುವ ಪ್ರಶಾಂತ್ ಸಂಭರ್ಗಿ, ಡಿ ಜೆ ಚಕ್ರವರ್ತಿ, ಶಮಂತ್, ದಿವ್ಯ ಉರುಡುಗ, ಮತ್ತು ಶುಭ ಪುಂಜ ಇವರುಗಳು ಐವರಲ್ಲಿ ಯಾರು ಹೊರಹೋಗಬಹುದು ಎಂಬ ಗೊಂದಲದಲ್ಲಿ ದಿನಗಳನ್ನು ಕಳೆಯುತ್ತಲಿದ್ದಾರೆ.

ಸ್ಪರ್ದಿಗಳು ಮಲಗಿರುವಾಗ ಒಂದು ಟೆಲಿಫೋನ್ ರಿಂಗ್ ಬರುತ್ತದೆ ಎಲ್ಲರು ಹೊರಗೆ ಬಂದು ನೋಡಿದಾಗ ಒಂದು ಕೆಂಪು ಬಣ್ಣದ ಟೆಲಿಫೋನ್ ಬೂತ್ ಒಂದು ಬಿಗ್ ಬಾಸ್ ಮನೆಗೆ ಬಂದಿರುತ್ತದೆ. ಇದನ್ನು ನೋಡಿದ ಎಲ್ಲರು ಇದು ಯಾಕೆ ಬಂದಿದೆ ನಮ್ಮ ಮನೆಗಳಿಂದ ಟೆಲಿಫೋನ್ ಕರೆ ಬರುತ್ತದೋ ಅಥವಾ ಎಲಿಮಿನೇಟ್ ಯಾರು ಹಾಗುತ್ತಾರೋ ಎಂದು ತಿಳಿಸುವ ಸಲುವಾಗಿ ಇಟ್ಟಿದ್ದರೋ ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಈ ಟೆಲಿಫೋನ್ ನಲ್ಲಿ ಬಿಗ್ ಬಾಸ್ ಎಲ್ಲಾ ಸ್ಪರ್ದಿಗಳನ್ನು ಮಾತನಾಡಿಸುತ್ತಾರೆ. ಅವರ ಮನೆಯಲ್ಲಿನ ಇದುವರೆಗಿನ ಪ್ರಯಾಣ ಚಟುವಟಿಕೆಗಳು ಮತ್ತು ಎಲಿಮಿನೇಷನ್ ಗಳ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ನಾಮಿನೇಟ್ ಆದ ಪ್ರಶಾಂತ್, ಶುಭ, ದಿವ್ಯ ಮತ್ತು ಶಮಂತ್ ತಾವು ಬಿಗ್ ಬಾಸ್ ಮನೆಯಲ್ಲಿ ಇರುವಸ್ಟು ಸಮಯ ಖುಶಿಯಾಗಿ ರಂಜಿಸುತ್ತಾ ಪ್ರತಿಯೊಂದು ಕ್ಷಣವನ್ನು ಅನುಭವಿಸಲು ಪ್ರಯತ್ನ ಪಡುತ್ತಾರೆ.

ನಾಮಿನೇಟ್ ಆದ ಸ್ಪರ್ದಿಗಳ ಮನಸ್ಸನ್ನು ತಿಳಿಗೊಳಿಸಲು ಬಿಗ್ ಬಾಸ್ ಟಾಸ್ಕ್ ಒಂದನ್ನು ಕೊಡುತ್ತಾರೆ. ಬಾಕ್ಸ್ ಒಂದರಿಂದ್ದ ಮಂಜು ಪಾವಗಡ ಒಂದೊಂದೇ ವಸ್ತುಗಳನ್ನು ತೆಗೆಯುತ್ತಾರೆ. ಆ ವಸ್ತುಗಳು ಮುಳುಗುತ್ತದೋ ತೇಲುತ್ತದೋ ಎಂದು ಊಹಿಸಬೇಕು. ಇದರಲ್ಲಿ ಸರಿಯಾಗಿ ಊಹಿಸಿ ದಿವ್ಯ ಉರುಡುಗ ಗೆಲ್ಲುತ್ತಾರೆ. ವೈಷ್ಣವಿ ಯವರಿಗೆ ಬಿಗ್ ಬಾಸ್ ತಮ್ಮ ವಸ್ತುವೊಂದು ಮನೆಯಲ್ಲಿ ಉಳಿದು ಹೋಗಿದೆ ಮತ್ತು ಅದು ಚಿಕ್ಕದಾಗಿದೆ ಶಬ್ದ ಮಾಡುತ್ತದೆ ಅದನ್ನು ಹುಡುಕಿಕೊಡಿ ಎಂದು ಟಾಸ್ಕ್ ಕೊಡುತ್ತಾರೆ. ಶುಭ ಪುಂಜ ಅವಿತುಕೊಂಡು ಎಲ್ಲರನ್ನು ಹುಡುಕುವಂತೆ ಮಾಡಿ ಎಲ್ಲರನ್ನು ನಗಿಸುತ್ತಾರೆ.

ಮನೆಯ ಸ್ಪರ್ದಿಗಳು ಒಟ್ಟಿಗೆ ಕಾಲಕಳೆಯಲು ಎಲ್ಲಾ ಸ್ಪರ್ದಿಗಳು ಮನೆಯ ಯಾವ ಭಾಗಕ್ಕೆ ಹೋಗಬೇಕಾದರೂ ಕೈ ಕೈ ಹಿಡಿದುಕೊಂಡು ಹೋಗಬೇಕೆಂದು ಸೂಚಿಸುತ್ತಾರೆ. ಎಲ್ಲಾ ಸ್ಪರ್ದಿಗಳು ಒಟ್ಟಿಗೆ ಓಡಾಡಿ ನಗುತ್ತ ಕಾಲ ಕಳೆಯುತ್ತಾರೆ.

ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ನಾಮಿನೇಟ್ ಆದ ಸ್ಪರ್ದಿಗಳು ತಮ್ಮ ವಸ್ತುಗಳೆಲ್ಲವನ್ನು ಪ್ಯಾಕ್ ಮಾಡಿ ಸ್ಟೋರ್ ರೂಮಿನಲ್ಲಿ ಇಡುವುದಕ್ಕೆ ಹೇಳಿದಾಗ ಸ್ಪರ್ದಿಗಳು ಒಬ್ಬರನೊಬ್ಬರು ತಬ್ಬಿಕೊಂಡು ಹಾರೈಸಿಕೊಳ್ಳುತ್ತಾರೆ.

ಒಂದರ ಮೇಲೊಂದು ಟಿನ್ ಗಳನ್ನೂ ಜೋಡಿಸಿಕೊಂಡು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗುತ್ತ ಹೆಚ್ಚು ಟಿನ್ ಗಳನ್ನೂ ಜೋಡಿಸಿಕೊಂಡು ಬೀಳದಂತೆ ಹಾದಿಯನ್ನು ಮುಗಿಸಬೇಕು. ಇದರಲ್ಲಿ ಮಂಜು ಪಾವಗಡ ಅರವಿಂದ್ ನನ್ನ ಸೋಲಿಸುತ್ತಾರೆ.

ಎಲಿಮಿನೇಷನ್ ಪ್ರಕ್ರಿಯೆ ಶುರುವಾದಾಗ ಎಲ್ಲಾ ಸದಸ್ಯರು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಳ್ಳಬೇಕು ಮತ್ತು ನಾಮಿನೇಟ್ ಆದ ಸದಸ್ಯರು ಒಬ್ಬೊಬರು ಟೆಲಿಫೋನ್ ಕರೆ ಬಂದಾಗ ಸ್ವೀಕರಿಸಿ ಮಾತನಾಡಬೇಕು. ಮೊದಲು ಶುಭ ಪೂಂಜಾ ಕರೆಯನ್ನು ಸ್ವೀಕರಿಸಿ ಬಿಗ್ ಬಾಸ್ ಮಾತನಾಡಿ ನೀವು ಸೇಫ್ ಎಂದು ಘೋಷಿಸುತ್ತಾರೆ. ಎರಡನೇ ಬಾರಿ ಪ್ರಶಾಂತ್ ಕರೆ ಸ್ವೀಕರಿಸಿದಾಗ ಬಿಗ್ ಬಾಸ್ “ಮನೆಯ ಮುಖ್ಯ ದ್ವಾರ ಇನ್ನು ಎರಡು ನಿಮಿಷದಲ್ಲಿ ತೆರೆದರೆ ನಿಮ್ಮ ಬಿಗ್ ಬಾಸ್ ಮನೆಯ ಪ್ರಯಾಣ ಮುಗಿದಂತೆ ಎಂದು ತಿಳಿಯಿರಿ” ಎಂದು ಹೇಳಿದಾಗ ಪ್ರಶಾಂತ್ ಬಾವುಕರಾಗುತ್ತಾರೆ. ಆದರೆ ಎರಡು ನಿಮಿಷ ಕಳೆದರೂ ಮನೆಯ ದ್ವಾರ ತೆರೆದುಕೊಳ್ಳುವುದಿಲ್ಲ ಆಗಾಗಿ ಪ್ರಶಾಂತ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಮೂರನೇ ಬಾರಿ ದಿವ್ಯ ಉರುಡುಗ ಕರೆಯನ್ನು ಸ್ವೀಕರಿಸುತ್ತಾರೆ ಮತ್ತು ದ್ವಾರವು ಎರಡು ನಿಮಿಷವಾದರೂ ಮುಚ್ಚಿರುವ ಕಾರಣ ಅವರೂ ಉಳಿದುಕೊಳ್ಳುತ್ತಾರೆ. ಕೊನೆಯದಾಗಿ ಬಿಗ್ ಬಾಸ್ ಶಮಂತ್ ಮತ್ತು ಚಕ್ರವರ್ತಿ ಇಬ್ಬರನ್ನು ದ್ವಾರದ ಬಳಿ ಬರುವಂತೆ ಹೇಳಿ ದ್ವಾರವು ಚಕ್ರವರ್ತಿಗೆ ತೆರೆದು ಮನೆಯಿಂದ ಎಲಿಮಿನೇಟ್ ಆಗುತ್ತಾರೆ.

ಹಗ್ಗ ಜಗ್ಗಾಟದಲ್ಲಿ ದಿವ್ಯ ಸುರೇಶ ಮತ್ತು ವೈಷ್ಣವಿ ಸ್ಪರ್ದಿಸಿ ವೈಷ್ಣವಿ ಗೆಲ್ಲುತ್ತಾರೆ. ಗಂಟೆಗಳನ್ನು ಗ್ಲವ್ಸ್ ಹಾಕಿಕೊಂಡು ಅಡ್ಡ ಪೆಟ್ಟಿಗೆ ಕಟ್ಟುವ ಆಟದಲ್ಲಿ ಪ್ರಶಾಂತ್ ಸಂಭರ್ಗಿ ಮತ್ತು ಶಮಂತ್ ಆಡಿ ಕೊನೆಗೆ ಶಮಂತ್ ಗೆಲ್ಲುತ್ತಾರೆ. ನೆನಪಿನ ಶಕ್ತಿಯ ಆಟದಲ್ಲಿ ದಿವ್ಯ ಉರುಡುಗ ಅರವಿಂದ್ ನನ್ನ ಸೋಲಿಸುತ್ತಾರೆ. ಗೋಲಿ ಆಟದಲ್ಲಿ ಶುಭ ಪುಂಜ ಗೆದ್ದರೆ, ವೈಷ್ಣವಿ ಹಗ್ಗದ ಮೇಲೆ ಹೆಚ್ಚು ಹೊತ್ತು ಬ್ಯಾಲೆನ್ಸ್ ಮಾಡಿ ಗೆಲ್ಲುತ್ತಾರೆ. ಚೆಂಡಿನ ಆಟದಲ್ಲಿ ಮಂಜು ಪಾವಗಡ ಹಾಗು ನೋಟು ತೆಗೆಯುವ ಟಾಸ್ಕಿನಲ್ಲಿ ದಿವ್ಯ ಉರುಡುಗ ಗೆಲ್ಲುತ್ತಾರೆ. ದಿವ್ಯ ಸುರೇಶ ರನ್ನು ಕಳಪೆ ಮತ್ತು ಪ್ರಶಾಂತ್ ಸಂಭರ್ಗಿ ಯನ್ನು ಉತ್ತಮವಾಗಿ ಆಯ್ಕೆ ಮಾಡಿದ ಬಿಗ್ ಬಾಸ್, ಸ್ಪರ್ದಿಗಳು ವಾರದ ಕೊನೆಯವರೆಗೂ ಕಾಯುವುದಕ್ಕಾಗಿ ಸೂಚಿಸುತ್ತಾರೆ. ಈ ವಾರಾಂತ್ಯದಲ್ಲಿ ಸುದೀಪ್ ಸ್ಪರ್ದಿಗಳಿಗೆ ಯಾವ ಟ್ವಿಸ್ಟ್ ಕೊಡ್ದುತ್ತಾರೋ ನೋಡಬೇಕು.

ಸುನಿಲ್ ಗುಂಡೂರಾವ್

ಚಿತ್ರ ಕೃಪೆ: ಕಲರ್ಸ್ ಕನ್ನಡ

Related post

Leave a Reply

Your email address will not be published. Required fields are marked *