ಕಳೆದ ವಾರದ ಬಿಡುವಿಲ್ಲದ ಟಾಸ್ಕ್ ಗಳ ನಡುವೆ ಉಂಟಾದ ಮೋಜು ಮಸ್ತಿ ಹಾಗು ಗಲಾಟೆಗಳು ಬಿಗ್ ಬಾಸ್ 8 ನೇ ಸೀಸನ್ ನನ್ನೂ 100 ದಿನ ದಾಟಿಸಿಯಾಯಿತು. ಹೌದು ಬಿಗ್ ಬಾಸ್ 8 ನೇ ಸೀಸನ್ ಗೆ ಈಗ 100 ದಿನಗಳ ಸಂಭ್ರಮ.
ಸೀಸನ್ 8 ರಲ್ಲಿ ಉಳಿದಿರುವ ಮಿಕ್ಕ ಮೂರು ವಾರಗಳ ನಿಯಮಿತದಿಂದಾಗಿ ಎಲ್ಲಾ ಸ್ಪರ್ದಿಗಳಲ್ಲೂ ಒಂದು ಬಗೆಯ ಆತಂಕ ಎದ್ದು ಕಾಣಿಸುತ್ತಿದೆ. ಆಯೋಜಿಸಿರುವ ಟಾಸ್ಕ್ ಗಳಲ್ಲಿ ಎಲ್ಲಾ ಸ್ಪರ್ದಿಗಳು ತಮ್ಮ ಸಾಮರ್ಥ್ಯವನ್ನು ಮೀರಿ ಆಟವನ್ನು ಆಡುತ್ತಿದ್ದಾರೆ.
ಹಿಂದಿನ ವಾರ ನೆಡೆದ “ವಾರದ ಕಥೆ ಕಿಚ್ಚನ ಜೊತೆ” ಯಲ್ಲಿ ಪ್ರಿಯಾಂಕಾ ಎಲಿಮಿನೇಟ್ ಆಗಿ ಹೊರಹೋಗುವ ಮುನ್ನ ಡಿ ಜೆ ಚಕ್ರವರ್ತಿ ಯನ್ನು ನೇರವಾಗಿ ನಾಮಿನೇಟ್ ಮಾಡುತ್ತಾರೆ. ಇದರಿಂದ ಕೋಪಗೊಂಡ ಡಿ ಜೆ ಚಕ್ರವರ್ತಿ ಎರಡು ಬಾರಿ ಅಶ್ಲೀಲ ಸನ್ನೆಯೊಂದನ್ನು ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಇವರ ಈ ಕೃತ್ಯಕ್ಕೆ ವೀಕ್ಷಕರು ಕುಪಿತಗೊಂಡು ಸಾಮಾಜಿಕ ತಾಣದಲ್ಲಿ ಟೀಕೆ ಮಾಡಿ ಚಕ್ರವರ್ತಿಯನ್ನು ಈ ಕೂಡಲೇ ಮನೆಯಿಂದ ಹೊರಹಾಕಿ ಎಂದು ಆಗ್ರಹಿಸುತ್ತಿದ್ದಾರೆ.
ಈ ವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಕ್ಯಾಪ್ಟನ್ ಶಿಪ್ ಗಾಗಿ ಟಾಸ್ಕಿಗೆ ನಿರಂತರ ಟಾಸ್ಕ್ ಗಳನ್ನೂ ಕೊಡುತ್ತಾರೆ. ಇದರಲ್ಲಿ ಸ್ಪರ್ದಿಗಳು ಆಡಿ ಅಂಕಗಳನ್ನು ಸಂಪಾದಿಸಬೇಕು. ಅಂಕಗಳನ್ನು ಪ್ರದರ್ಶನ ಮಾಡಲಾಗುತ್ತದೆ ಮತ್ತು ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಐದು ಸ್ಪರ್ದಿಗಳನ್ನು ಕ್ಯಾಪ್ಟನ್ ಶಿಪ್ ಟಾಸ್ಕ್ ಗೆ ಅರ್ಹರಾಗುತ್ತಾರೆ.
ವಾರದ ಮೊದಲನೇ ದಿನದ ಟಾಸ್ಕ್ ‘ಚಕ್ರವ್ಯೂಹ’ ಇದರಲ್ಲಿ ಕೋಲನ್ನು ನೆಲದ ಮೇಲೆ ಇಟ್ಟು ವೃತಾಕಾರವಾಗಿ ನಿಲ್ಲಬೇಕು. ಕ್ಯಾಪ್ಟನ್ ವಿಷಲ್ ಮಾಡಿದಾಗ ಕೋಲನ್ನು ಬಿಟ್ಟು ಬಲಬದಿಯಲ್ಲಿ ನಿಂತಿರುವ ಸ್ಪರ್ದಿಗಳ ಕೋಲನ್ನು ಹಿಡಿಯಬೇಕು. ಕೋಲು ಕೆಳಗೆ ಬಿದ್ದರೆ ಔಟ್. ಇದರಲ್ಲಿ ಅರವಿಂದ್ ಹೆಚ್ಚು ಅಂಕವನ್ನು ಪಡೆಯುತ್ತಾರೆ.
ಎರಡನೇ ದಿನ ಪೆಟ್ಟಿಗೆಯೊಂದನ್ನು ಹುಡುಕಿ ಅದರಲ್ಲಿ ಇರುವ ಒಗಟನ್ನು ಬಿಡಿಸಬೇಕಿತ್ತು. ಇದರಲ್ಲಿ ದಿವ್ಯ ಊರುಗ ಮೊದಲನೇ ಸ್ಥಾನವನ್ನು ಪಡೆದು ಹೆಚ್ಚು ಅಂಕಗಳನ್ನು ಪಡೆದರೆ ಮಂಜು ಪಾವಗಡ ಮುಂದಿನ ಸ್ಥಾನವನ್ನು ಪಡೆಯುತ್ತಾರೆ.
‘ಏನಾಗಲಿ ಮುಂದೆ ಹೋಗು ನೀ’ ಟಾಸ್ಕಿನಲ್ಲಿ ಬೆನ್ನಿಗೆ ಗೋಣಿಚೀಲವೊಂದನ್ನು ಹಾಕಿಕೊಂಡು ವೃತ್ತದಲ್ಲಿ ಓಡಬೇಕು ಮತ್ತು ಮುಂದೆ ಇರುವ ಸದಸ್ಯನ ಚೀಲದಲ್ಲಿ ಇರುವ ಥರ್ಮಕೋಲ್ ಬಾಲ್ ಗಳನ್ನೂ ಕಾಲಿಮಾಡಬೇಕು. ಈ ಫಿಸಿಕಲ್ ಟಾಸ್ಕ್ ನಲ್ಲಿ ಸ್ಪರ್ದಿಗಳ ಮದ್ಯೆ ನೂಕಾಟ ತಳ್ಳಾಟ ಮತ್ತು ವಾಗ್ವಾದ ಏರ್ಪಟ್ಟು ಇದರಲ್ಲಿ ಅರವಿಂದ್ ಮೊದಲನೇ ಸ್ಥಾನ ಹಾಗು ದಿವ್ಯ ಊರುಗ ನಂತರದ ಸ್ಥಾನವನ್ನು ಪಡೆಯುತ್ತಾರೆ.
‘ಅಡ್ಡ ದಾರಿ’ ಟಾಸ್ಕಿನಲ್ಲಿ ಅಡ್ಡ ದಿಡ್ಡಿ ಕಟ್ಟಿರುವ ಹಗ್ಗಗಳನ್ನು ದಾಟಿ ಚೆಂಡುಗಳನ್ನು ಯಾರು ಹೆಚ್ಚು ಸಂಗ್ರಹಿಸುತ್ತಾರೋ ಅವರು ಗೆಲ್ಲುತ್ತಾರೆ. ಇದರಲ್ಲಿ ಕೇವಲ ಐದು ಸ್ಪರ್ದಿಗಳು ಮಾತ್ರ ಆಡಬಹುದು. ಯಾವ ಐದು ಸ್ಪರ್ದಿಗಳು ಆಡುತ್ತಾರೆ ಎಂಬ ವಿಷಯದಲ್ಲಿ ಎಲ್ಲರ ಮದ್ಯೆ ಬಿರುಸಿನ ಮಾತಾಗಿ ಇದರಲ್ಲಿ ಅರವಿಂದ್ ಮೊದಲನೇ ಸ್ಥಾನ ಮತ್ತು ಶಮಂತ್ ಎರಡನೇ ಸ್ಥಾನ ಪಡೆದು ಹೆಚ್ಚು ಅಂಕಗಳನ್ನು ಪಡೆದರು.
ವಿಶೇಷ ಟಾಸ್ಕ್ ಆದ ವೃತ್ತ ತಂತ್ರದಲ್ಲಿ ವೃತ್ತದ ಮಧ್ಯಭಾಗದಲ್ಲಿ ಇಟ್ಟಿರುವ ಚೆಂಡನ್ನು ಸದಸ್ಯರು ತಮ್ಮ ಬಳಿಯಿರುವ ಹಗ್ಗಕ್ಕೆ ಕಟ್ಟಿರುವ ಹೋಲ ಹೂಪ್ ಅನ್ನು ಉಪಯೋಗಿಸಿ ತಮ್ಮ ಕಡೆಗೆ ಎಳೆದುಕೊಳ್ಳಬೇಕು. ಪ್ರತಿಯೊಂದು ಚಂಡಿಗೂ ಅಂಕಗಳನ್ನು ಕೊಡಲಾಗುವುದು. ಇದರಲ್ಲಿ ಮಂಜು ಪಾವಗಡ ಮತ್ತು ಶಮಂತ್ ಹೆಚ್ಚು ಅಂಕಗಳನ್ನು ಗಳಿಸುತ್ತಾರೆ.
ಗುರುವಾರದ ಸಂಚಿಕೆಯಾದ ‘ಜೋಳದ ಕಣಜ’ ದಲ್ಲಿ ಕಣಜದಲ್ಲಿ ಸುರಿಯುತ್ತಿರುವ ಜೋಳವನ್ನು ಮತ್ತೆ ಕಣಜಕ್ಕೆ ಸುರಿದು ಅದು ಆಲಿಯಾಗದಂತೆ ನೋಡಿಕೊಳ್ಳಬೇಕು. ಈ ಟಾಸ್ಕಿನಲ್ಲಿ ಅರವಿಂದ್ ಕೆ ಪಿ ಮತ್ತು ಮಂಜು ಪಾವಗಡ ಆಡಿ ಮಂಜು ಗೆದ್ದು ಸಾವಿರದೈನೂರು ಅಂಕಗಳನ್ನು ಪಡೆಯುತ್ತಾರೆ.
‘ಕಾಲಾಯ ತಸ್ಮೈ ನಮಃ’ ಟಾಸ್ಕಿನಲ್ಲಿ ಹಗ್ಗಕ್ಕೆ ಕಟ್ಟಿದ ಬ್ರೆಡ್ ಪೀಸ್ ಅನ್ನು ತಿನ್ನಲು ಕಾಲಿನಲ್ಲಿ ಹಗ್ಗವನ್ನು ಎಳೆದು ಬ್ಯಾಲೆನ್ಸ್ ಮಾಡಬೇಕು. ಇದರಲ್ಲಿ ವೈಷ್ಣವಿಯವರು ಗೆದ್ದು ಸಾವಿರ ಅಂಕಗಳನ್ನು ಸಂಪಾದಿಸಿದರು.
‘ನಾ ನಿನ್ನ ಬಿಡಲಾರೆ’ ಟಾಸ್ಕಿನಲ್ಲಿ ಪ್ಲಾಟ್ಫಾರ್ಮ್ ಮೇಲೆ ನಿಂತ್ತು ಕಂಬಕ್ಕೆ ಕಟ್ಟಿರುವ ಹಗ್ಗವನ್ನು ಬಿಡದೆ ಹಿಡಿದು ನಿಲ್ಲಬೇಕು. ಇದರಲ್ಲಿ ಪ್ರತಿ ನಿಮಿಷಕ್ಕೆ ಮೂರು ಪಾಯಿಂಟ್ ಗಳನ್ನೂ ನೀಡಲಾಯಿತು. ವೈಷ್ಣವಿ ಆರು ತಾಸುಗಳಿಗೂ ಹೆಚ್ಚು ಕಾಲ ನಿಂತು ಅತಿ ಹೆಚ್ಚು ಅಂಕಗಳನ್ನು ಪಡೆದು ಕ್ಯಾಪ್ಟನ್ ಶಿಪ್ ಟಾಸ್ಕಿಗೆ ಆರ್ಹರಾಗಿ ಕೊನೆಗೆ ದಿವ್ಯ ಊರುಗ ಗೆದ್ದು ಕ್ಯಾಪ್ಟನ್ ಆಗುತ್ತಾರೆ.
ಬೆರಳ ಮೂಲಕ ಅಶ್ಲೀಲ ಸನ್ನೆ ಮಾಡಿದ ಚಕ್ರವರ್ತಿಯನ್ನು ಕಿಚ್ಚ ಸುದೀಪ್ ಸರಿಯಾಗೇ ತರಾಟೆಗೆ ತಗೆದುಕೊಂಡಿದ್ದಾರೆ. ಅರ್ಥವಿಲ್ಲದ ವಿವರಣೆ ಕೊಟ್ಟ ಚಕ್ರವರ್ತಿ ಕೊನೆಗೆ ಕಿಚ್ಚ ಸುದೀಪ್ ನ ಮಾತಿಗೆ ತಲೆ ತಗ್ಗಿಸಬೇಕಾಯಿತು.
ಪ್ರಶಾಂತ್, ಸುಮಂತ್, ಶುಭ ಹಾಗು ದಿವ್ಯ ಊರುಗ ಈ ವಾರದ ನಾಮಿನೇಷನಲ್ಲಿ ಇರುವವರು. ಇವರಲ್ಲಿ ಯಾರು ಭಾನುವಾರದ ಸಂಚಿಕೆಯಲ್ಲಿ ಹೊರಹೋಗುತ್ತಾರೋ ಕಾಡು ನೋಡಬೇಕು.
ಸುನಿಲ್ ಗುಂಡೂರಾವ್
ಚಿತ್ರಗಳು : ಗೂಗಲ್ ಕೃಪೆ
1 Comment
Simple and meaningfull article ,keep going